;Resize=(412,232))
ರಾಮನಗರ : ‘ಬೇಕೋ, ಬೇಡವೋ, ರಾಜ್ಯದಲ್ಲಿ ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಈ ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ’ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ಯಾರಂಟಿ ಬಗ್ಗೆ ಸಚಿವರೇ ಅಪಸ್ವರ ಎತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ವಿಶೇಷ ಚೇತನರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಬೇಕೋ, ಬೇಡವೋ, ನಾವು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಆದರೆ, ಈಗ ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರಿಗೆ ಪರಿಹಾರ ನೀಡಬೇಕು. ಕೊಡದಿದ್ದರೆ ಅವರು ಪ್ರತಿಭಟನೆ ಮಾಡುತ್ತಾರೆ. ಒಂದು ವೇಳೆ ಗ್ಯಾರಂಟಿಗಳನ್ನು ನಿಲ್ಲಿಸಿದರೆ ಜನರು ಪ್ರತಿಭಟನೆ ನಡೆಸುತ್ತಾರೆ. ಗ್ಯಾರಂಟಿಗಳು ಇಲ್ಲದಿದ್ದರೆ ನಮಗೆ ಇದೆಲ್ಲ ಸಮಸ್ಯೆಯೇ ಆಗುತ್ತಿರಲಿಲ್ಲ, ಹೇಗೋ ನಿರ್ವಹಿಸುತ್ತಿದ್ದೇವು. ಗ್ಯಾರಂಟಿಯಿಂದಾಗಿ ನಾವೀಗ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ ಎಂದು ಅವರು ಹೇಳಿದರು.
‘ಗ್ಯಾರಂಟಿ ಯೋಜನೆಗಳು ಇಲ್ಲದಿದ್ದರೆ ಇವೆಲ್ಲಾ ಸಮಸ್ಯೆಗಳೇ ಆಗುತ್ತಿರಲಿಲ್ಲ. ಸರ್ಕಾರದ ಮುಂದೆ ಈಗ ಹಲವು ಸವಾಲುಗಳಿದ್ದು, ಬಜೆಟ್ ಮಿತಿಯೊಳಗೆ ಎಲ್ಲವನ್ನೂ ನಿರ್ವಹಿಸಬೇಕಿದೆ. ನೌಕರರಿಗೆ ಸಂಬಳ, ಅಭಿವೃದ್ಧಿ ಕಾರ್ಯಗಳು ಮತ್ತು ರೈತರಿಗೆ ನೆರವು ಸೇರಿದಂತೆ ವಿವಿಧ ವೆಚ್ಚಗಳನ್ನು ಸರ್ಕಾರ ನಿಭಾಯಿಸಬೇಕಿದೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಇವೆಲ್ಲವನ್ನು ಸಮನ್ವಯಗೊಳಿಸುವುದು ಕಷ್ಟವಾಗಿದೆ ಎಂದು ಸಚಿವರು ವಿಷಾದಿಸಿದರು.
- ಬರಗಾಲದ ಕಾರಣ ರೈತರಿಗೆ ಪರಿಹಾರ ನೀಡಬೇಕು
- ಪರಿಹಾರ ನೀಡದಿದ್ರೆ ಅವರು ಪ್ರತಿಭಟನೆ ಮಾಡ್ತಾರೆ
- ಗ್ಯಾರಂಟಿಗಳನ್ನು ನಿಲ್ಲಿಸಿದರೆ ಜನರು ಪ್ರತಿಭಟಿಸ್ತಾರೆ
- ಗ್ಯಾರಂಟಿಗಳು ಇಲ್ಲದಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ
- ಗ್ಯಾರಂಟಿಯಿಂದಾಗಿ ಸಮಸ್ಯೆಯಲ್ಲಿ ಸಿಲುಕಿ ಒದ್ದಾಟ