ನಿನ್ನೆಯಿಂದಲೇ ಆಲ್ಕೋಹಾಲ್‌ ಅಂಶ ಆಧಾರಿಸಿ ತೆರಿಗೆ ಜಾರಿ!

Published : May 12, 2026, 10:07 AM IST
 alcohol

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಂತೆ ಮದ್ಯದಲ್ಲಿನ ಆಲ್ಕೋಹಾಲ್‌ ಪ್ರಮಾಣ ಆಧರಿಸಿ (ಆಲ್ಕೋಹಾಲ್‌ ಇನ್‌ ಬೀವರೇಜಸ್‌) ತೆರಿಗೆ ವಿಧಿಸುವ ಹೊಸ ಪದ್ಧತಿ ದೇಶದಲ್ಲೇ ಮೊದಲಿಗೆ ಕರ್ನಾಟಕದಲ್ಲಿ ಸೋಮವಾರದಿಂದ ಜಾರಿ

  ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಂತೆ ಮದ್ಯದಲ್ಲಿನ ಆಲ್ಕೋಹಾಲ್‌ ಪ್ರಮಾಣ ಆಧರಿಸಿ (ಆಲ್ಕೋಹಾಲ್‌ ಇನ್‌ ಬೀವರೇಜಸ್‌) ತೆರಿಗೆ ವಿಧಿಸುವ ಹೊಸ ಪದ್ಧತಿ ದೇಶದಲ್ಲೇ ಮೊದಲಿಗೆ ಕರ್ನಾಟಕದಲ್ಲಿ ಸೋಮವಾರದಿಂದ ಜಾರಿಯಾಗಿದ್ದು, ಶ್ರಮಿಕರು ಹೆಚ್ಚಾಗಿ ಬಳಸುವ ಕಡಿಮೆ ಬೆಲೆಯ ಮದ್ಯಗಳು ದುಬಾರಿಯಾಗಿವೆ. ಕಡಿಮೆ ಮಾರಾಟವಾಗುವ ದುಬಾರಿ ಬೆಲೆಯ(ಪ್ರೀಮಿಯಂ) ಮದ್ಯಗಳ ಬೆಲೆ ಸ್ವಲ್ಪ ಇಳಿಕೆಯಾಗಿದೆ.

ಇಲ್ಲಿಯವರೆಗೂ ಬಲ್ಕ್‌ ಲೀಟರ್‌ ಆಧಾರಿತ ತೆರಿಗೆ ಪದ್ಧತಿಯನ್ನು ರಾಜ್ಯದಲ್ಲಿ ಅನುಸರಿಸಲಾಗುತ್ತಿತ್ತು. ಆದರೆ ಇದೀಗ ವಿದೇಶಗಳಲ್ಲಿ ಅನುಸರಿಸುವ ಆಲ್ಕೋಹಾಲ್‌ ಪ್ರಮಾಣ ಆಧರಿಸಿ ತೆರಿಗೆ ವಿಧಿಸುವ ಹೊಸ ಪದ್ಧತಿ ಕರ್ನಾಟಕದಲ್ಲಿ ಜಾರಿಯಾಗಿದೆ. ಕಡಿಮೆ ಬೆಲೆಯ ಮದ್ಯಗಳು ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಮಾರಾಟವಾಗಲಿದ್ದು, ಇವುಗಳ ಬೆಲೆಯಲ್ಲಿ ಶೇ.15 ರಿಂದ 25 ರಷ್ಟು ಹೆಚ್ಚಳವಾಗಿದೆ.

ಹೊಸ ತೆರಿಗೆ ಪದ್ಧತಿಯಿಂದಾಗಿ ಅಬಕಾರಿ ಇಲಾಖೆಗೆ ಅಧಿಕ ಪ್ರಮಾಣದಲ್ಲಿ ರಾಜಸ್ವ ನಿರೀಕ್ಷಿಸಲಾಗಿದೆ. 180 ಎಂಎಲ್‌ ಬಾಟಲನ್ನು ಪರಿಗಣನೆಗೆ ತೆಗೆದುಕೊಂಡರೆ 8 ಪಿಎಂ, ಬ್ಯಾಗ್‌ಪೈಪರ್‌ ವಿಸ್ಕಿ, ಓಲ್ಡ್‌ ಅಡ್ಮಿರಲ್‌ ಮತ್ತು ಎಂಸಿ ರಮ್‌ ಬೆಲೆ ₹30 ಹಾಗೂ ಹೈವಾರ್ಡ್ಸ್, ಒರಿಜಿನಲ್‌ ಚಾಯ್ಸ್‌ ವಿಸ್ಕಿ, ಅಮೃತ್‌ ರಮ್‌ ₹25 ಅಧಿಕವಾಗಿವೆ. ಓಲ್ಡ್‌ ಮಂಕ್‌ ರಮ್‌ ಬೆಲೆಯೂ ₹20 ಹೆಚ್ಚಳವಾಗಿದೆ.

ಪರ್ಮಿಟ್‌ಗೆ ತೊಡಕು:

‘ಹೊಸ ದರ ಸೋಮವಾರದಿಂದಲೇ ಜಾರಿಗೆ ಬಂದಿದ್ದು ಆದರೆ ಹಲವು ಬ್ರಿವರಿಗಳು ದರ ಪಟ್ಟಿಯನ್ನು ರಾಜ್ಯ ಪಾನೀಯ ನಿಗಮಕ್ಕೆ ಸಲ್ಲಿಸದೇ ಇರುವುದರಿಂದ ಕೆಲ ಬ್ರಾಂಡ್‌ಗಳನ್ನು ಖರೀದಿಸಲು ಸೋಮವಾರ ಪರ್ಮಿಟ್‌ನಲ್ಲಿ ಅವಕಾಶವಾಗಲಿಲ್ಲ. 180 ಎಂಎಲ್‌ನ ಮ್ಯಾನ್‌ಷನ್‌ ಹೌಸ್‌ ಬ್ರಾಂಡಿ, ಇಂಪೀರಿಯಲ್‌ ಬ್ಲ್ಯೂ ವಿಸ್ಕಿ ₹20, ಹಂಡ್ರೆಡ್‌ ಪೈಪರ್ಸ್‌ ಡಿಲಕ್ಸ್‌ ವಿಸ್ಕಿ, ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಸ್ಕ್ಯಾಚ್‌ ವಿಸ್ಕಿ ₹65 ಕಡಿಮೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

180 ಎಂಎಲ್‌ ಮದ್ಯ ಮೊದಲಿನ ದರ ಪರಿಷ್ಕೃತ ದರ

ಓಲ್ಡ್‌ ಅಡ್ಮಿರಲ್‌ ಬ್ರಾಂಡಿ 135  - 165

8 ಪಿಎಂ ವಿಸ್ಕಿ 135  - 165

ಬಾಗ್‌ಪೈಪರ್‌ ವಿಸ್ಕಿ 135 - 165

ಹೈವಾರ್ಡ್ಸ್ ವಿಸ್ಕಿ 95 - 120

ಓಲ್ಡ್‌ ಟಾವರಿನ್‌ ವಿಸ್ಕಿ 115  - 145

ಒರಿಜಿನಲ್‌ ಚಾಯ್ಸ್‌ ವಿಸ್ಕಿ 95 - 120

ಅಮೃತ್‌ ರಮ್‌ 95 - 120

ಎಂಸಿ ರಮ್‌ 135 - 165

ಓಲ್ಡ್‌ ಮಂಕ್‌ ರಮ್‌ 155 - 175

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗ್ಯಾಸ್‌ ಟ್ರಬಲ್‌ ಆಯ್ತು, ಬಂಕ್‌ಗಳಲ್ಲಿ ಈಗ ಪೆಟ್ರೋಲ್‌, ಡೀಸೆಲ್‌ ಕೊರತೆ
₹300 ಕೊಟ್ಟು ರೈತನಿಂದ ಹಲಸು ಖರೀದಿಸಿದ ಎಚ್ಡಿಡಿ