ಭಗವದ್ಗೀತಾ ಅಭಿಯಾನ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ
ಭಗವದ್ಗೀತೆಯು ನಮ್ಮ ಜೀವನಕ್ಕೆ ಮಾರ್ಗದರ್ಶಿಯಾಗಿದೆ. ಸನ್ಮಾರ್ಗದಿಂದ ಮುನ್ನೆಡೆಯಲು ಭಗವದ್ಗೀತೆ ಪ್ರೇರಣೆ ನೀಡುತ್ತದೆ ಎಂದು ದುಬೈನ ಅಬುದಾಬಿ ನಗರದ ಬ್ರಾಹ್ಮಣ ಸಭಾದ ಪ್ರಮುಖ ಅನಂತ ಭಟ್ಟ ಬಾಲೀಗದ್ದೆ ಹೇಳಿದರು.
ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲಾ ಸಭಾಭವನದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ತಾಲೂಕಾ ಮಟ್ಟದ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಸನಾತನ ಧರ್ಮವು ಅವಿನಾಶಿ ಹಾಗೂ ನಿತ್ಯ ಸತ್ಯವಾಗಿದೆ. ನಮ್ಮ ಚಿತ್ತ ಶುದ್ಧಿ ಇದ್ದರೆ ನಮಗೆ ಭಗವಂತನ ಅನುಗ್ರಹ ದೊರೆಯುತ್ತದೆ. ಕೇವಲ ಹಣ ಗಳಿಸುವ ಉದ್ದೇಶದಿಂದ ಯಾವುದೇ ಕೆಲಸ ಮಾಡಿದರೂ ಅದು ನಮ್ಮ ಜೀವನಕ್ಕೆ ಸಾರ್ಥಕತೆ ತರುವುದಿಲ್ಲ. ಭಗವದ್ಗೀತೆಯ ಸಂದೇಶಗಳನ್ನು ಜಿವನದಲ್ಲಿ ಅಳವಡಿಸಿಕೊಂಡರೆ ಜೀವನ ಧನ್ಯವಾಗುತ್ತದೆ. ಜ್ಞಾನದ ದರ್ಶನವಾಗುತ್ತದೆ. ಭಗವದ್ಗೀತೆಯನ್ನು ನಿತ್ಯ ಓದಬೇಕು ಎಂದರು.
ವೇದಿಕೆಯಲ್ಲಿ ಭಗವದ್ಗೀತಾ ಅಭಿಯಾನದ ಪ್ರಮುಖರಾದ ಡಾ. ಶಂಕರ ಭಟ್ಟ ಬಾಲೀಗದ್ದೆ, ಕೆ.ಜಿ. ಬೋಡೆ, ಎಸ್.ವಿ. ಭಟ್ಟ, ಕೆ.ಟಿ. ಹೆಗಡೆ, ವಿ.ಟಿ. ಭಟ್ಟ, ದೇವಾಲಯದ ವ್ಯವಸ್ಥಾಪಕ ಎನ್.ಎಸ್. ಭಟ್ಟ, ಪಾಠಶಾಲೆಯ ಅಧ್ಯಾಪಕರಾದ ಡಾ. ಶಿವರಾಮ ಭಾಗ್ವತ್, ರಮಾ ದೀಕ್ಷಿತ ಮುಂತಾದವರು ಇದ್ದರು. ಅಭಿಯಾನ ಸಮಿತಿಯ ಪ್ರಮುಖ ಲಕ್ಷಿನಾರಾಯಣ ಗುಮ್ಮಾನಿ ನಿರ್ವಹಿಸಿದರು.