ಶಿವ ಸಹಕಾರ ಬ್ಯಾಂಕ್‌ಗಳಿಂದ ಉತ್ತಮ ವ್ಯವಹಾರ: ಸಿರಿಗೆರೆ ಜಗದ್ಗುರು

KannadaprabhaNewsNetwork |  
Published : Feb 18, 2024, 01:34 AM IST
ನೂತನ ಶಿವ ಸಹಕಾರಿ ಬ್ಯಾಂಕ್ ಉದ್ಘಾಟನೆ. | Kannada Prabha

ಸಾರಾಂಶ

ಶಿವ ಸಹಕಾರ ಬ್ಯಾಂಕ್‌ಗಳು ಉತ್ತಮವಾಗಿ ವ್ಯವಹಾರ ನಡೆಸುತ್ತಿದ್ದು, ಉತ್ತಮ ಲಾಭಾಂಶದೊಂದಿಗೆ ಇತರ ಬ್ಯಾಂಕ್‌ಗಳಿಗಿಂತ ಉತ್ತಮ ಎನ್‌ಪಿಎ ಹೊಂದಿ ಸುಸ್ಥಿತಿಯಲ್ಲಿದೆ ಎಂದು ಹೇಳಲು ಸಂತಸವಾಗುತ್ತದೆ. ಬ್ಯಾಂಕುಗಳು ಉತ್ತಮವಾಗಿ ಮುನ್ನಡೆಯಬೇಕು. ಹೀಗಾಗಲು ಜಗಜ್ಯೋತಿ ಬಸವಣ್ಣ ಹೇಳಿದಂತೆ ಶಿವಭಕ್ತರಿರಬೇಕು. ಶಿವಭಕ್ತರು ಎಂದೂ ಸುಳ್ಳನ್ನು ಹೇಳುವದಿಲ್ಲ. ಅವರಿಗೆ ಸಾಲ ಕೊಡುವುದರಿಂದ ಬ್ಯಾಂಕು ಒಳ್ಳೆಯ ಸ್ಥಿತಿಯಲ್ಲಿ ಇರಲು ಸಾಧ್ಯ ಎಂದು ಶಿರಾಳಕೊಪ್ಪದಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಶಿರಾಳಕೊಪ್ಪ: ಶಿವ ಸಹಕಾರ ಬ್ಯಾಂಕ್‌ಗಳು ಉತ್ತಮವಾಗಿ ವ್ಯವಹಾರ ನಡೆಸುತ್ತಿದ್ದು, ಉತ್ತಮ ಲಾಭಾಂಶದೊಂದಿಗೆ ಇತರ ಬ್ಯಾಂಕ್‌ಗಳಿಗಿಂತ ಉತ್ತಮ ಎನ್‌ಪಿಎ ಹೊಂದಿ ಸುಸ್ಥಿತಿಯಲ್ಲಿದೆ ಎಂದು ಹೇಳಲು ಸಂತಸವಾಗುತ್ತದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಗುರುವಾರ ಸಂಜೆ ನೂತನ ಶಿವ ಸಹಕಾರ ಬ್ಯಾಂಕ್ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕುಗಳು ಉತ್ತಮವಾಗಿ ಮುನ್ನಡೆಯಬೇಕು. ಹೀಗಾಗಲು ಜಗಜ್ಯೋತಿ ಬಸವಣ್ಣ ಹೇಳಿದಂತೆ ಶಿವಭಕ್ತರಿರಬೇಕು. ಶಿವಭಕ್ತರು ಎಂದೂ ಸುಳ್ಳನ್ನು ಹೇಳುವದಿಲ್ಲ. ಅವರಿಗೆ ಸಾಲ ಕೊಡುವುದರಿಂದ ಬ್ಯಾಂಕು ಒಳ್ಳೆಯ ಸ್ಥಿತಿಯಲ್ಲಿ ಇರಲು ಸಾಧ್ಯ ಎಂದರು.

ಮುಖ್ಯ ಅತಿಥಿ, ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿರಾಳಕೊಪ್ಪ ಪುರಸಭೆಯಾಗಿ ಬೆಳೆಯುತ್ತಿರುವ ಪಟ್ಟಣ ವಾಗಿದೆ. ಇಲ್ಲಿ ಏನೋ ಕೊರತೆ ಇದೆ ಎಂದು ಅನಿಸುತ್ತಿತ್ತು. ಆದರೆ, ಇಂದು ಜಗದ್ಗುರು ಅವರು ಇಲ್ಲಿ ಶಿವ ಸಹಕಾರ ಬ್ಯಾಂಕ್ ಶಾಖೆ ಪ್ರಾರಂಭಿಸಿ, ಆ ಕೊರತೆಯನ್ನು ಹೋಗಲಾಡಿಸಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಎನ್. ಮಹಾಲಿಂಗಪ್ಪ ಮಾತನಾಡಿದರು. ಸಭೆಯಲ್ಲಿ ಬ್ಯಾಂಕ್‌ ಅಧ್ಯಕ್ಷ ಗಂಗಾಧರಪ್ಪ ಹಾಗೂ ನಿರ್ದೇಶಕ ಪರಮೇಶ್ವರಪ್ಪ ಅವರು ಬ್ಯಾಂಕು ಬೆಳದು ಬಂದ ಬಗ್ಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷ ಚಂದ್ರಕುಮಾರ್, ಈಶ್ವರಪ್ಪ ಗೌಡ, ಪ್ರಧಾನ ವ್ಯವಸ್ಥಾಪಕ ಬಸವರಾಜಪ್ಪ ಇದ್ದರು. ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

- - -

-16ಕೆಎಸ್.ಎಚ್ ಆರ್1:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆ, ಬಾಗಲಕೋಟೆ ಕ್ಷೇತ್ರ ನಮ್ದೆ : ಡಿ.ಕೆ.ಶಿವಕುಮಾರ್‌
ಟಿಬಿ ಡ್ಯಾಂ ಹಿನ್ನೀರಿನ ಕೈಗಾರಿಕೆ ಲೈಸೆನ್ಸ್‌ ರದ್ದತಿಗಾಗಿ ಹೋರಾಟ