ಎಚ್.ಎನ್.ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ
ಇಲ್ಲಿನ ತೋಟಗಾರಿಕೆ ಕಚೇರಿಯ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಕಾರಣಕ್ಕೆ ಬೆಸ್ಕಾಂ ಅಧಿಕಾರಿಗಳು ಸಂಪರ್ಕ ಕಡಿತಗೊಳಿಸಿದ್ದು ರೈತರ ತೋಟಗಾರಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮುಂಗಾರು ಪ್ರಾರಂಭವಾಗಿ ಈಗಾಗಲೇ ರೈತರು ಸರ್ಕಾರ ಅನೇಕ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಅದರ ಮಾಹಿತಿ ಪಡೆಯಲು ಕಚೇರಿಗೆ ಬರುತ್ತಾರೆ. ಆದರೆ ಕಚೇರಿಯಲ್ಲಿ ವಿದ್ಯುತ್ ಸಂರ್ಪಕನೇ ಇಲ್ಲದೇ ಪ್ರತಿದಿನ ಕಚೇರಿಯ ಬಾಗಿಲು ನೋಡಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಸಂರ್ಪಕ ಕಡಿತಗೊಂಡಿದ್ದರೂ ಎರಡು ಇಲಾಖೆಗಳ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಬೇಜವಾಬ್ದಾರಿತನ ತೋರಿತ್ತಿರುವುದು ಎದ್ದು ಕಾಣುತ್ತಿದೆ.
ರಾಜ್ಯ ಸರ್ಕಾರ ಬೆಸ್ಕಾಂ ಇಲಾಖೆಯಲ್ಲಿ ಕೆಲ ಬದಲಾವಣೆ ತಂದಿದ್ದು, ಇತ್ತೀಚಿಗೆ ಯಾವುದೇ ಹೊಸ ವಿದ್ಯುತ್ ಸಂರ್ಪಕ ಪಡೆದವರು ಸ್ಮಾಟ್ ಮೀಟರ್ ಅಳವಡಿಸಲಾಗಿದೆ. ಮೊಬೈಲ್ ಸಿಮ್‌ಗೆ ರಿಚಾರ್ಜ್ ಮಾಡುವ ಹಾಗೆ ಸ್ಮಾಟ್ ಮೀಟರ್‌ಗೂ ರಿಚಾರ್ಜ್ ಮಾಡಬೇಕಿದೆ. ಆದರೆ ತಮ್ಮ ಸ್ಮಾರ್ಟ್ ಮೀಟರ್ ರಿಚಾರ್ಜ್ ಮಾಡದೇ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ.ಕೋಟ್.-ಸಾಕಷ್ಟು ರೈತರು ಸಬ್ಸಿಡಿ, ಪರಿಕರಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬರುತ್ತಿದ್ದಾರೆ. ವಿದ್ಯುತ್ ಇಲ್ಲದೆ ಕಂಪ್ಯೂಟರ್ ಕೆಲಸ ಮಾಡುತ್ತಿಲ್ಲ. ತೋಟಗಾರಿಕೆ ಅಧಿಕಾರಿಗಳು ಸ್ಮಾಟ್ ಮೀಟರ್ ರಿಚಾರ್ಜ್ ಮಾಡಿಲ್ಲ ಎಂದು ಹೇಳಲಾಗಿದ್ದು, ನಾನು ಕೂಡ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾದು ಕಾದು ವಾಪಸ್ ಹೋಗುತ್ತಿರುವೆ. - ಈಶ್ವರ್ ತಂಗನಹಳ್ಳಿ ಗ್ರಾಮದ ರೈತ ಆನ್‌ಲೈನ್‌ನಲ್ಲಿ ಹಣ ಕಟ್ಟಲು ನಮಗೆ ಅವಕಾಶ ಇಲ್ಲ. ಬೆಸ್ಕಾಂ ಇಲಾಖೆ ಮೊದಲು ಬಿಲ್ ನೀಡಬೇಕು. ಬಿಲ್ ಬಂದ ನಂತರ ನಾವು ಕೂಡಲೇ ಹಣ ಪಾವತಿ ಮಾಡುತ್ತೇವೆ. ಈ ಸಂಬಂಧ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. ರಾಮಾಂಜಿನಪ್ಪ ತೋಟಗಾರಿಕೆ ಸಹಾಯಕ ನಿರ್ದೇಶಕ------------------ ರಾಜ್ಯಾದಂತ ಬೆಸ್ಕಾಂ ಇಲಾಖೆಯಲ್ಲಿ ಸ್ಮಾಟ್ ಮೀಟರ್ ಅಳವಡಿಕೆ ಮಾಡಲಾಗುತ್ತಿದ್ದು, ಅದರಂತೆ ತೋಟಗಾರಿಕೆ ಕಚೇರಿಗೆ ಸ್ಮಾಟ್ ಮೀಟರ್ ಹಾಕಲಾಗಿದೆ. ಪ್ರತಿ ತಿಂಗಳು ಮೀಟರ್‌ಗೆ ರಿಚಾರ್ಜ್ ಮಾಡಿಕೊಳ್ಳಬೇಕು. ತೋಟಗಾರಿಕೆ ಅಧಿಕಾರಿಗಳು ರಿಚಾರ್ಜ್ ಮಾಡಿದರೆ ವಿದ್ಯುತ್ ತಾನಾಗಿಯೇ ಬರುತ್ತೆ. ಪ್ರಸನ್ನಕುಮಾರ್ ಬೆಸ್ಕಾಂ ಎಇಇ ಕೊರಟಗೆರೆ