ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭದ್ರಾ ಮೇಲ್ಡಂಡೆ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ದೋಷಗಳಿರುವುದರಿಂದ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದ್ದು, ಆಗ ಈ ಎಲ್ಲ ಸಮಸ್ಯೆ ಪರಿಹಾರವಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೇಲೂರು- ಚಿಕ್ಕಮಗಳೂರು ಹೆದ್ದಾರಿ ಕಾಮಗಾರಿ ಸೇರಿದಂತೆ ಮೊದಲಾದ ಅಭಿವೃದ್ಧಿ ಕಾಮಗಾರಿಗೆ ಕೇಂದ್ರದ ಸಚಿವ ನಿತಿನ್ ಗಡ್ಕರಿ ಅನುದಾನ ನೀಡುವ ಹಾಗೂ ಶೃಂಗೇರಿ- ಚಿಕ್ಕಮಗಳೂರು ಹೆದ್ದಾರಿ ಕಾಮಗಾರಿ ₹50 ಕೋಟಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಇನ್ನೂ ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.ಆತ್ಮನಿರ್ಭರತೆ, ವಿಕಸಿತ ಭಾರತ, ಸ್ಥಿರ ಅಭಿವೃದ್ಧಿಯೊಂದಿಗೆ ಸ್ವಾವಲಂಬನೆ ಗುರಿಯಾಗಿಸಿಕೊಂಡು ಉದ್ಯೋಗ ಸೃಷ್ಟಿ, ಕೃಷಿ ಉತ್ಪಾದಕತೆ ಹೆಚ್ಚಿಸಲು ಕೇಂದ್ರ ಸರ್ಕಾರ ಬಜೆಟ್‌ಗೆ ಒತ್ತುನೀಡಿದೆ. ಬಜೆಟ್ ಸರ್ವಸ್ಪರ್ಶಿ ಜನಪರ ಬಜೆಟ್ ಆಗಿದೆ. ಆರ್ಥಿಕ ಬೆಳವಣಿಗೆ ವೇಗಗೊಳಿಸಿ ಜನರ ಆಶಯ ಈಡೇರಿಸುವುದು ಮತ್ತು ಆಡಳಿತದಲ್ಲಿ ಕೃತಕ ಬುದ್ದಿಮತ್ತೆಯಂತಹ ಸುಧಾರಿತ ತಂತ್ರ ಜ್ಞಾನ ಬಳಸುವುದು ಬಜೆಟ್‌ನ ಆಧಾರ ಸ್ಥಂಭ ಎಂದರು.
ಕ್ಯಾನ್ಸರ್ ಸೇರಿದಂತೆ 17 ಔಷಧಗಳ ಮೇಲಿನ ಕಸ್ಟಮ್ ಸುಂಕ ರದ್ದುಗೊಳಿಸಿ 7 ಅಪರೂಪದ ಕಾಯಿಲೆಗಳ ಮೇಲಿನ ಆಮದು ಸುಂಕ ವಿನಾಯಿತಿ ಮುಂದುವರಿಸಲಾಗಿದೆ. ತೆಂಗು, ಕಾಫಿ, ಶ್ರೀಗಂಧ ಮುಂತಾದ ತೋಟಗಾರಿಕೆ ಬೆಳೆಗಳ ಪುನಶ್ಚೇತನಕ್ಕೆ ಒತ್ತುನೀಡಿ ರೈತರಿಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಶ್ಲಾಘಿಸಿದರು.
--ಬಾಕ್ಸ್--
ಚಿಕ್ಕಮಗಳೂರು ಖಾಸಗಿ ಹೋಂ ಸ್ಟೇ ನಲ್ಲಿ ಇತ್ತೇಚೆಗೆ ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆನಂದ್‌ನ ಮೇಲೆ ತಮ್ಮದೇ ಬಿಜೆಪಿ ಪಕ್ಷದ ಮತ್ತೊಂಬ ಮುಖಂಡ ಸತೀಶ್ (ಪಾಪಣ್ಣ) ಗುಂಪುಗೂಡಿ ಹಲ್ಲೆ ನಡೆಸಿದ ಬಗ್ಗೆ ಪಕ್ಷದ ಹಿರಿಯರ ಗಮನಕ್ಕೆ ತಂದು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಹೇಳಿದ್ದಾರೆ.