ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಸರಕಾರಿ ನೌಕರ ಭವನದಲ್ಲಿ ಬೆಸ್ಕಾಂ ವತಿಯಿಂದ ಆಯೋಜಿಸಲಾಗಿದ್ದ ಬೆಸ್ಕಾಂ ನೌಕರರ ಸುರಕ್ಷತಾ ಜಾಗೃತಿ ಸುರಕ್ಷತಾ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಸುರಕ್ಷತಾ ಪರಿಕರಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ತಾಲೂಕು ಮಟ್ಟದಲ್ಲಿ ಆರು ತಿಂಗಳಿಗೊಮ್ಮೆ ಅಧಿಕಾರಿಗಳು ಮತ್ತು ಲೈನ್‌ಮ್ಯಾನ್‌ಗಳ ಸಭೆಗಳನ್ನು ಆಯೋಜಿಸಿ ನೌಕರರ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ಕೆಲ ದಶಕಗಳ ಹಿಂದೆ ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದು ಉಪಯೋಗ ಕಡಿಮೆಯಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಉಪಯೋಗ ಹೆಚ್ಚಾಗಿ ಉತ್ಪಾದನೆ ಕಡಿಮೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಒಂದರ ಮೇಲೆ ಅವಲಂಬಿತವಾಗದೆ ಇಂದು ಗಾಳಿ, ಜಲ ಹಾಗೂ ಸೌರ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆಗೆ ಒತ್ತು ನೀಡುತ್ತಿದೆ ಎಂದು ತಿಳಿಸಿದರು.
ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಗೌಡ ಮಾತನಾಡಿ, ವಿದ್ಯುತ್ ಅಪಘಾತಗಳಲ್ಲಿ ಸಾರ್ವಜನಿಕರು, ಸಿಬ್ಬಂದಿ ಹಾಗೂ ಪ್ರಾಣಿಗಳು ಸೇರಿದಂತೆ ಎಲ್ಲೆಡೆ ಸಾವು ನೋವುಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯುತ್ ಸುರಕ್ಷತೆ ಹಾಗೂ ಅಪಘಾತಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕಾರ್ಯನಿರ್ವಹಿಸುವಾಗ ಇಲಾಖೆ ನೀಡಿರುವ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಬಳಸಿದರೆ ಇಲಾಖೆ, ಕುಟುಂಬ ಮತ್ತು ಸಮಾಜಕ್ಕೂ ಸಹಕಾರಿಯಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿ ಹಸೀನಾಬಾನು ಮಾತನಾಡಿ, ವಿದ್ಯುತ್ ಅಪಘಾತಗಳಿಂದ ಮರಣಾಂತಿಕ ಘಟನೆಗಳು, ಜಾನುವಾರಗಳ ಅಪಘಾತಗಳು ಹಾಗೂ ಬೆಂಕಿ ಅವಘಡಗಳು ಉಂಟಾಗುವ ಸಾಧ್ಯತೆ ಇದ್ದು, ಅವುಗಳಿಂದ ರಕ್ಷಣೆ ಪಡೆಯುವ ಕುರಿತು ಜಾಗೃತಿ ಅಗತ್ಯವಿದೆ ಎಂದರು. ಬೆಸ್ಕಾಂನ ಎಇಇ ಮನೋಹರ್ ಮಾತನಾಡಿ, ವಿದ್ಯುತ್ ಜೊತೆ ಸಾರ್ವಜನಿಕರ ಸುರಕ್ಷತೆಗೆ, ವೈಯಕ್ತಿಕ ಸುರಕ್ಷತೆ ಅತ್ಯಂತ ಮುಖ್ಯ. ನೌಕರರಿಗೆ ಸರಿಯಾದ ಸುರಕ್ಷತೆ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ. ವಿದ್ಯುತ್‌ಗೆ ಯಾವುದೇ ಕ್ಷಮೆ ಇರುವುದಿಲ್ಲ. ನಮ್ಮ ಸಣ್ಣ ಸಣ್ಣ ನಿರ್ಲಕ್ಷ್ಯದ ಕಾರ್ಯಗಳಿಂದಲೇ ಅಪಘಾತಗಳು ಸಂಭವಿಸುತ್ತವೆ. ತಪ್ಪು ಮಾಡಿದವರಿಗೆ ಶಿಕ್ಷೆ ಅಥವಾ ಕ್ಷಮೆ ಇರಬಹುದು, ಆದರೆ ವಿದ್ಯುತ್‌ಗೆ ಯಾವುದೇ ಕ್ಷಮೆ ಇರುವುದಿಲ್ಲ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಸೋಮಶೇಖರ್ ಗೌಡ, ಮಲ್ಲಣ್ಣ, ಲೆಕ್ಕಾಧಿಕಾರಿ ಕುಮಾರಸ್ವಾಮಿ,ಬಿ.ಟಿ. ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ಕೆಪಿಟಿಸಿಎಲ್ ಉಪಾಧ್ಯಕ್ಷ ವೆಂಕಟರಮಣಪ್ಪ, ಎಇಇ ಹರಿಹರಪ್ಪ ಗಿರೀಶ್, ಶ್ರೀನಿವಾಸ್, ಸ್ಥಳೀಯ ಸಮಿತಿ ಅಧ್ಯಕ್ಷ ವಿನಯ್, ನೇತ್ರಾವತಿ, ಓಂಕಾರ್‌ಮೂರ್ತಿ, ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಬಸವರಾಜು, ಅಂತರಿಕ ಲೆಕ್ಕಪರಿಶೋಧಕರು ಪ್ರಕಾಶ್, ವೇದಮೂರ್ತಿ, ಮಲ್ಲಿಕಾರ್ಜುನ್, ಉಮೇಶ್ ನಾಯಕ್, ಸೇರಿದಂತೆ ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿಯ ಅಧಿಕಾರಿಗಳು, ಸಿಬ್ಬಂದಿ, ನೌಕರರು ಹಾಗೂ ಪವರ್‌ಮ್ಯಾನ್‌ಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯುತ್ ಸುರಕ್ಷತಾ ಜಾಗೃತಿ ಕುರಿತು ವಿಡಿಯೋ ಪ್ರದರ್ಶನದ ಮೂಲಕ ನೌಕರರಿಗೆ ಅರಿವು ಮೂಡಿಸಲಾಯಿತು.