ಬೆಸ್ಕಾಂನಿಂದ ವಿದ್ಯುತ್‌ ಸುರಕ್ಷತಾ ಜನ ಜಾಗೃತಿ ಜಾಥಾ

KannadaprabhaNewsNetwork |  
Published : Jul 02, 2025, 11:52 PM IST
ಮಧುಗಿರಿ ತಾಲೂಕಿನ ಕೊಡಿಗೇನಹಳ್ಲಿಯಲ್ಲಿ ಬೆಸ್ಕಾಂನಿಂದ ವಿದ್ಯುತ್‌ ಸುರಕ್ಷತಾ ಜನ ಜಾಗೃತಿ ಜಾಥಾ ನಡೆಯಿತು.  | Kannada Prabha

ಸಾರಾಂಶ

ಸಾರ್ವಜನಿಕರು ವಿದ್ಯುತ್‌ ತಂತಿಗಳು ಹಾದು ಹೋಗಿರುವ ಕಡೆ ಕಟ್ಟಡಗಳನ್ನು ನಿರ್ಮಿಸಬಾರದು. ವಿದ್ಯುತ್‌ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು,

ಮಧುಗಿರಿ: ಆಗಿಂದಾಗ್ಗೆ ವಿದ್ಯುತ್‌ ಅವಘಡಗಳು ಸಂಭವಿಸುತ್ತಿರುವ ಪರಿಣಾಮ ಸಾರ್ವಜನಿಕರು ಅಂತಹ ಅವಘಡಗಳು ನಡೆದ ಸಂದರ್ಭದಲ್ಲಿ ತಕ್ಷಣ ಸಹಾಯವಾಣಿ 1912ಕ್ಕೆ ಕರೆ ಮಾಡುವಂತೆ ಬೆಸ್ಕಾಂ ಎಇಇ ಕೃಷ್ಣಮೂರ್ತಿ ತಿಳಿಸಿದರು.ತಾಲೂಕಿನ ಕೊಡಿಗೇನಹಳ್ಳಿ ಬೆಸ್ಕಾಂ ಉಪ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿದ್ಯುತ್‌ ಸುರಕ್ಷತಾ ಜನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಾರ್ವಜನಿಕರು ವಿದ್ಯುತ್‌ ತಂತಿಗಳು ಹಾದು ಹೋಗಿರುವ ಕಡೆ ಕಟ್ಟಡಗಳನ್ನು ನಿರ್ಮಿಸಬಾರದು. ವಿದ್ಯುತ್‌ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು, ಮಳೆಗಾಲದಲ್ಲಿ ವಿದ್ಯುತ್‌ ಕಂಬಗಳಿಗೆ ತಂತಿಗಳನ್ನು ಕಟ್ಟಿ ಬಟ್ಟೆಗಳನ್ನು ಒಣಗಿಸಬಾರದು. ದನ ಕರು ಸೇರಿದಂತೆ ಇನ್ನಿತರೆ ಸಾಕು ಪ್ರಾಣಿಗಳನ್ನು ವಿದ್ಯುತ್‌ ಕಂಬದ ವೈರಿಗೆ ಮತ್ತು ಕಂಬಗಳಿಗೆ ಕಟ್ಟಬಾರದು. ಇದರಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಶಾಖಾಧಿಕಾರಿಗಳಾದ ಕೃಷ್ಣಪ್ಪ, ರವಿಶಂಕರ್, ಶಾಂತಕುಮಾರ್‌, ಮಂಜುನಾಥ್‌, ಸಹಾಯಕ ಲೆಕ್ಕಾಧಿಕಾರಿ ಗುಂಡಪ್ಪ ಚಲ್ಲಾರಿ, ಸಂಘದ ಅಧ್ಯಕ್ಷ ಗಂಗಾಧರಪ್ಪ, ಕಾರ್ಯದರ್ಶಿ ತ್ಯಾಗರಾಜು, ಸದಸ್ಯ ಸಂಜೀವಕುಮಾರ್‌, ಶಿವಕುಮಾರ್‌, ಪ್ರವೀಣ್‌ , ಟಿ. ಲಕ್ಷ್ಮೀನಾರಾಯಣ್‌, ಸೊಸೈಟಿ ರಂಗನಾಥ್, ನಾಗಭೂಷಣ್‌, ವೀರನಾಗಪ್ಪ ಹಾಗೂ ಬೆಸ್ಕಾಂ ನೌಕರ ಬಂಧುಗಳು ಜನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ