ಉತ್ತಮ ವಾತಾವರಣ: ಯೋಗೇಶ್ವರ್

KannadaprabhaNewsNetwork |  
Published : Nov 14, 2024, 12:49 AM IST
ಪೊಟೋ೧೩ಸಿಪಿಟಿ೧: ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಮತ ಚಲಾಯಿಸಿದ ಯೋಗೇಶ್ವರ್ ದಂಪತಿ. | Kannada Prabha

ಸಾರಾಂಶ

ಚನ್ನಪಟ್ಟಣ: ನನ್ನ ಹುಟ್ಟೂರು ಚಕ್ಕರೆಯಲ್ಲಿ ಮತದಾನ ಮಾಡಿದ್ದೇನೆ. ಕ್ಷೇತ್ರಾದ್ಯಂತ ನನ್ನ ಪರವಾದ ವಾತಾವರಣ ಇದೆ. ಮತದಾರರು ಸರ್ಕಾರದ ಪರ ಇದ್ದಾರೆ ಎಂಬ ಭಾವನೆ ಮೂಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಚನ್ನಪಟ್ಟಣ: ನನ್ನ ಹುಟ್ಟೂರು ಚಕ್ಕರೆಯಲ್ಲಿ ಮತದಾನ ಮಾಡಿದ್ದೇನೆ. ಕ್ಷೇತ್ರಾದ್ಯಂತ ನನ್ನ ಪರವಾದ ವಾತಾವರಣ ಇದೆ. ಮತದಾರರು ಸರ್ಕಾರದ ಪರ ಇದ್ದಾರೆ ಎಂಬ ಭಾವನೆ ಮೂಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮತಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜನ ಎಲ್ಲ ಕಡೆ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಈ ಚುನಾವಣೆ ನನಗೆ ಆಶಾದಾಯಕವಾಗಿ ಕಂಡುಬರುತ್ತಿದೆ ಎಂದರು.

ಮತ ಚಲಾಯಿಸುವ ಮೂಲಕ ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡುವಂತೆ ನಾವು ಸಹ ಪ್ರಚಾರ ವೇಳೆ ಮನವಿ ಮಾಡಿದ್ದೆವು. ನೌಕರರಿಗೆ ಹೋಗುವವರು ಎಲ್ಲರೂ ಬೆಳಗ್ಗೆಯೇ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಉಪಚುನಾವಣೆಯಾದ ಹಿನ್ನೆಲೆಯಲ್ಲಿ ಎಲ್ಲರೂ ಅತ್ಯುತ್ಸಾಹದಿಂದ ಮತ ಚಲಾಯಿಸಿದ್ದಾರೆ ಎಂದರು. ಪೊಟೋ೧೩ಸಿಪಿಟಿ೧:

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚಕ್ಕೆರೆ ಸ್ವಗ್ರಾಮದಲ್ಲಿ ಮತ ಚಲಾಯಿಸಿದ ಯೋಗೇಶ್ವರ್ ದಂಪತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌