ಜುಲೈಗೆ ಹಳದಿ ಮೆಟ್ರೋ ರೈಲು ಜನರ ಸೇವೆಗೆ .. ? ತಿಂಗಳಾಂತ್ಯಕ್ಕೆ 3ನೇ ರೈಲು ಆಗಮನ

Published : Apr 08, 2025, 06:18 AM IST
Namma Metro

ಸಾರಾಂಶ

ಆರ್‌.ವಿ.ರಸ್ತೆ- ಬೊಮ್ಮಸಂದ್ರ ಸಂಪರ್ಕಿಸಲಿರುವ ನಮ್ಮ ಮೆಟ್ರೋದ ಹಳದಿ ಮಾರ್ಗ (19.15 ಕಿ.ಮೀ.) ಜೂನ್‌ ಅಂತ್ಯ ಅಥವಾ ಜುಲೈ ಆರಂಭದಲ್ಲಿ ತನ್ನ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.

 ಬೆಂಗಳೂರು : ಆರ್‌.ವಿ.ರಸ್ತೆ- ಬೊಮ್ಮಸಂದ್ರ ಸಂಪರ್ಕಿಸಲಿರುವ ನಮ್ಮ ಮೆಟ್ರೋದ ಹಳದಿ ಮಾರ್ಗ (19.15 ಕಿ.ಮೀ.) ಜೂನ್‌ ಅಂತ್ಯ ಅಥವಾ ಜುಲೈ ಆರಂಭದಲ್ಲಿ ತನ್ನ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.

ಏಪ್ರಿಲ್‌ ಅಂತ್ಯಕ್ಕೆ ತೀತಾಘರ್‌ ರೈಲ್‌ ಸಿಸ್ಟಂ ಕಂಪನಿಯಿಂದ (ಟಿಆರ್‌ಎಸ್‌ಎಲ್‌) ಎರಡನೇ ಚಾಲಕ ರಹಿತ ಮೆಟ್ರೋ ರೈಲು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಚೀನಾದಿಂದ ಬಂದಿರುವ ಪ್ರೊಟೊಟೈಪ್‌ ರೈಲು ಹಾಗೂ ಜನವರಿಯಲ್ಲಿ ಟಿಆರ್‌ಎಸ್‌ಎಲ್‌ನಿಂದ ಬಂದ ಮೊದಲ ರೈಲು ಸೇರಿ ಸದ್ಯ ಹಳದಿ ಮಾರ್ಗಕ್ಕಾಗಿ ಬಿಎಂಆರ್‌ಸಿಎಲ್‌ ಬಳಿ ಸದ್ಯ ಎರಡು ಸೆಟ್‌ ರೈಲಿದೆ. ಇವೆರಡು ರೈಲುಗಳ ತಪಾಸಣೆ ಪೂರ್ಣಗೊಂಡಿದೆ.

ಹಳದಿ ಮಾರ್ಗದ ಕಾಮಗಾರಿ ಈಗಾಗಲೇ ಪೂರ್ಣವಾಗಿದ್ದು, ಈ ರೈಲುಗಳ ಪ್ರಾಯೋಗಿಕ ಸಂಚಾರ ಪರೀಕ್ಷೆಯೂ ಮುಕ್ತಾಯವಾಗಿದೆ. ಇದೀಗ ಏಪ್ರಿಲ್‌ ಅಂತ್ಯಕ್ಕೆ ಮೂರನೇ ರೈಲು ಆಗಮಿಸಿದ ಬಳಿಕ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡದಿಂದ ತಪಾಸಣೆ ನಡೆಸಿ ವಾಣಿಜ್ಯ ಸಂಚಾರಕ್ಕೆ ಅನುಮತಿ ಪಡೆಯಲಾಗುವುದು. ಬಳಿಕ ಮೂರು ರೈಲುಗಳಿಂದ ಸಂಚಾರ ಆರಂಭಿಸುವ ಗುರಿಯಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಹಳದಿ ಮಾರ್ಗ 16 ನಿಲ್ದಾಣ ಹೊಂದಿದ್ದು, ಆರ್‌.ವಿ.ರಸ್ತೆಯಲ್ಲಿ ಹಸಿರು ಮಾರ್ಗವನ್ನು, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿ ನೀಲಿ ಮಾರ್ಗವನ್ನು ಹಾಗೂ ಜಯದೇವ ಹಾಸ್ಪಿಟಲ್‌ ಮೆಟ್ರೋದಲ್ಲಿ ಇಂಟರ್‌ಚೇಂಜ್‌ ಸಂಪರ್ಕ ಹೊಂದಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...