‘ಜಿರಳೆ’ ಜತೆ ಯೂಟ್ಯೂಬರ್‌ ಧ್ರುವ್‌ ರಾಠಿ ಮೊದಲ ಬೀದಿ ಹೋರಾಟ

Published : Oct 09, 2026, 06:42 AM IST
'Vote Chor...': Dhruv Rathee's Video From CJP Protest in Bengaluru Goes Viral

ಸಾರಾಂಶ

ಕೇಂದ್ರ ಚುನಾವಣಾ ಆಯೋಗವು ಶೂನ್ಯ ಪಾರದರ್ಶಕತೆ ಮತ್ತು ಶೂನ್ಯ ಹೊಣೆಗಾರಿಕೆ ಹೊಂದಿದೆ ಎಂದು ಖ್ಯಾತ ಯೂಟ್ಯೂಬರ್‌ ಧ್ರುವ್‌ ರಾಠಿ ಆರೋಪಿಸಿದ್ದಾರೆ. ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎಸ್ಐಆರ್‌ ವಿರೋಧಿ ಒಕ್ಕೂಟ, ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ವಿವಿಧ ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ನಡೆದ ‘ಜನತಾ ನ್ಯಾಯಾಲಯ’ ಬೃಹತ್‌ ಪ್ರತಿಭಟನೆ

ಬೆಂಗಳೂರು : ಕೇಂದ್ರ ಚುನಾವಣಾ ಆಯೋಗವು ಶೂನ್ಯ ಪಾರದರ್ಶಕತೆ ಮತ್ತು ಶೂನ್ಯ ಹೊಣೆಗಾರಿಕೆ ಹೊಂದಿದೆ ಎಂದು ಖ್ಯಾತ ಯೂಟ್ಯೂಬರ್‌ ಧ್ರುವ್‌ ರಾಠಿ ಆರೋಪಿಸಿದ್ದಾರೆ.

ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎಸ್ಐಆರ್‌ ವಿರೋಧಿ ಒಕ್ಕೂಟ, ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ವಿವಿಧ ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ನಡೆದ ‘ಜನತಾ ನ್ಯಾಯಾಲಯ’ ಬೃಹತ್‌ ಪ್ರತಿಭಟನೆಯಲ್ಲಿ ಮೊದಲ ಬಾರಿಗೆ ಬೀದಿಗಿಳಿದು ಪಾಲ್ಗೊಂಡ ರಾಠಿ ಕರ್ನಾಟಕದ ಆಯ್ದ 100 ಮತಗಟ್ಟೆಗಳ ಎಸ್ಐಆರ್‌ ಕುರಿತ ತನಿಖಾ ವರದಿ ಬಿಡುಗಡೆಗೊಳಿಸಿ ಮಾತನಾಡಿದರು.

ನಾನು ಸಾಮಾನ್ಯ ನಾಗರಿಕನಾಗಿ ಈ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ನಾನು ಇಲ್ಲಿ ಸರ್ಕಾರ ಬದಲಿಸಲು ಅಥವಾ ಆಡಳಿತ ಬದಲಿಸಲು ಬಂದಿಲ್ಲ. ಎಲಾನ್‌ ಮಸ್ಕ್‌ ಅಥವಾ ಜಾರ್ಜ್‌ ಸೊರೋಸ್‌ ನನಗೆ ಹಣಕಾಸಿನ ನೆರವು ನೀಡಿಲ್ಲ. ನಾನು ನನ್ನ ಸ್ವಂತ ಹಣದಿಂದ ಇಲ್ಲಿಗೆ ಬಂದಿದ್ದೇನೆ ಎಂದರು. ಮತ ಕಳ್ಳನೇ, ಕುರ್ಚಿ ಬಿಟ್ಟು ತೊಲಗಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಆಕ್ರೋಶ ಹೊರ ಹಾಕಿದ ರಾಠಿ, ರಾಜೀನಾಮೆಗೆ ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ನಿಜವಾದ ದೇಶ ಭಕ್ತರು. ಮುಖ್ಯ ಚುನಾವಣಾ ಆಯುಕ್ತರನ್ನು ಸಮರ್ಥಿಸುವವರು ದೇಶವಿರೋಧಿಗಳು ಎಂದು ಟೀಕಿಸಿದರು.

ವೋಟ್‌ ಚೋರಿ ಎಂಬುದು ಕೇವಲ ರಾಜಕೀಯ ಒಲವಲ್ಲ

ವೋಟ್‌ ಚೋರಿ ಎಂಬುದು ಕೇವಲ ರಾಜಕೀಯ ಒಲವಲ್ಲ. ನೀವು ಬಿಜೆಪಿ, ಕಾಂಗ್ರೆಸ್‌ ಅಥವಾ ಬೇರೆ ಯಾವುದೇ ಪಕ್ಷದ ಬೆಂಬಲಿಗರಾಗಿರಿ. ಆದರೆ, ಇದು ದೇಶದ ಪ್ರತಿ ನಾಗರಿಕನಿಗೆ ಸಂಬಂಧಿಸಿದ ವಿಷಯವಾಗಿದೆ. ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಬಂದಿಲ್ಲ. ಈ ವಿಷಯವು ಬಿಜೆಪಿ ಬೆಂಬಲಿಸುವವರಿಗೂ ಮುಖ್ಯವಾಗಬೇಕು ಎಂದು ಹೇಳಿದರು.

ಪ್ರತಿಯೊಬ್ಬರು ಹೋರಾಟ ಬೆಂಬಲಿಸಿ:

ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಇರಬೇಕು ಎಂಬುದನ್ನು ನಂಬುವವರು ನಮ್ಮ ಈ ಹೋರಾಟವನ್ನು ಬೆಂಬಲಿಸಬೇಕು ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಉದಾಹರಣೆಗೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ 70 ಸಾವಿರ ಅಧಿಕೃತ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಚುನಾವಣಾ ಫಲಿತಾಂಶ ಬಂದ ನಂತರ ಅವರನ್ನು ಮತ್ತೆ ಸೇರಿಸಲಾಯಿತು. ಈ ಅಧಿಕೃತ ಮತದಾರರು ಚುನಾವಣಾ ಪೂರ್ವದಲ್ಲಿ ಮತದಾರರ ಪಟ್ಟಿಯಲ್ಲಿ ಇದ್ದರು, ಫಲಿತಾಂಶದ ನಂತರವೂ ಇದ್ದರು. ಆದರೆ, ಮತದಾನದ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ಇರಲಿಲ್ಲ ಎಂದು ತಿಳಿಸಿದರು.

ಶೂನ್ಯ ಹೊಣೆಗಾರಿಕೆ:

ಬಿಹಾರದಲ್ಲಿ ಸುಮಾರು 65 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈ ಮಾಹಿತಿಯನ್ನು ಸಾರ್ವಜನಿಕಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸುವವರೆಗೂ ಚುನಾವಣಾ ಆಯೋಗವು ಬಾಧಿತರಾದವರ ಹೆಸರು ಮತ್ತು ವಿಳಾಸಗಳನ್ನು ಬಹಿರಂಗಪಡಿಸಲಿಲ್ಲ. ಉತ್ತರಪ್ರದೇಶ, ಗೋವಾದಲ್ಲೂ ಇದೇ ಆಗಿದೆ. ಯಾರಾದರೂ ಹೇಳುವವರೆಗೂ ಆಯೋಗವು ಸ್ವಯಂಪ್ರೇರಿತವಾಗಿ ಏನನ್ನೂ ಬಹಿರಂಗಪಡಿಸುವುದಿಲ್ಲ. ಇಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಶೂನ್ಯ ಪಾರದರ್ಶಕತೆ ಮತ್ತು ಶೂನ್ಯ ಹೊಣೆಗಾರಿಕೆ ಇದೆ ಎಂದು ಧ್ರುವ್‌ ರಾಠಿ ಆರೋಪಿಸಿದರು.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಗೆ ಮನಬಂದಂತೆ ಹೆಸರುಗಳನ್ನು ಸೇರಿಸಲಾಗುತ್ತಿದೆ ಮತ್ತು ತೆಗೆಯಲಾಗುತ್ತಿದೆ. ಇದೆಲ್ಲವೂ ಯಾರದೋ ಇಚ್ಛೆಯಂತೆ ನಡೆಯುತ್ತಿದೆ.

-ಧ್ರುವ್ ರಾಠಿ, ಖ್ಯಾತ ಯೂಟ್ಯೂಬರ್‌

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ತಾಯಿಯ ಕೊಲೆ ಮಾಡಿ ಕಥೆ ಕಟ್ಟಿ ಸಿಕ್ಕಿಬಿದ್ದ ಮಗ
1 ಮರಕ್ಕೆ ಬದಲಾಗಿ 10 ಸಸಿಗಳನ್ನು ನೆಡ್ತೀವಿ ಎಂದು ರೈಲು ಬಿಟ್ಟ ಮೆಟ್ರೋ