;Resize=(412,232))
ಬೆಂಗಳೂರು : ‘ಆರ್‌ಎಸ್‌ಎಸ್, ಬಿಜೆಪಿಯವರು ಕೋಮುಗಲಭೆ, ಘರ್ಷಣೆಗಳಿಗೆ ದಲಿತ, ಹಿಂದುಳಿದ ಹಾಗೂ ಬಡ ಯುವಕರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಆರ್‌ಎಸ್‌ಎಸ್, ಬಿಜೆಪಿ ನಾಯಕರ ಮಕ್ಕಳು ಯಾರೂ ಹೋಗಲ್ಲ. ಹೀಗಾಗಿ ಯುವಕರು ದಯವಿಟ್ಟು ಆರ್‌ಎಸ್‌ಎಸ್ ತಂಟೆಗೆ ಹೋಗಬೇಡಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ- ಆರ್‌ಎಸ್‌ಎಸ್‌ನವರು ಮಾಡಿದ ಕೋಮು ಪ್ರಚೋದನೆಯಿಂದ ಎಷ್ಟೋ ಮಂದಿಯ ಮಕ್ಕಳು ಬಲಿಯಾದರು. 22, 25 ಹಾಗೂ 28 ವರ್ಷದ ಮಕ್ಕಳು ತಮ್ಮ ಕುಟುಂಬದಿಂದ ದೂರವಾದರು. ಹೀಗಾಗಿ ಯುವಕರು ದಯವಿಟ್ಟು ಒಂದು ಉದ್ಯೋಗ ಹುಡುಕಿಕೊಂಡು ತಮ್ಮ ಕುಟುಂಬದವರಿಗೆ ನೆರವಾಗಿ. ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್ ತಂಟೆಗೆ ಹೋಗಬೇಡಿ ಎಂದು ಸಲಹೆ ನೀಡಿದರು.
‘ನಿಮ್ಮನ್ನು ಕೋಮುಗಲಭೆ, ಘರ್ಷಣೆಗಳಿಗೆ ಉಪಯೋಗ ಮಾಡಿಕೊಳ್ಳುತ್ತಾರೆ. ಹಿಂದುಳಿದ ವರ್ಗದವರಿಗೆ, ದಲಿತರಿಗೆ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರೇ ಇವರ ಟಾರ್ಗೆಟ್. ಆರ್‌ಎಸ್‌ಎಸ್ ಒಂದು ದಿನವೂ ರೈತರ ಪರ ಪ್ರತಿಭಟನೆ ಮಾಡಿಲ್ಲ. ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಬಿಜೆಪಿ ನಾಯಕರ ಮಕ್ಕಳು ಎಲ್ಲೂ ಪೂರ್ಣ ಪ್ರಮಾಣದ ಪ್ರಚಾರಕರಾಗಿ ಕೆಲಸ ಮಾಡಲ್ಲ. ಶಾಲು ಹಾಕಿಕೊಂಡು ಗೋ ಮೂತ್ರ ಕುಡಿದುಕೊಂಡು, ಖಾಕಿ ಚಡ್ಡಿ ಹಾಕಿಕೊಂಡು ಓಡಾಡುವುದಿಲ್ಲ. ಅಲ್ಲಿ ಬಲಿಯಾಗುತ್ತಿರುವುದು ಬಡವರ ಮಕ್ಕಳು ಎಂದು ದೂರಿದರು.
ಬೆಲೆ ಏರಿಕೆ ಖಂಡಿಸಿಲ್ಲ. ಪ್ರಚೋದನೆ ನೀಡಿ ಯುವಕರ ಬಾಳು ಹಾಳು ಮಾಡುತ್ತಿದೆ. ಈ ರೀತಿ ಹಾಳಾದ ಮಕ್ಕಳಲ್ಲಿ ಯಾರೂ
ಆ ಮಕ್ಕಳ ಮೇಲೆ ಪ್ರಕರಣ ದಾಖಲಾದರೆ ಸಹಾಯಕ್ಕೆ ಯಾರೂ ಬರುವುದಿಲ್ಲ. ನನ್ನ ನಿಂದನೆ ಮಾಡಿದ ಪ್ರಕರಣದಲ್ಲಿ ಆರ್‌ಎಸ್‌ಎಸ್ ಬೆಂಬಲಿಗನಿಗೆ ಕನಿಷ್ಠ ವಕೀಲನನ್ನೂ ಒದಗಿಸಿಲ್ಲ. ಅವರ ತಾಯಿಯ ಮನವಿಯಿಂದ ನಾನೇ ಪ್ರಕರಣ ವಾಪಸು ಪಡೆದೆ. ಅವರು ರಕ್ತ ಪಿಪಾಸುಗಳು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಯುವಕರು ಬೇಕು ಎಂದು ಹಿಂದೆ ಆ ಸಂಘಟನೆಯಲ್ಲಿದ್ದವರೇ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.