ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಸಾಲಿಗ್ರಾಮ ತಾಲೂಕಿನ ಕುಪ್ಪಹಳ್ಳಿ ಗ್ರಾಮದ ಮಾಜಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಕುಪ್ಪಹಳ್ಳಿ ಸೋಮಶೇಖರ್ ಪ್ರತಿಕ್ರಿಯಿಸಿ ಹೌದು ನಾನೇ ಹತ್ತು ಲಕ್ಷ ರೂಪಾಯಿಗಳನ್ನು ಮೈಸೂರಿಗೆ ತೆಗೆದುಕೊಂಡು ಹೋಗಿ ಸಾ.ರಾ.ನಂದೀಶ್ ಗೆ ಕೊಟ್ಟಿರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದು ಈ ಬಗ್ಗೆ ಜೆಡಿಎಸ್ ಎರಡು ಬಣಗಳ( ಜಿ ಟಿ ದೇವೇಗೌಡ, ಹರೀಶ್ ಗೌಡ ಮತ್ತು ಸಾ.ರಾ, ಮಹೇಶ್ ಬಣ) ಮುಖಂಡರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದು ಬೆಟ್ಟಿಂಗ್ ವಿಚಾರದಲ್ಲಿ ಸತ್ಯದ ಬಗ್ಗೆ ಪ್ರಮಾಣಿಕರಿಸಲು ಶ್ರೀ ಕ್ಷೇತ್ರ ಕಪ್ಪಡಿಯಲ್ಲಿ ಆಣೆ ಪ್ರಮಾಣಕ್ಕೆ ಒತ್ತಾಯಿಸಿ ಬಹಿರಂಗವಾಗಿ ಮಾತನಾಡಿದ್ದರು.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಾ.ರಾ.ನಂದೀಶ್ ಗುಂಪು ಮತ್ತು 10:45 ಗಂಟೆಗೆ ಸುರೇಶ್ ಕಡೆಯವರು ಸುಮಾರು ನೂರಾರು ಜನರು ಕಪ್ಪಡಿ ಕ್ಷೇತ್ರಕ್ಕೆ ಬರುವ ಹೆಬ್ಬಾಳಿನ ಮುಖ್ಯ ದ್ವಾರದ ಬಳಿ ಜಮಾಯಿಸಿದ್ದ ಸಂದರ್ಭದಲ್ಲಿ ಹೆಬ್ಬಾಳು ಗ್ರಾಮಸ್ಥರು ತಡೆಗಟ್ಟಿದರು. ಹೂಟಗಳ್ಳಿ ಸುರೇಶ್ ಮತ್ತು ಕುಪ್ಪಳ್ಳಿ ಸೋಮಶೇಖರ್ ಅವರು ಬೇರೆ ರಸ್ತೆಯಲ್ಲಿ ಕಪ್ಪಡಿ ಕ್ಷೇತ್ರಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ವಾಪಸ್ಸು ಬರಬೇಕಾದರೆ ಅವನ ಕಾರನ್ನು ಅಡ್ಡಗಟ್ಟಲು ಹೆಬ್ಬಾಳು ಮುಖ್ಯದ್ವಾರದಲ್ಲಿ ಸಾ.ರಾ.ನಂದೀಶ್ ಬೆಂಬಲಿಗರು ಅಡ್ಡಗಟ್ಟಲು ಪ್ರಯತ್ನಿಸಿದರು.ಈ ಸಂದರ್ಭದಲ್ಲಿ ಕಾರನ್ನು ನಿಲ್ಲಿಸದೆ ಹೋಗುವಾಗ ಅವರ ಕಾರಿನ ಮೇಲೆ ಸಾ.ರಾ.ನಂದೀಶ್ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಎಸೆದು ಧಿಕ್ಕಾರದ ಘೋಷಣೆಗಳನ್ನು ಕೂಗಿದರಲ್ಲದೆ. ಕುಪ್ಪಹಳ್ಳಿ ಸೋಮಶೇಖರ್ ರವರನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡು ತಳ್ಳಾಟ ,ನೂಕಾಟ ಮಾಡಿದರು. ನಂತರ ಮತ್ತೊಂದು ಕಾರನ್ನು ಅಡ್ಡಗಟ್ಟಿ ಕೀ ಕಿತ್ತುಕೊಂಡಿದ್ದರುಸ್ಥಳಕ್ಕೆ ಬಂದ ಪೊಲೀಸರು ಗುಂಪಿನಿಂದ ಕುಪ್ಪಹಳ್ಳಿ ಸೋಮಶೇಖರವರನ್ನು ಕರೆದುಕೊಂಡು ಸ್ಕೂಟರ್ ನಲ್ಲಿ ಕೆ.ಆರ್.ನಗರದ ಕಡೆ ಕಳುಹಿಸಿದರು.ಇದಾದ ನಂತರ ಸಾ.ರಾ.ನಂದೀಶ್ ಹಾಗೂ ಅವರ ಬೆಂಬಲಿಗರು ಕಪ್ಪಡಿ ಕ್ಷೇತ್ರಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಪ್ಪಡಿ ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ, ಜಯ ಘೋಷಣೆಗಳನ್ನು ಕೂಗಿದರು. ಹಾಗೂ ಕುಪ್ಪಹಳ್ಳಿ ಸೋಮಶೇಖರ್ ಹಾಗೂ ಹೂಟಗಳ್ಳಿ ಸುರೇಶ್ ರವರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಅಣ್ಣ ತಮ್ಮಂದಿರ ನಡುವೆ ಬಿರುಕು ಮೂಡಿಸುವ ಪ್ರಯತ್ನವಿದು ಎಂದರು. ನಾನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡಿಲ್ಲ ಬೆಟ್ಟಿಂಗ್ ಆಡುವುದಕ್ಕೆ ನನ್ನ ಸಹಮತ ಇಲ್ಲ ಮತ್ತು ಕಾನೂನಿನಲ್ಲಿ ಅವಕಾಶ ಇಲ್ಲ. ಕೆಲವರು ಮಾಧ್ಯಮಗಳಲ್ಲಿಯೇ ಬೆಟ್ಟಿಂಗ್ ಆಡಿದ್ದೇವೆ ಎಂದು ಹೇಳಿದರು ಸಹ ಇದುವರೆಗೂ ಪೊಲೀಸ್ ಇಲಾಖೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅವರನ್ನು ಬಂಧಿಸಿಲ್ಲ,ಇಷ್ಟೆಲ್ಲಕ್ಕೂ ಪೊಲೀಸರ ವೈಫಲ್ಯ ಕಾರಣ ಎಂದು ಕಿಡಿ ಕಾರಿದರು.ನಮ್ಮ ಅಣ್ಣ ಮತ್ತು ನನ್ನ ರಾಜಕೀಯ ಯಶಸ್ಸನ್ನು ಸಹಿಸದೆ ನಮ್ಮ ವಿರೋಧಿಗಳು ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಯುವ ಜೆಡಿಎಸ್ ಅಧ್ಯಕ್ಷ ಹಂಪಾಪುರ ಸುರೇಶ್, ಹೆಬ್ಬಾಳು ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಬಾಲು, ಮುಖಂಡರಾದ ಹೆಬ್ಬಾಳು ಸಂತೋಷ್, ಸುಜಯ್ ಗೌಡ, ಕಪ್ಪಡಿಹರೀಶ್, ಮಧು, ವಕೀಲ ಅಂಕನಹಳ್ಳಿ ತಿಮ್ಮಪ್ಪ, ಅಯ್ಯರುದ್ರೇಶ್, ಅನೀಫ್ ಗೌಡ, ಶ್ರೀಧರ, ಮಹೇಶ್, ರಾಜೇಗೌಡ, ಕುಚೇಲ, ಮಹೇಶ್, ಮುಂಡೂರು ಶಿವು, ಸಾಲಿಗ್ರಾಮ ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.