ಕನ್ನಡಪ್ರಭ ವಾರ್ತೆ, ಭದ್ರಾವತಿ
ಮಹಾಶಿವರಾತ್ರಿ ಅಂಗವಾಗಿ ನಗರದ ಈಶ್ವರ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಅಲಂಕಾರ, ಪೂಜೆ, ಹೋಮ-ಹವನ ಸೇರಿದಂತೆ ಧಾರ್ಮಿಕ ಆಚರಣೆಗಳು ವಿಜೃಂಭಣೆಯಿಂದ ಜರುಗಿದವು.ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಯ ಸಂಗಮೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ಗುರುವಾರ ಸಂಜೆಯಿಂದಲೇ ಗಂಗಾ ಪೂಜೆ, ಹೋಮ-ಹವನ ಇನ್ನಿತರ ಧಾರ್ಮಿಕ ಆಚರಣೆಗಳು ಪ್ರಾರಂಭಗೊಂಡಿವೆ. ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದರು. ಪ್ರತಿ ವರ್ಷ ಹಳೇನಗರದ ವೀರಶೈವ ಸೇವಾ ಸಮಿತಿ ವತಿಯಿಂದ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಸಮಿತಿ ಪ್ರಮುಖರು, ಸೇವಾಕರ್ತರು ಉಪಸ್ಥಿತಿ ಉಪಸ್ಥಿತರಿದ್ದರು. ಭಕ್ತರಿಗೆ ಸೇವಾಕರ್ತರಿಂದ ಕಲ್ಲಂಗಡಿ, ಮಜ್ಜಿಗೆ ವಿತರಣೆ ನಡೆಯಿತು.ಹೊಸಮನೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ:
ನಗರಸಭೆ ವಾರ್ಡ್ ನಂ.12ರ ವ್ಯಾಪ್ತಿಯ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ಪಂಚಾಮೃತ ಸಹಿತ ರುದ್ರಾಭಿಷೇಕ ವಿಶೇಷ ಅಲಂಕಾರ ನೆರವೇರಿತು. ಸೇವಾಕರ್ತರಿಂದ ಭಕ್ತರಿಗೆ ಕೋಸಂಬರಿ ಪಾನಕ ವಿತರಣೆ ನಡೆಯಿತು. ದೇವಸ್ಥಾನ ಸಮಿತಿ ಪ್ರಮುಖರಾದ ಜಿ. ಆನಂದ್ ಕುಮಾರ್, ಬಿ.ಎಸ್ ಶ್ರೀನಾಥ್, ಕೃಷ್ಣ ಛಲವಾದಿ, ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಶ್ರೀ ಶಿವಸಾಯಿ ಕೃಪಾ ಧಾಮ:
ನ್ಯೂ ಟೌನ್ ಶ್ರೀ ಶಿವ ಸಾಯಿ ಕೃಪಾ ಧಾಮ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಮತ್ತು ಪ್ರಶಾಂತಿ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಶಿವಸಾಯಿ ಕೃಪಾಧಾಮದಲ್ಲಿ ರುದ್ರಾಭಿಷೇಕ, ರುದ್ರ ಹೋಮ ಇನ್ನಿತರ ಆಚರಣೆಗಳು ಜರುಗಿದವು. ಪ್ರಭಾಕರ ಬೀರಯ್ಯ ಸೇರಿದಂತೆ ಟ್ರಸ್ಟ್ ಅಧ್ಯಕ್ಷರು, ಸದಸ್ಯರು, ಸೇವಾ ಸಂಸ್ಥೆಗಳ ಸಂಚಾಲಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.ಶ್ರೀ ಕಾಳಿಂಗೇಶ್ವರ ದೇವಾಲಯ:
ಉಜ್ಜನಿಪುರ ಚಾನಲ್ ರಸ್ತೆಯ ಶ್ರೀ ಕಾಳಿಂಗೇಶ್ವರ ದೇವಾಲಯದಲ್ಲಿ 43ನೇ ವರ್ಷದ ಮಹಾಶಿವರಾತ್ರಿ ಹಬ್ಬ ವಿಜೃಂಭಣೆಯಿಂದ ಜರುಗಿತು. ಅಗ್ನಿಕುಂಡದ ಹರಕೆ, ಪರಿವಾರ ದೇವತೆಗಳ ಉತ್ಸವ ಮೂರ್ತಿ ಮೆರವಣಿಗೆ, ಶ್ರೀ ಮಹಾಗಣಪತಿ, ಪಂಚಾಮೃತ ಅಭಿಷೇಕ, ಮಹಾಪೂಜೆ ಜರುಗಿದವು. ಎಂಪಿಎಂ ಕಾರ್ಖಾನೆ ವ್ಯಾಪ್ತಿಯ ಕಾಗದ ನಗರದ ಶ್ರೀ ಈಶ್ವರ ದೇವಾಲಯದಲ್ಲಿ 33ನೇ ವರ್ಷದ ಮಹಾಶಿವರಾತ್ರಿ ವಿಜೃಂಭಣೆಯಿಂದ ಜರುಗಿತು.- - - -ಡಿ8-ಬಿಡಿವಿಟಿ:
ಭದ್ರಾವತಿ ನಗರದ ಭದ್ರಾ ನದಿಯಲ್ಲಿರುವ ಸಂಗಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪೂಜೆ ವಿಜೃಂಭಣೆಯಿಂದ ಜರುಗಿತು. ಅಪಾರ ಭಕ್ತರು ಆಗಮಿಸಿ, ದರ್ಶನ ಪಡೆದು, ಪೂಜೆ ಸಲ್ಲಿಸಿದರು. -ಡಿ8-ಬಿಡಿವಿಟಿ(ಎ):ಭದ್ರಾವತಿ ನಗರಸಭೆ ವಾರ್ಡ್ ನಂ.12ರ ವ್ಯಾಪ್ತಿಯ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪೂಜೆ ಜರುಗಿತು.
-ಡಿ8-ಬಿಡಿವಿಟಿ(ಬಿ):ಭದ್ರಾವತಿ ನ್ಯೂಟೌನ್ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಮಹಾಶಿವರಾತ್ರಿ ಆಚರಣೆ ಜರುಗಿತು.