ಯುವಕನನ್ನು ಬೆದರಿಸಿ 20 ಲಕ್ಷ ಮೌಲ್ಯದ ಚಿನ್ನ ಸುಲಿಗೆಗೈದ ತೃತಿಯಲಿಂಗಿಗಳ ಸೆರೆ

Published : Oct 31, 2026, 10:25 AM IST
transgenders

ಸಾರಾಂಶ

ಯುವಕನೊಬ್ಬ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯನ್ನು ಬುಕ್‌ ಮಾಡಿದ್ದು, ಯುವತಿಯರ ಸೋಗಿನಲ್ಲಿ ಬಂದಿದ್ದ ಮಂಗಳಮುಖಿಯರು 20 ಲಕ್ಷ ರು. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಚಂದ್ರ ಲೇಔಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಯುವಕನೊಬ್ಬ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯನ್ನು ಬುಕ್‌ ಮಾಡಿದ್ದು, ಯುವತಿಯರ ಸೋಗಿನಲ್ಲಿ ಬಂದಿದ್ದ ಮಂಗಳಮುಖಿಯರು 20 ಲಕ್ಷ ರು. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಚಂದ್ರ ಲೇಔಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪಾದರಾಯನಪುರ ನಿವಾಸಿ ಸೈಯದ್‌ ಮೊಹಸಿನ್‌ (25) ಕುಣಿಗಲ್‌ ಮೂಲದ ನಜೀಯಾ ಶೇಕ್ (25) ಬಂಧಿತ ತೃತೀಯ ಲಿಂಗಿಗಳು. ಅ.22 ರಂದು ಆರೋಪಿಗಳು ದೂರುದಾರನ ಮನೆಯಲ್ಲಿ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನನ್ವಯ ಇಬ್ಬರು ತೃತೀಯ ಲಿಂಗಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಬಾವಿಯಲ್ಲಿ ವಾಸವಿರುವ ದೂರುದಾರರಾದ ರಾಜು

ನಾಗರಬಾವಿಯಲ್ಲಿ ವಾಸವಿರುವ ದೂರುದಾರರಾದ ರಾಜು ಅವರು ತಮ್ಮ ಊರಿಗೆ ಹೋಗುವ ಮುನ್ನ ತಮ್ಮ ಸ್ನೇಹಿತನಾದ ಹರ್ಷವರ್ಧನ್‌ಗೆ ಮನೆಯ ಕೀಯನ್ನು ಕೊಟ್ಟು ಹೋಗಿದ್ದರು. ಆತ ಅ.22 ರಂದು ಡೇಟಿಂಗ್‌ ಆ್ಯಪ್‌ ಮೂಲಕ ಯುವತಿಯನ್ನು ಬುಕ್‌ ಮಾಡಿದ್ದ. ಯುವತಿಯ ಸೋಗಿನಲ್ಲಿ ತೃತೀಯ ಲಿಂಗಿಯೊಬ್ಬರು ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಬಂದಿದ್ದು, ಯುವತಿ ಎಂದು ಭಾವಿಸಿದ ಆತ ಮನೆಯೊಳಗೆ ಕರೆದುಕೊಂಡು ಹೋಗಿದ್ದ.

ಮುಖಕ್ಕೆ ಹಾಕಿದ್ದ ಮಾಸ್ಕ್‌ ತೆಗೆದಾಗ ಆಕೆ ತೃತೀಯ ಲಿಂಗಿ ಎಂಬುದು ಗೊತ್ತಾಗಿದೆ. ನಂತರ ಇಬ್ಬರು ಮಾತನಾಡುತ್ತಿದ್ದಾಗ ಆಕೆ ಫೋನ್‌ ಮಾಡಿ ಮತ್ತೊರ್ವ ತೃತೀಯ ಲಿಂಗಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಮನೆಗೆ ಬಂದ ಆಕೆ ತನ್ನ ಬಳಿ ಇದ್ದ ಚಾಕುವನ್ನು ತೋರಿಸಿ ಹರ್ಷವರ್ಧನ್‌ನನ್ನು ಬೆದರಿಸಿದ್ದಳು. ಮತ್ತೊಬ್ಬಳು ಬೆಡ್‌ರೂಮ್‌ನಲ್ಲಿದ್ದ ಬೀರು ಬಾಗಿಲನ್ನು ಮುರಿದು ಸುಮಾರು 20 ಲಕ್ಷ ರು. ಮೌಲ್ಯದ 226 ಗ್ರಾಂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು.

ಬಳಿಕ ನಡೆದ ವಿಷಯವನ್ನು ಹರ್ಷವರ್ಧನ್‌, ಸ್ನೇಹಿತ ರಾಜುಗೆ ಕರೆ ಮಾಡಿ ತಿಳಿಸಿದ್ದಾನೆ. ಬಳಿಕ ರಾಜು ಠಾಣೆಗೆ ತೆರಳಿ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-ಕೀ ಕೊಟ್ಟು ಊರಿಗೆ ಹೋಗಿದ್ದ ಸ್ನೇಹಿತನ ಮನೆಗೆ ಯುವತಿಯ ಬುಕ್ಕಿಂಗ್

-ಡೇಟಿಂಗ್‌ ಆ್ಯಪ್‌ ಮೂಲಕ ಯುವತಿ ಬುಕ್‌ ಮಾಡಿದ್ದ ಹರ್ಷವರ್ಧನ್‌

-ಯುವತಿ ಸೋಗಲ್ಲಿ ಬಂದ ಮಂಗಳಮುಖಿಯಿಂದ ಚಿನ್ನಾಭರಣ ಸುಲಿಗೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾತ್ರಿ 8ರಿಂದ 10ರವರೆಗಷ್ಟೇ ಪಟಾಕಿಗೆ ಅವಕಾಶ
ಹಾಲು ದರ ಏರಿಕೆಯಿಂದ ಉದ್ಯೋಗ ಸೃಷ್ಟಿ : ಸರ್ಕಾರ