ಕನ್ನಡಪ್ರಭದ ಪ್ರಿಯಾ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಶೋಭಾಗೆ ಪ್ರಶಸ್ತಿ ಕಬ್ಬನ್‌ ಪಾರ್ಕ್‌ ವಾಕರ್ಸ್‌ ಸಂಘ, ಫೋರಂನಿಂದ ಪ್ರದಾನ

ಸಾರಾಂಶ

ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಔಟ್‌ಪುಟ್‌ ಎಡಿಟರ್‌ ಎಂ.ಸಿ.ಶೋಭಾ, ‘ಕನ್ನಡಪ್ರಭ’ದ ಮುಖ್ಯ ಉಪಸಂಪಾದಕಿ ಪ್ರಿಯಾ ಕೆರ್ವಾಶೆ ಸೇರಿದಂತೆ ಹನ್ನೆರಡು ಸಾಧಕಿಯರಿಗೆ ಇಂಟರ್‌ನ್ಯಾಷನಲ್ ವುಮೆನ್ಸ್‌ ಅಚೀವರ್ಸ್‌ ಅವಾರ್ಡ್ಸ್‌, ಯಂಗ್‌ ಅಚೀವರ್ಸ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರು : ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಔಟ್‌ಪುಟ್‌ ಎಡಿಟರ್‌ ಎಂ.ಸಿ.ಶೋಭಾ, ‘ಕನ್ನಡಪ್ರಭ’ದ ಮುಖ್ಯ ಉಪಸಂಪಾದಕಿ ಪ್ರಿಯಾ ಕೆರ್ವಾಶೆ ಸೇರಿದಂತೆ ಹನ್ನೆರಡು ಸಾಧಕಿಯರಿಗೆ ಕಬ್ಬನ್ ಪಾರ್ಕ್ ವಾಕರ್ಸ್‌ ಅಸೋಸಿಯೇಷನ್ ಮತ್ತು ಕಬ್ಬನ್‌ ಪಾರ್ಕ್‌ ವಾಕರ್ಸ್‌ ಫೋರಂನಿಂದ ಇಂಟರ್‌ನ್ಯಾಷನಲ್ ವುಮೆನ್ಸ್‌ ಅಚೀವರ್ಸ್‌ ಅವಾರ್ಡ್ಸ್‌, ಯಂಗ್‌ ಅಚೀವರ್ಸ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕಿಯರಾದ ಡಾ। ಆರತಿ ಕೃಷ್ಣ, ಅಂಜು ಬಾಬಿ ಜಾರ್ಜ್‌, ರೆಬೆಕಾ ಮಾರಿಸ್ಸಾ ಟೇಲರ್‌, ಸೌಮ್ಯಾ ರೆಡ್ಡಿ, ಪ್ರೇಮಾ, ಕಸ್ತೂರಿ ಶಂಕರ್‌, ಆರತಿ, ಗೌರಿ, ಪ್ರಿಯಾ ಕೆರ್ವಾಶೆ, ಡಾ। ಸುಧಾ, ದೀಪ್ತಿ ತೋಳ್ಪಾಡಿ, ಪೃಥ್ವಿ ವೊಕುಡ ಪ್ರಶಸ್ತಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾಧಕರನ್ನು ಗುರುತಿಸುವುದರ ಮೂಲಕ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಸಾಧನೆ ಮಾಡಿಯೂ ಎಲೆಮರೆ ಕಾಯಿಯಂತೆ ಪ್ರಚಾರದಿಂದ ದೂರ ಇರುವವರನ್ನು ಗುರುತಿಸಬೇಕು ಎಂದು ಹೇಳಿದರು.

ಕೃಷ್ಣಭಾಗ್ಯ ಜಲನಿಗದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನ್‌ರಾಜ್‌ ಮಾತನಾಡಿದರು. ಕಬ್ಬನ್ ಪಾರ್ಕ್ ವಾಕರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಪ್ರಾಸ್ತಾವಿಕ ಮಾತನಾಡಿದರು. 

Share this article