ಗಜೇಂದ್ರಗಡ: ರಾಜ್ಯದ ವಿಧಾನಸಭೆಯ ೧೮ನೇ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸಿದ ನೂತನ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರಿಗೆ ಪಟ್ಟಣ ಕಾಲಕಾಲೇಶ್ವರ ವೃತ್ತದಲ್ಲಿ ಶನಿವಾರ ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಸ್ವಾಗತಿಸಿದರು.
ಎಚ್.ಎಸ್. ಸೋಂಪುರ, ಸಿದ್ದಪ್ಪ ಬಂಡಿ, ಅಶೋಕ ಬಾಗಮಾರ, ಶಿವರಾಜ ಘೋರ್ಪಡೆ, ಎ.ಡಿ. ಕೋಲಕಾರ, ಮುರ್ತುಜಾ ಡಾಲಾಯತ್, ಮಿಥುನ ಪಾಟೀಲ, ಅಕ್ಷಯ ಪಾಟೀಲ, ಸುಭಾಸ ಮ್ಯಾಗೇರಿ, ಶಶಿಧರ ಹೂಗಾರ, ರಪೀಕ್ ತೋರಗಲ್, ಶರಣಪ್ಪ ಬೆಟಗೇರಿ, ಶ್ರೀಧರ ಬಿದರಳ್ಳಿ, ರಾಜು ಸಾಂಗ್ಲೀಕರ, ಅಪ್ಪು ಮತ್ತಿಕಟ್ಟಿ, ಅರಿಹಂತ ಬಾಗಮಾರ, ವೆಂಕಟೇಶ ಮುದಗಲ್, ಅಂದಪ್ಪ ಬಿಚ್ಚೂರ, ಎಂ.ಎಚ್. ಕೋಲಕಾರ, ಶ್ರೀಕಾಂತ ಅವಧೂತ, ಮಾಬುಸಾಬ ಮ್ಯಾಗೇರಿ, ಚಿದಾನಂದ ಪಾಟೀಲ, ಸಂಗಪ್ಪ ತೇಜಿ, ಅರ್ಜುನ ರಾಠೋಡ, ಇಸ್ಮಾಯಿಲ್ ಹೊರಪೇಟಿ, ಮುತ್ತಣ್ಣ ಕೊಪ್ಪಳ, ಮಲ್ಲಿಕಾರ್ಜುಜ ಗಾರಗಿ, ಶ್ರೀಧರ ಗಂಜಿಗೌಡರ, ಅಂದಪ್ಪ ರಾಠೋಡ, ಸಿದ್ದಪ್ಪ ಚೋಳಿನ, ಅಲ್ಲಾಭಕ್ಷಿ ನದಾಫ್, ಪರಶುರಾಮ ಕಲಾಲ, ಸಿದ್ದು ಗೊಂಗಡಶೆಟ್ಟಿಮಠ, ಬಾಲಚಂದ್ರ ವಾಲ್ಮೀಕಿ, ಆರ್.ಎಂ. ಜಾಧವ, ಐ.ಎಚ್. ಬಾಗವಾನ, ತುಳಸೀನಾಥ ಮಾಳೊತ್ತರ ಇದ್ದರು.
ಡಿವೈಎಸ್‌ಪಿ ಪ್ರಭುಗೌಡ ಕೆ., ಸಿಪಿಐ ವಿಜಯಕುಮಾರ ಹಾಗೂ ಪಿಎಸ್‌ಐ ಪ್ರಕಾಶ ಡಿ. ಅಶೋಕ ಮಾದರ, ಸಂದೀಪ ದೊಡ್ಡಮನಿ, ಸದಾಶಿವ ಕಂದಪುರ, ಮಲ್ಲಿಕಾರ್ಜುನ ಮುನೆಕೊಪ್ಪ ಇತರ ಪೊಲೀಸ್ ಸಿಬ್ಬಂದಿ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು.ಅಭಿವೃದ್ಧಿ ಕಾರ್ಯಗಳು ನಿಲ್ಲದು: ಕ್ಷೇತ್ರದ ಜನತೆ ನನಗೆ ಹೆಚ್ಚಿನ ಶಕ್ತಿ ನೀಡಿದ್ದೀರಿ. ನೀವು ಯಾರೂ ಹಿಂಜರಿಯಬೇಡಿ, ಕ್ಷೇತ್ರದ ಕೆಲಸಗಳು ಅಲ್ಲಿಯೇ ನಿಂತಿವೆ ಎಂದು ಭಾವಿಸಬೇಡಿ, ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ವಿಧಾನಸಭೆಯ ನೂತನ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶನಿವಾರ ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸಿದ ಹಿನ್ನೆಲೆ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಸ್ವಾಗತ ಹಾಗೂ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ನನ್ನ ಪೀಠ ಪಕ್ಷಾತೀತವಾಗಿದ್ದು. ಆದರೆ ನಿಮ್ಮ ಆಶೋತ್ತರಗಳಿಗೆ, ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಹಾಗೂ ಗ್ರಾಮದ ಅಭಿವೃದ್ಧಿಗೆ ಚಿಂತಿಸಬೇಡಿ. ಕ್ಷೇತ್ರದ ಸರ್ವ ಜನಾಂಗದ ಕಲ್ಯಾಣ ಕೆಲಸ ಮಾಡುವ ಈ ಪೀಠದಿಂದ ಮಾಡುವ ಶಕ್ತಿಯನ್ನು ಕಾಲಕಾಲೇಶ್ವರ ನೀಡಲಿ ಎಂದರು.ನಮ್ಮ ಕ್ಷೇತ್ರದ ಅಭಿಮಾನಿಗಳು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ನನಗೆ ಉನ್ನತ ಸ್ಥಾನ ಸಿಗಲಿ ಎಂದು ಕಾಲಕಾಲೇಶ್ವರ ದೇವರಿಗೆ, ಪುಟ್ಟರಾಜರ ಮಠ ಸೇರಿ ವಿವಿಧ ಗ್ರಾಮಗಳಲ್ಲಿನ ಗ್ರಾಮ ದೇವತೆಗಳಿಗೆ ದೀಡ್ ನಮಸ್ಕಾರ ಸೇರಿ ಪೂಜೆ-ಪುನಸ್ಕಾರ ಜತೆಗೆ ತುಮಕೂರಿನಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡಿಸಿದ್ದೀರಿ. ರಾಜ್ಯದ ವಿಧಾನಸಭೆ ಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದೀರಿ. ಇದಕ್ಕೆ ಕಾರಣೀಕರ್ತರಾದ ತಮಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇನೆ ಎಂದರು.
ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ಸಿದ್ದಪ್ಪ ಬಂಡಿ, ಎ.ಡಿ. ಕೋಲಕಾರ, ಐ.ಎಸ್. ಪಾಟೀಲ, ಎಂ.ಎಚ್. ಕೋಲಕಾರ, ಮುರ್ತುಜಾ ಡಾಲಾಯತ್, ಶಶಿಧರ ಹೂಗಾರ, ಶ್ರೀಧರ ಬಿದರಳ್ಳಿ, ರಫೀಕ್ ತೋರಗಲ್, ಶರಣಪ್ಪ ಬೆಟಗೇರಿ, ಮಿಥುನ ಪಾಟೀಲ, ಅಕ್ಷಯ ಪಾಟೀಲ, ಸುಭಾಸ ಮ್ಯಾಗೇರಿ ಆಗಮಿಸಿದ್ದರು.