ನಿಯಮ ಪಾಲಿಸಿದ ಬೆಸ್ಕಾಂ ಎಇಇ ಲಕ್ಷ್ಮೀಕಾಂತ್ ವರ್ಗಾವಣೆ ಮಾಡಿ

KannadaprabhaNewsNetwork |  
Published : Jul 03, 2025, 11:47 PM IST
03 ದೇವನಹಳ್ಳಿ 01 | Kannada Prabha

ಸಾರಾಂಶ

ಕಟ್ಟಡಗಳಿಗೆ ೫೦೦ ಚದರ ಅಡಿ ಇದ್ದರೆ ಯಾವುದೇ ಓಸಿ, ಸಿಸಿ ಇಲ್ಲದೆ ವಿದ್ಯುತ್ ಸಂಪರ್ಕ ಕೊಡಬಹುದೆಂದು ಸರ್ಕಾರದ ನಿರ್ದೇಶನವಿದ್ದರೂ ಸಹ ದೇವನಹಳ್ಳಿ ಎಇಇ ಲಕ್ಷ್ಮೀಕಾಂತ್ ಪಾಲನೆ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಹಾಗೂ ಗುತ್ತಿಗೆದಾರಿಗೆ ತೊಂದರೆಯಾಗುತ್ತಿದ್ದು ಅವರನ್ನು ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಸುಧಾಕರ್ ತಿಳಿಸಿದ್ದಾರೆ

ಅನುಮತಿ ಪಡೆದ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಸುಧಾಕರ್ ಒತ್ತಾಯ

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಕಟ್ಟಡಗಳಿಗೆ ೫೦೦ ಚದರ ಅಡಿ ಇದ್ದರೆ ಯಾವುದೇ ಓಸಿ, ಸಿಸಿ ಇಲ್ಲದೆ ವಿದ್ಯುತ್ ಸಂಪರ್ಕ ಕೊಡಬಹುದೆಂದು ಸರ್ಕಾರದ ನಿರ್ದೇಶನವಿದ್ದರೂ ಸಹ ದೇವನಹಳ್ಳಿ ಎಇಇ ಲಕ್ಷ್ಮೀಕಾಂತ್ ಪಾಲನೆ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಹಾಗೂ ಗುತ್ತಿಗೆದಾರಿಗೆ ತೊಂದರೆಯಾಗುತ್ತಿದ್ದು ಅವರನ್ನು ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಸುಧಾಕರ್ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಕಳೆದ ಏಪ್ರಿಲ್‌ 4ರ ಹಿಂದೆ ನೋಂದಣೆಯಾಗಿರುವ ವಿದ್ಯುತ್ ಸಂಪರ್ಕದ ಅರ್ಜಿಗಳನ್ನು ವಿಲೇ ಮಾಡಬೇಕು. ಒಪ್ಪಂದದ ಆದಾರದ ಮೇಲೆ ವಿದ್ಯುತ್ ಸಂಪರ್ಕ ನೀಡುವುದಾಗಿ ಅಗ್ರಿಮೆಂಟ್ ಮಾಡಿದ್ದಾರೆ. ಆ ನಿಯಮ ಪಾಲಿಸುತ್ತಿಲ್ಲ. ಕೇಳಿದರೆ ಹೊಸದಾಗಿ ಓಸಿ, ಸಿಸಿ ತಂದುಕೊಡಿ ಎನ್ನುತ್ತಾರೆ. ಕಂದಾಯ ಇಲಾಖೆಗೆ ಸಂಬಂದಿಸಿದ ಕಾನೂನು ಬಾಹಿರವಾಗಿ ಕಟ್ಟಡಗಳು ಕಟ್ಟಿದರೆ ಬೆಸ್ಕಾಂ ಇಲಾಖೆಗೆ ಏನು ಸಮಸ್ಯೆ, ನಾವು ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ ಠೇವಣೆ ಹಣ ಕಟ್ಟಿದ್ದೇವೆ. ಗ್ರಾಹಕರು ಗುತ್ತಿಗೆದಾರರ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದಾರೆ. ಈ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು.

ದೇವನಹಳ್ಳಿ ಬೆಸ್ಕಾಂ ಎಇಇ ಲಕ್ಷ್ಮೀಕಾಂತ್ ೩ ಗಂಟೆ ನಂತರ ಸಾರ್ವಜನಿಕರ ಸಂಪರ್ಕಕ್ಕೆ ಲಭ್ಯವಿರುವುದಾಗಿ ಕಚೇರಿಯಲ್ಲಿ ನಾಮಫಲಕ ಅಳವಡಿಸಿದ್ದಾರೆ. ಆದರೆ ಅವರು ಮಾತ್ರ ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಸಾರ್ವಜನಿಕರು ಸಮಸ್ಯೆಗಳಿಗೆ ಅಲೆದಾಡಬೇಕಿದೆ. ವಿದ್ಯುತ್ ಅಪಘಾತಗಳ ಬಗ್ಗೆ ಸಾರ್ವಜನಿಕರಾಗಲಿ ಗುತ್ತಿಗೆದಾರರಾಗಲಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಪ್ರತಿ ತಿಂಗಳು ಸಾರ್ವಜನಿಕರ ಕುಂದುಕೊರತೆ ಸಭೆ ಮಾಡಬೇಕು. ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿ ಕುಂದುಕೊರತೆ ಸಭೆಗೆ ಸಾರ್ವಜನಿಕರನ್ನು ಆಹ್ವಾನಿಸಬೇಕು. ಕುಂದುಕೊರತೆ ಸಭೆ ನಡೆಸದೆ ಕಚೇರಿಯಲ್ಲಿ ಯಾರನ್ನಾದರು ಕೂರಿಸಿ ಪೊಟೋ ತೆಗೆದು ಕುಂದುಕೊರತೆ ಸಭೆ ನಡೆಸಿದ್ದೇವೆಂದು ಮೇಲಧಿಕಾರಿಗಳಿಗೆ ಕಳುಹಿಸುತ್ತಿದ್ದಾರೆ ಈ ರೀತಿಯಾದರೆ ಸಾರ್ವಜನಿಕರು ಸಮಸ್ಯೆ ಬಗೆಹರಿಸಿಕೊಳ್ಳುವುದಾದರೂ ಹೇಗೆ ಎಂದರು. ಇತ್ತೀಚಿನ ದಿನಗಳಲಿ ವಿದ್ಯುತ್ ಅಪಘಾತ ಸಮಸ್ಯೆ ಇದ್ದರೂ ಗಮನಹರಿಸುತ್ತಿಲ್ಲ. ಸಾರ್ವಜನಿಕರ ಕೆಲಸ ಅಧಿಕಾರಿಗಳೇ ಮಾಡಿ ಸರ್ಕಾರಕ್ಕೆ ಬರುವ ಆದಾಯವು ಸಹ ನಷ್ಟವಾಗುತ್ತಿದೆ. ಈ ವಿಚಾರವಾಗಿ ನಾವು ದೂರು ನೀಡುತ್ತೇವೆ. ಬೆಸ್ಕಾಂ ಎಇಇ ೨ ವರ್ಷ ಪೂರೈಸಿದ್ದು ಮತ್ತೆ ಇಲ್ಲೇ ಟಿಕಾಣಿ ಹೂಡಲು ಮಂತ್ರಿಗಳ ಮನೆಬಾಗಿಲು ತಟ್ಟುತ್ತಿದ್ದಾರೆ. ಸಾರ್ವಜನಿಕರು ಹಾಗೂ ಗುತ್ತಿಗೆದಾರರ ಸಮಸ್ಯೆ ಬಗೆಹರಿಸದೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟುಮಾಡುತ್ತಿರುವ ಅಧಿಕಾರಿಯನ್ನು ಬೆರೆಡೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ದೇವನಹಳ್ಳಿ ತಾಲೂಕು ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಬೈರೇಗೌಡ, ಉಪಾಧ್ಯಕ್ಷರಾದ ನಾಗರಾಜ್, ರಾಜಣ್ಣ, ಸಂಘಟನಾ ಕಾರ್ಯದರ್ಶಿ ಮದನ್, ಜಂಟಿ ಕಾರ್ಯದರ್ಶಿ ರವೀಶ್, ಬೋಮ್ಮವಾರ, ಮಂಜುನಾಥ್ ಸಂಘದ ಸದಸ್ಯರು ಇದ್ದರು.

೦೩ ದೇವನಹಳ್ಳಿ ಚಿತ್ರಸುದ್ದಿ: ೦೧

ದೇವನಹಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಸುಧಾಕರ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಮ್ಮ ಜತೆ ಚರ್ಚೆಗೆ ಬಿಎಂಟಿಸಿ ಎಂಡಿ ಸಾಕು: ರೆಡ್ಡಿ ಕಿಡಿ
ಖಾತರಿ ಹೆಸರು ಬದಲಿಸಿದಾಕ್ಷಣ ಜನ ಗಾಂಧಿ ಮರೆಯಲ್ಲ