ಎನ್ನಾರೈ ಇಲಾಖೆ ಬದಲು ಹೂಡಿಕೆ ಆಕರ್ಷಣೆಗೆ ಪ್ರತ್ಯೇಕ ಸಚಿವಾಲಯ

Published : Jun 27, 2026, 07:38 AM IST
Money

ಸಾರಾಂಶ

ರಾಜ್ಯದಲ್ಲಿ ‘ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ’ (ಎನ್‌ಆರ್‌ಐ) ಬದಲಿಗೆ ಹೂಡಿಕೆ ಸೆಳೆಯುವ ಹಾಗೂ ಹೂಡಿಕೆದಾರರಿಗೆ ನೆರವಾಗುವ ಸಲುವಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

 ಬೆಂಗಳೂರು :  ರಾಜ್ಯದಲ್ಲಿ ‘ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ’ (ಎನ್‌ಆರ್‌ಐ) ಬದಲಿಗೆ ಹೂಡಿಕೆ ಸೆಳೆಯುವ ಹಾಗೂ ಹೂಡಿಕೆದಾರರಿಗೆ ನೆರವಾಗುವ ಸಲುವಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಅಲ್ಲದೆ, ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲು ಏಕಗವಾಕ್ಷಿ ಪದ್ಧತಿಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನ ಮಾಡಲು ಸಹ ತೀರ್ಮಾನಿಸಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಎನ್‌ಆರ್‌ಐ ಇಲಾಖೆ ಸ್ಥಾಪನೆ ಬಗ್ಗೆ ಪ್ರಸ್ತಾವನೆ ಮಂಡಿಸಲಾಗಿತ್ತು.

ಬಂಡವಾಳ ಸೆಳೆಯಲು ಈ ಕ್ರಮ:

ಆದರೆ ಸಭೆಯಲ್ಲಿ ಎನ್ಆರ್‌ಐ ಬದಲಿಗೆ ಎಲ್ಲಾ ಹೂಡಿಕೆದಾರರನ್ನು ಸೆಳೆಯಲು ಹಾಗೂ ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂಬ ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಎನ್‌ಆರ್‌ಐ ಖಾತೆ ಬದಲಿಗೆ ವಿದೇಶಿ ಹೂಡಿಕೆದಾರರು ಹಾಗೂ ಬೃಹತ್‌ ಹೂಡಿಕೆದಾರರಿಗೆ ನೆರವಾಗಲು ಪ್ರತ್ಯೇಕ ಸಚಿವಾಲಯ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.

ವಿವಿಧ ಇಲಾಖೆಗಳ ಪ್ರತಿನಿಧಿಗಳು

ಸಚಿವಾಲಯದಲ್ಲಿ ಬೃಹತ್ ಕೈಗಾರಿಕೆ, ಐಟಿ-ಬಿಟಿ, ನಗರಾಭಿವೃದ್ಧಿ ಸೇರಿ ವಿವಿಧ ಇಲಾಖೆಗಳ ಪ್ರತಿನಿಧಿಗಳು ಇರಲಿದ್ದಾರೆ. ಹೂಡಿಕೆದಾರರನ್ನು ಗೌರವದಿಂದ ನಡೆದುಕೊಳ್ಳುವುದು. ಅವರಿಗೆ ಸೂಕ್ತ ಸಮಯ ಕಾಯ್ದಿರಿಸುವುದು. ಹೂಡಿಕೆಗೆ ಸಮಸ್ಯೆ ಆಗದಂತೆ ಈಸ್‌ ಆಫ್‌ ಡುಯಿಂಗ್ ಬ್ಯುಸಿನೆಸ್‌ಗೆ ನೆರವಾಗಲು ಸಚಿವಾಲಯ ಕೆಲಸ ಮಾಡಲಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರ್ಕಾರದ ನಿರ್ಧಾರಗಳ ಫೈನಲ್‌ಗೆ ರಾಜಕೀಯ ವ್ಯವಹಾರಗಳ ಸಮಿತಿ
ಓಮಿನಿ ಹಿಂಬದಿ ಬಾಗಿಲು ತೆರೆದು ಕೆಳಗೆ ಬಿದ್ದ ನಾಲ್ಕು ವಿದ್ಯಾರ್ಥಿಗಳು