ಶಿರಹಟ್ಟಿ: ದೇಗುಲಗಳು ಕೇವಲ ಧಾರ್ಮಿಕ ಆಚರಣೆಗಳ ಸ್ಥಳಗಳಲ್ಲ. ಅವು ಮನುಷ್ಯನಿಗೆ ಶಾಂತಿ, ನೆಮ್ಮದಿ ಹಾಗೂ ಆತ್ಮಸ್ಥೈರ್ಯ ನೀಡುವ ಪವಿತ್ರ ಕೇಂದ್ರಗಳಾಗಿವೆ ಎಂದು ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ೧೩ನೇ ಪೀಠಾಧಿಪತಿ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.
ದೇಗುಲಗಳಿಗೆ ತೆರಳಿ ಕೆಲಕಾಲ ಧ್ಯಾನ, ಪ್ರಾರ್ಥನೆ ಹಾಗೂ ಭಜನೆಗಳಲ್ಲಿ ತೊಡಗುವುದರಿಂದ ಮನಸ್ಸಿನ ಚಂಚಲತೆ ಕಡಿಮೆಯಾಗುತ್ತದೆ. ದೇವರ ಮೇಲಿನ ಭಕ್ತಿ ಮನುಷ್ಯನಲ್ಲಿ ಸಾತ್ವಿಕ ಚಿಂತನೆ, ಸಹನೆ, ಕರುಣೆ ಹಾಗೂ ಪರೋಪಕಾರದ ಗುಣಗಳನ್ನು ಬೆಳೆಸುತ್ತದೆ. ಆದ್ದರಿಂದ ದೇಗುಲಗಳ ಪಾವಿತ್ರ‍್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ದೇವರು ತೋರಿಸಿದ ಸನ್ಮಾರ್ಗದಲ್ಲಿ ನಡೆಯುವುದು ಅಗತ್ಯ. ಹಸಿದವರಿಗೆ ಅನ್ನ ನೀಡುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಹಿರಿಯರನ್ನು ಗೌರವಿಸುವುದು, ಸತ್ಯ ಮತ್ತು ಧರ್ಮವನ್ನು ಪಾಲಿಸುವುದೇ ನಿಜವಾದ ಭಕ್ತಿಯ ಪ್ರತೀಕ. ಆಡಂಬರಕ್ಕಿಂತ ಆತ್ಮಶುದ್ಧಿ, ತೋರಿಕೆಗಿಂತ ಸೇವೆ, ಮಾತಿಗಿಂತ ಸತ್ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು. ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಮಠದ ರಾಚೋಟೇಶ್ವರ ಶ್ರೀಗಳು ಮಾತನಾಡಿ, ದೇಗುಲಗಳು ಧಾರ್ಮಿಕ ಭಾವನೆಗಳನ್ನು ಬೆಳೆಸುವ ಜತೆಗೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೇಂದ್ರಗಳಾಗಬೇಕು. ಜಾತಿ, ಮತ, ಪಂಥದ ಭೇದ ಮರೆತು ಎಲ್ಲರೂ ಒಂದಾಗಿ ಸೇರುವ ವಾತಾವರಣ ದೇಗುಲಗಳಲ್ಲಿ ನಿರ್ಮಾಣವಾಗಬೇಕು. ಯುವಜನತೆ ಧಾರ್ಮಿಕ ಆಚರಣೆಗಳ ಜತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಉಮೇಶ ಗಾಣಗೇರ, ದೇವಪ್ಪ ಬಜನಿ, ಬಸವರಾಜ ಚಿಕ್ಕತೋಟದ, ಯಲ್ಲಪ್ಪ ಬಂಗಾರಿ, ನಿಂಗಪ್ಪ ಬಜನಿ, ವಿಶ್ವನಾಥ ಕಪ್ಪತ್ತನವರ, ರಮೇಶ ಕಪ್ಪತ್ತನವರ, ಶಿವಾನಂದ ಬಜನಿ, ಶರಣಪ್ಪ ಹೂರಾರ, ನಿಂಗಪ್ಪ ಬಜನಿ, ನೀಲಪ್ಪ ಚಕ್ರಸಾಲಿ, ಚಂದ್ರು ತಳವಾರ, ಪರಶುರಾಮ ಡೊಂಕಬಳ್ಳಿ, ಚಂದ್ರು ಅಕ್ಕಿ, ಮಂಜುನಾಥ ಘಂಟಿ, ಚಂದ್ರಕಾಂತ ಸ್ವಾಮಿ, ಮಂಜು ಬಂತಿ, ಹನುಮಂತ ಕೊಡ್ಲಿ, ವಾಸು ಕಲಘಟಗಿ, ಈರಣ್ಣ ಸಜ್ಜನ ಇದ್ದರು.