ಸ್ಥಿರಾಸ್ತಿ ಮಾರ್ಗಸೂಚಿ ದರ ಶೇ.35 ಪರಿಷ್ಕರಣೆಗೆ ಸಿದ್ಧತೆ?

Published : Nov 15, 2026, 07:35 AM IST
Documents

ಸಾರಾಂಶ

ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಕಂದಾಯ ಇಲಾಖೆ ಮುಂದಾಗಿದ್ದು, ಹಲವು ತಾಲೂಕುಗಳಲ್ಲಿ ನ.14 ರಂದು ಮಾರ್ಗಸೂಚಿ ದರ ಪರಿಷ್ಕರಣೆ ಕರಡು ಪ್ರಕಟಿಸಿ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು : ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಕಂದಾಯ ಇಲಾಖೆ ಮುಂದಾಗಿದ್ದು, ಹಲವು ತಾಲೂಕುಗಳಲ್ಲಿ ನ.14 ರಂದು ಮಾರ್ಗಸೂಚಿ ದರ ಪರಿಷ್ಕರಣೆ ಕರಡು ಪ್ರಕಟಿಸಿ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ ಕೆಲ ಜಿಲ್ಲೆಗಳ ಕರಡು ಸಿದ್ಧಪಡಿಸುವುದು ಮಾತ್ರ ಬಾಕಿಯಿದ್ದು, ಎಲ್ಲವನ್ನೂ ಪೂರ್ಣಗೊಳಿಸಿ ಆಕ್ಷೇಪಣೆ ಆಲಿಸಿದ ಬಳಿಕ ಡಿ.15ರ ವೇಳೆಗೆ ಮಾರ್ಗಸೂಚಿ ದರವನ್ನು ಶೇ.30 ರಿಂದ 35 ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಈ ಸಂಬಂಧ ಈಗಾಗಲೇ 2026-27ನೇ ಸಾಲಿನ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಅಂತಿಮಗೊಳಿಸಲು ಕೇಂದ್ರ ಮೌಲ್ಯಮಾಪನ ಸಮಿತಿ ಈಗಾಗಲೇ ತಾಲೂಕು ಮಾರುಕಟ್ಟೆ ಮೌಲ್ಯಮಾಪನ ಉಪ ಸಮಿತಿಗಳಿಗೆ ನಿರ್ದೇಶನ ನೀಡಿದೆ. ಇದರಡಿ ಈಗಾಗಲೇ ಕುಣಿಗಲ್‌, ಹುಲಿಯೂರು ದುರ್ಗ ಸೇರಿ ಹಲವು ತಾಲೂಕುಗಳ ಉಪ ನೋಂದಣಿ ಕಚೇರಿಗಳಲ್ಲಿ ಪರಿಷ್ಕೃತ ಮಾರ್ಗಸೂಚಿ ದರಗಳನ್ನು ಅನುಮೋದಿಸಿ ಕರಡು ಪ್ರತಿಯನ್ನು ಪ್ರಕಟಿಸಿ ಆಕ್ಷೇಪಣೆಗೆ ಆಹ್ವಾನ ನೀಡಲಾಗಿದೆ.

ಹುಲಿಯೂರು ದುರ್ಗ ಹಾಗೂ ಕುಣಿಗಲ್‌ನಲ್ಲಿ ನ.14 ರಿಂದ ಡಿ.3 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದೇ ರೀತಿಯ ಎಲ್ಲಾ ತಾಲೂಕುಗಳಲ್ಲೂ ಶೇ.30 ರಿಂದ 35 ರವರೆಗೆ ಗರಿಷ್ಠ ಹಾಗೂ ಶೇ.10 ರಿಂದ 15 ರವರೆಗೆ ಕನಿಷ್ಠ ಮಾರ್ಗಸೂಚಿ ದರ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.

ಕಳೆದ ಮೂರು ವರ್ಷಗಳಿಂದ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಈ ಬಾರಿ ಮಾರ್ಗಸೂಚಿ ದರ ಹೆಚ್ಚಳ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ಆಕ್ಷೇಪಣೆ ಆಲಿಸಿದ ಬಳಿಕವೇ ಅಂತಿಮ ಪ್ರಕಟಣೆ ಮಾಡುತ್ತೇವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ತಿ ನೋಂದಣಿ ವೆಚ್ಚ ಹೆಚ್ಚಳ:

ಆಸ್ತಿಯ ಮಾರ್ಗಸೂಚಿ ದರ ಹೆಚ್ಚಳವಾದರೆ ಆಸ್ತಿ ಖರೀದಿದಾರರಿಗೆ ನೋಂದಣಿ ಮತ್ತು ಮುದ್ರಾಂಕ ವೆಚ್ಚದ ಹೊರೆ ಹೆಚ್ಚಾಗಲಿದೆ. ಪ್ರಸ್ತುತ ಮಾರ್ಗಸೂಚಿ ದರದ ಆಧಾರದ ಮೇಲೆ ಆಸ್ತಿ ಮೌಲ್ಯ ತೋರಿಸಿ ಆಸ್ತಿಯ ಮೌಲ್ಯಕ್ಕೆ ಶೇ.7.6 ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಲಾಗುತ್ತಿತ್ತು. ಇದೀಗ ಮಾರ್ಗಸೂಚಿ ದರ ಶೇ.30 ರಷ್ಟು ಹೆಚ್ಚಾದರೆ ನೋಂದಣಿ ವೆಚ್ಚವೂ ಶೇ.30 ರಷ್ಟು ಹೆಚ್ಚಾಗುವ ಆತಂಕ ಶುರುವಾಗಿದೆ.

- ಕುಣಿಗಲ್‌ ಸೇರಿ ಹಲವು ತಾಲೂಕಲ್ಲಿ ದರ ಪರಿಷ್ಕರಣೆ

- ನಿನ್ನೆ ಮಾರ್ಗಸೂಚಿ ದರ ಪರಿಷ್ಕರಣೆ ಕರಡು ಪ್ರಕಟ

- ಆಕ್ಷೇಪಣೆ ಆಲಿಸಿದ ಬಳಿಕ ಡಿ.15ರ ವೇಳೆಗೆ ದರ ಹೆಚ್ಚಳ

- ಇದರಿಂದ ನೋಂದಣಿ ವೆಚ್ಚ ಶೇ.30ವರೆಗೆ ಏರಿಕೆ ನಿರೀಕ್ಷೆ

ಆಸ್ತಿ ನೋಂದಣಿ ಶುಲ್ಕ ಹೆಚ್ಚಳ ಶಾಕ್‌

- ತಾಲೂಕುಗಳಲ್ಲಿ ಶೇ.30-ಶೇ.35ರವರೆಗೆ ಗರಿಷ್ಠ, ಶೇ.10-15ರವರೆಗೆ ಕನಿಷ್ಠ ಮಾರ್ಗಸೂಚಿ ದರ ಹೆಚ್ಚಳಕ್ಕೆ ತೀರ್ಮಾನ

- 3 ವರ್ಷಗಳಿಂದ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿಲ್ಲ, ಹೀಗಾಗಿ ಈ ಬಾರಿ ದರ ಹೆಚ್ಚಳ ಎನ್ನುತ್ತಿರುವ ಅಧಿಕಾರಿಗಳು

- ಸಾರ್ವಜನಿಕರಿಂದ ಆಕ್ಷೇಪವಣೆ ಆಲಿಸಿದ ಬಳಿಕವೇ ಅಂತಿಮ ಅಧಿಸೂಚನೆ ಪ್ರಕಟಿಸುತ್ತೇನೆ ಎನ್ನುತ್ತಿರುವ ಕಂದಾಯ ಇಲಾಖೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

319 ಕೆಎಎಸ್‌ ಹುದ್ದೆಗೆ ಇಂದು ಕೆಪಿಎಸ್ಸಿ ಪರೀಕ್ಷೆ
ಕೆಪಿಎಸ್‌ಸಿ ಹಗರಣ: ಸಾಹುಕಾರ್ ವಿರುದ್ಧ 580 ಪುಟ ಚಾರ್ಜ್‌ಶೀಟ್