ತಾಪಂ ಇಒ ವೀರಣ್ಣ ವಾಲಿಗೆ ಬೆಸ್ಟ್‌ ಇಂಜಿನಿಯರ್‌ ಅವಾರ್ಡ್‌

KannadaprabhaNewsNetwork |  
Published : Sep 23, 2025, 01:06 AM IST
ಕಾಗವಾಡ | Kannada Prabha

ಸಾರಾಂಶ

ಕಾಗವಾಡ ತಾಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಮೂರು ಜನ ಸರಕಾರಿ ಹಾಗೂ ಇಬ್ಬರು ಖಾಸಗಿ ಇಂಜಿನಿಯರುಗಳನ್ನು ಗುರುತಿಸಿ ಐದು ಜನರಿಗೆ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಕಾಗವಾಡ

ತಾಲೂಕು ಪಂಚಾಯಿತಿ ಹಾಗೂ ಅಥಣಿ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಕಳೆದ ಹಲವು ವರ್ಷಗಳಿಂದ ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಮುಟ್ಟಿಸುವ ಮೂಲಕ ಜನಮನಗೆದ್ದಿರುವ ವೀರಣ್ಣ ವಾಲಿಗೆ ಪ್ರಸಕ್ತ ಸಾಲಿನ ಅಥಣಿ ತಾಲೂಕು ಬೆಸ್ಟ್ ಇಮಿನೆಂಟ್ ಇಂಜಿನಿಯರ್‌ ಅವಾರ್ಡ್‌ ನೀಡಿ ಗೌರವಿಸಲಾಗಿದೆ.

ಇತ್ತೀಚಿಗೆ ಅಥಣಿ ಪಟ್ಟಣದಲ್ಲಿ ತಾಲೂಕಿನ ಇಂಜಿನಿಯರ್‌ ಅಸೋಸಿಯೇಷನ್‌ ಹಾಗೂ ಗುತ್ತಿಗೆದಾರರ ಸಂಘದ ಆಶ್ರಯದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ 165ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಮೂರು ಜನ ಸರಕಾರಿ ಹಾಗೂ ಇಬ್ಬರು ಖಾಸಗಿ ಇಂಜಿನಿಯರುಗಳನ್ನು ಗುರುತಿಸಿ ಐದು ಜನರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದರಲ್ಲಿ ಕಾಗವಾಡ ತಾಪಂ ಇಒ ವೀರಣ್ಣ ವಾಲಿ, ಪ್ರವೀಣ ಹುಣಸಿಕಟ್ಟಿ, ಗುರುರಾಜ ಸಂಪನ್ನರವ ಹಾಗೂ ಇಬ್ಬರು ಖಾಸಗಿ ಇಂಜನಿಯರುಗಳಾದ ಶಿವಲಿಂಗ ಗಲಗಲಿ, ಎಂ.ಬಿ.ಪಾಟೀಲಗೆ ಶಾಸಕ ಲಕ್ಷ್ಮಣ ಸವದಿ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಮುಖ್ಯ ಅತಿಥಗಳಾಗಿ ಧಾರವಾಡ ಐಐಟಿ ಉಪನ್ಯಾಸಕ ಡಾ.ಅನೀಕೇತ ಕಟವರೆಮಾತನಾಡಿದರು. ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಇಂಜನಿಯರ ನಾಗರಾಜ ಬಿ.ಎ, ಅಧ್ಯಕ್ಷತೆ ವಹಿಸಿದ್ದರು.ಅಭಿಯಂತರ ರವೀಂದ್ರ ಮುರಗಾಲಿ ರಾಜಶೇಖರ ಟೋಪಗಿ, ರಾಜು ಆಲಬಾಳ, ಸಂಜೀವ ಕುಲಕರ್ಣಿ,ಶ್ರೀಧರ ಚವ್ಹಾನ, ಜಯಾನಂದ ಹಿರೇಮಠ, ಶೇಖರ ಕರಬಸಪ್ಪಗೊಳ ಸೇರಿದಂತೆ ಇಂಜನಿಯರು ಹಾಗೂ ಗುತ್ತೆಗೆದಾರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಮಾತನಾಡಿದರು.

ನಮ್ಮ ತಾಲೂಕಿನಲ್ಲಿರುವ ಇಂಜಿನಿಯರುಗಳು ಉತ್ತಮ ರೀತಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸ ತಂದಿದೆ. ಅಥಣಿಯಲ್ಲೊಂದು ಇಂಜಿನಿಯರಿಂಗ್‌ ಕಾಲೇಜು ನಿರ್ಮಿಸುವ ಬಗ್ಗೆ ವೀರಣ್ಣ ವಾಲಿ ಪ್ರಸ್ತಾವನೆ ಮಾಡಿದ್ದು, ಅದಕ್ಕಾಗಿಯೇ 50 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಸೂಕ್ತ ಸಮಯದಲ್ಲಿ ಕಾಲೇಜು ಪ್ರಾರಂಭಿಸಲಾಗುವುದು ಹಾಗೂ ಇಂಜಿನಿಯರ್‌ ಭವನ ನಿರ್ಮಿಸಲು ಸರ್ಕಾರದ ಸೌಲಭ್ಯ ಕೊಡಿಸಲಾಗುವುದು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ