ಅ.13ರಿಂದ 5 ದಿನ ಯುವ ದಸರಾ: ನಟ ಪ್ರಭುದೇವರಿಂದ ಉದ್ಘಾಟನೆ

Published : Sep 29, 2026, 11:33 AM IST
Actor Prabhudeva

ಸಾರಾಂಶ

ಯುವ ದಸರಾ 2026 ಕಾರ್ಯಕ್ರಮವು ‘ಪ್ರತಿದಿನ ಹೊಸತನ ಸಂಗೀತದ ರಸದೌತಣ’ ಎಂಬ ಧೇಯ್ಯವಾಕ್ಯದೊಂದಿಗೆ ಅ. 13 ರಿಂದ ಅ.17ರವರೆಗೆ ಒಟ್ಟು 5 ದಿನಗಳ ಕಾಲಸಂಜೆ 5.30 ರಿಂದ ರಾತ್ರಿ 10.30ರವರೆಗೆ ವರ್ತುಲ ರಸ್ತೆಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪ ನಡೆಯಲಿದೆ.

ಮೈಸೂರು : ಯುವ ದಸರಾ 2026 ಕಾರ್ಯಕ್ರಮವು ‘ಪ್ರತಿದಿನ ಹೊಸತನ ಸಂಗೀತದ ರಸದೌತಣ’ ಎಂಬ ಧೇಯ್ಯವಾಕ್ಯದೊಂದಿಗೆ ಅ. 13 ರಿಂದ ಅ.17ರವರೆಗೆ ಒಟ್ಟು 5 ದಿನಗಳ ಕಾಲಸಂಜೆ 5.30 ರಿಂದ ರಾತ್ರಿ 10.30ರವರೆಗೆ ವರ್ತುಲ ರಸ್ತೆಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪ ನಡೆಯಲಿದೆ.

ನಟ ಪ್ರಭುದೇವ ಕಾರ್ಯಕ್ರಮ ಉದ್ಘಾಟಿಸುವರು

ಅ.13ರಂದು ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಕಾರ್ಯಕ್ರಮ ಉದ್ಘಾಟಿಸುವರು. ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಖ್ಯಾತ ಕಲಾವಿದರ ಕಾರ್ಯಕ್ರಮಗಳು ಪ್ರತಿದಿನ ರಾತ್ರಿ 7.30 ರಿಂದ 10.30 ರವರೆಗೆ ನಡೆಯಲಿದೆ. ಅ.13 ರಂದು ಹೆಸರಾಂತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸಂಗೀತ ಕಾರ್ಯಕ್ರಮ

ಅ.14 ರಂದು ಸಂಗೀತ ನಿರ್ದೇಶಕ ಮತ್ತು ಗಾಯಕ ಶಂಕರ್- ಎಹಸಾನ್- ಲಾಯ್ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.ಅ.15 ರಂದು ಬಹುಭಾಷ ಗಾಯಕ ಸಿದ್‌ ಶ್ರೀರಾಮ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಅ.16ರಂದು ಸ್ಯಾಂಡಲ್‌ವುಡ್‌ ನೈಟ್ಸ್‌ನಲ್ಲಿ ಶಿವರಾಜ್ ಕುಮಾರ್, ರಚಿತಾ ರಾಮ್, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಅನುರಾಧಾ ಭಟ್‌ ಅವರಿಂದ ಕಾರ್ಯಕ್ರಮ ನಡೆಯಲಿದೆ. ಅ.17ರಂದು ಗಾಯಕರಾದ ಜಾಸ್ಮಿನ್ ಸ್ಯಾಂಡ್ಲಾಸ್ ಅವರಿಂದ ಹಾಗೂ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ದರ್ಶನ್‌ ಕೇಸ್‌: ಮಾಫಿ ಸಾಕ್ಷಿ ಪ್ರದೂಷ್‌ ಹೇಳಿಕೆ
ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವೆಬ್‌ಸೈಟ್‌ ರಾಜ್ಯದಲ್ಲೇ ನಂ.1