ಕುರ್ಕಿ ಬಳಿ ಭದ್ರಾ ನಾಲೆ ಸೇತುವೆ ಕುಸಿತ: ಪರಿಶೀಲನೆ

KannadaprabhaNewsNetwork |  
Published : Aug 18, 2025, 12:00 AM IST
ಕ್ಯಾಪ್ಷನ16ಕೆಡಿವಿಜಿ40, 41, 42ದಾವಣಗೆರೆ ತಾಲೂಕಿನ ಕುರ್ಕಿ ಬಳಿ ಹಾದುಹೋಗಿರುವ ಭದ್ರಾ ನಾಲೆಯ ಸೇತುವೆ ಕುಸಿದ ಘಟನಾ ಸ್ಥಳಕ್ಕೆ ಶಾಸಕ ಕೆ.ಎಸ್‌.ಬಸವಂತಪ್ಪ ಇಂಜಿನಿಯರ್ ಗಳೊಂದಿಗೆ ಭೇಟಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುರ್ಕಿ ಬಳಿ ಹಾದುಹೋಗಿರುವ ಭದ್ರಾ ಮುಖ್ಯ ನಾಲೆ ಸೇತುವೆ ನಿರಂತರ ಮಳೆಯಿಂದಾಗಿ ಗುರುವಾರ ಕುಸಿದಿದ್ದು, ಸ್ಥಳಕ್ಕೆ ಶನಿವಾರ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- ಹೊಸ ಸೇತುವೆ ಆರೋವರೆಗೆ ತಾತ್ಕಾಲಿಕ ದುರಸ್ತಿಗೆ ಶಾಸಕ ಬಸವಂತಪ್ಪ ಸೂಚನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುರ್ಕಿ ಬಳಿ ಹಾದುಹೋಗಿರುವ ಭದ್ರಾ ಮುಖ್ಯ ನಾಲೆ ಸೇತುವೆ ನಿರಂತರ ಮಳೆಯಿಂದಾಗಿ ಗುರುವಾರ ಕುಸಿದಿದ್ದು, ಸ್ಥಳಕ್ಕೆ ಶನಿವಾರ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೇತುವೆ ಕುಸಿದ ದಿನ ಶಾಸಕ ಕೆ.ಎಸ್.ಬಸವಂತಪ್ಪ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಘಟನಾ ಸ್ಥಳಕ್ಕೆ ಕೂಡಲೇ ಭೇಟಿ ನೀಡಲು ಪರಿಶೀಲಿಸಲು ಆಗಿರಲಿಲ್ಲ. ಶನಿವಾರ ಎಂಜಿನಿಯರ್‌ಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದರು. ₹3.50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆದಿದ್ದು, ಮಳೆಗಾಲ ಮುಗಿಯುವರೆಗೆ ತಾತ್ಕಾಲಿಕ ತುರ್ತು ದುರಸ್ತಿಗೊಳಿಸಿ ನೀರು ಪೋಲಾಗದಂತೆ ತಡೆಯಬೇಕು ಎಂದು ಎಂಜಿನಿಯರ್‌ಗೆ ಸೂಚನೆ ನೀಡಿದರು.

69 ವರ್ಷಗಳಿಂದ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಮಾಯಕೊಂಡ ಕ್ಷೇತ್ರದ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸೇತುವೆಗಳು, ಕಾಲುವೆಗಳು ಶಿಥಿಲಗೊಂಡಿವೆ, ಈ ಬಗ್ಗೆ ಹಿಂದಿನ ಅಧಿವೇಶನಗಳಲ್ಲಿ ಸೇತುವೆಗಳು, ಕಾಲುವೆಗಳನ್ನು ಹೊಸದಾಗಿ ನಿರ್ಮಿಸುವಂತೆ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿ, ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರು ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಶಿಥಿಲಗೊಂಡ ಕಾಲುವೆ, ಸೇತುವೆಗಳನ್ನು ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ಬೇಸಿಗೆ ಕಾಲದಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳಿಸುವ ಭರವಸೆ ನೀಡಿದರು.

ಈಗಾಗಲೇ ರೈತರು ಭತ್ತದ ನಾಟಿಯಲ್ಲಿ ತೊಡಗಿದ್ದು, ರೈತರಿಗೆ ನೀರಿನ ತೊಂದರೆ ಆಗಬಾರದು. ಆದ್ದರಿಂದ ಕೂಡಲೇ ಕುಸಿದ ಸೇತುವೆ ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ರೈತರಿಗೆ ನೆರವಾಗಬೇಕು ಎಂದು ಸೂಚನೆ ನೀಡಿದರು.

ನೀರಾವರಿ ಇಲಾಖೆಯ ಎಇಇ ವಿಕಾಸ್, ನೀರಾವರಿ ಇಲಾಖೆ ಎಂಜಿನಿಯರ್ ಮನೋಜ್, ಪರಮೇಶ್ವರಪ್ಪ, ಮುಖಂಡರಾದ ಗ್ರಾಪಂ ಸದಸ್ಯ ನಂದೀಶ್, ಕೃಷ್ಣಮೂರ್ತಿ, ನಟರಾಜ್, ಜಿಲ್ಲಾ ಹಿರಿಯ ಕಾಂಗ್ರೆಸ್ ಉಪಾಧ್ಯಕ್ಷರಾದ ಡಿ.ತಿಪ್ಪಣ್ಣ, ರೈತ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

- - -

-16ಕೆಡಿವಿಜಿ40, 41, 42.ಜೆಪಿಜಿ:

ದಾವಣಗೆರೆ ತಾಲೂಕಿನ ಕುರ್ಕಿ ಬಳಿ ಭದ್ರಾ ನಾಲೆ ಸೇತುವೆ ಕುಸಿದ ಸ್ಥಳಕ್ಕೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್‌. ಬಸವಂತಪ್ಪ ಎಂಜಿನಿಯರ್‌ಗಳೊಂದಿಗೆ ಭೇಟಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!