ಕನ್ನಡಪ್ರಭ ವಾರ್ತೆ ಕುಮಟಾ
ಸಮರ್ಪಕವಾಗಿ ಕೈತೊಳೆಯುವ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಟ್ಟಣದ ನೆಹರುನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಕುಮಟಾ ಕೆನರಾ ಲೆಜಿನ್ ವತಿಯಿಂದ ಕೈ ತೊಳೆಯುವ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಬೂನು ಮತ್ತು ನೀರಿನಿಂದ ಸರಿಯಾಗಿ ಕೈ ತೊಳೆಯುವುದರಿಂದ ಅತಿಸಾರದ ಪ್ರಕರಣಗಳು ಶೇ.೨೩ರಿಂದ ೪೦ರಷ್ಟು ಹಾಗೂ ಸಾಮಾನ್ಯ ಉಸಿರಾಟದ ಸೋಂಕುಗಳು ಶೇ.೧೬ರಿಂದ ೨೧ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಶಾಲಾ ಮಕ್ಕಳಲ್ಲಿ ಜಠರ-ಕರುಳಿನ ಕಾಯಿಲೆಯಿಂದಾಗುವ ಗೈರುಹಾಜರಿಯೂ ಶೇ.೨೯ರಿಂದ ೫೭ರಷ್ಟು ಕಡಿಮೆಯಾಗಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಜಗತ್ತಿನಲ್ಲಿ ಪ್ರತಿವರ್ಷ ಸುಮಾರು ೧.೭ ಬಿಲಿಯನ್ ಮಕ್ಕಳಲ್ಲಿ ಅತಿಸಾರದ ಪ್ರಕರಣಗಳು ವರದಿಯಾಗುತ್ತವೆ, ಆದರೆ ಕೈಗಳ ಸ್ವಚ್ಛತೆಯಿಂದ ಮಕ್ಕಳಲ್ಲಿ ಅತಿಸಾರ ಶೇ.೩೧ರಷ್ಟು ಕಡಿಮೆಯಾಗಿರುವುದು ಕೂಡಾ ಅಧ್ಯಯನಗಳು ಸಾಬೀತುಪಡಿಸಿವೆ ಎಂದರು. ತಮ್ಮ ವಾತಜಾತಾ ಫಾರ್ಮಾ ಕಂಪನಿಯಿಂದ ಎಲ್ಲರಿಗೂ ಹ್ಯಾಂಡ್‌ವಾಶ್ ಲಿಕ್ವಿಡ್ ಉಚಿತವಾಗಿ ವಿತರಿಸಿದರು.ನಿಯೋಜಿತ ರಾಷ್ಟ್ರೀಯ ತರಬೇತುದಾರ ಗಣೇಶ ಭಟ್, ೨೦೨೩ರಲ್ಲಿ ಜಗತ್ತಿನಾದ್ಯಂತ ಸುಮಾರು ೬೪೬ ಮಿಲಿಯನ್ ಶಾಲಾ ಮಕ್ಕಳಿಗೆ ಶಾಲೆಯಲ್ಲಿ ನೀರು ಮತ್ತು ಸಾಬೂನಿನೊಂದಿಗೆ ಮೂಲಭೂತ ಕೈತೊಳೆಯುವ ಸೌಲಭ್ಯವಿರಲಿಲ್ಲ ಎಂಬುದನ್ನು ಯುನಿಸೆಫ್ ವರದಿ ಮಾಡಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ತಾರಾ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಗಜಾನನ ಎಂ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.