ಅರಸೀಕೆರೆ ನಗರದ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಚೈತನ್ಯ ಕಶ್ಯಪ್ ಮಾತನಾಡಿ, ಭಗವದ್ಗೀತೆ ಕುರಿತು ಮಾತನಾಡಲು ಎಷ್ಟು ದಿನಗಳಾದರೂ ಸಮಯ ಸಾಲದು. ಅಂತಹ ಮಹಾ ಗ್ರಂಥ ನಮ್ಮದಾಗಿದೆ. ಶ್ರೀ ಕೃಷ್ಣನ ಕೊಡುಗೆ ಅಪಾರ ಎಂದರು. ಮಕ್ಕಳು ರಾಧಾ ಮತ್ತು ಕೃಷ್ಣ ವೇಷಧಾರಿಗಳಾಗಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಎಲ್ಲ ಮೆಚ್ಚುಗೆಗೆ ಪಾತ್ರರಾದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಭಗವದ್ಗೀತೆಯಲ್ಲಿನ ಸಂದೇಶಗಳು ಸದಾಕಾಲವೂ ಪ್ರಸ್ತುತ ಎಂದು ತಾಲೂಕು ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಚೈತನ್ಯ ಕಶ್ಯಪ್ ಹೇಳಿದರು. ನಗರದ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಭಗವದ್ಗೀತೆ ಕುರಿತು ಮಾತನಾಡಲು ಎಷ್ಟು ದಿನಗಳಾದರೂ ಸಮಯ ಸಾಲದು. ಅಂತಹ ಮಹಾ ಗ್ರಂಥ ನಮ್ಮದಾಗಿದೆ. ಶ್ರೀ ಕೃಷ್ಣನ ಕೊಡುಗೆ ಅಪಾರ ಎಂದರು. ನಮ್ಮ ಸಂಘದ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ತಾಲೂಕು ಬ್ರಾಹ್ಮಣ ಸಂಘ ಹಾಗೂ ಅಂಗಸಂಸ್ಥೆಗಳು ಸಹಕಾರ ನೀಡಲಾಗಿ ಇಂದು ಯಶಸ್ವಿಯಾಗಿ ನಡೆಯಲು ಕಾರಣವಾಗಿದೆ. ಸೀತಾ ಮಹಿಳಾ ಸಂಘದವರು ಸಹ ಶ್ರೀ ಕೃಷ್ಣನ ಕುರಿತಂತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದ್ದಾರೆ. ನಮ್ಮ ಸಂಘದ ಪದಾಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ರೂಪಿಸಿದ್ದಾರೆ. ಶ್ರೀ ಕೃಷ್ಣ ಮತ್ತು ರಾಧೆಯರಾಗಿ ಅನೇಕ ಮಕ್ಕಳು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಎಲ್ಲರನ್ನೂ ರಂಜಿಸಿದ್ದಾರೆ. ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಅವರು ಮತ್ತು ತಾಲೂಕು ಬ್ರಾಹ್ಮಣ ಯುವಕ ಸಂಘದ ಮಾಜಿ ಅಧ್ಯಕ್ಷರು ಹಿರಿಯ ಸದಸ್ಯರು ಆದ ದತ್ತಾತ್ರಿ ಅವರು ಸಹ ಕಾರ್ಯಕ್ರಮದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ ಅವರಿಗೂ ಮತ್ತು ಎಲ್ಲಾ ಅಂಗ ಸಂಸ್ಥೆ ಪದಾಧಿಕಾರಿಗಳಿಗೂ ನಾವು ಆಭಾರಿಯಾಗಿದ್ದೇವೆ ಎಂದರು. ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಶ್ರೀ ಕೃಷ್ಣ ಗೀತೋಪದೇಶ ಕುರಿತು ಹೆಚ್ಚಿನ ಮಾಹಿತಿ ನೀಡಿದರು. ಕೆ ಎನ್ ದತ್ತಾತ್ರಿ ಅವರು ಭಗವದ್ಗೀತೆಯ ಅನೇಕ ಅಂಶಗಳನ್ನು ಪ್ರಸ್ತಾಪಿಸಿ ಗೀತೆಯ ಮಹತ್ವವನ್ನು ತಿಳಿಸಿಕೊಟ್ಟರು. ಸೀತಾ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಹೇಮಾ ದತ್ತಾತ್ರಿ ಮತ್ತು ಅಂಜನಾ ಪುರುಷೋತ್ತಮ್ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು, ಮಕ್ಕಳು ರಾಧಾ ಮತ್ತು ಕೃಷ್ಣ ವೇಷಧಾರಿಗಳಾಗಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಎಲ್ಲ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ತಾಲೂಕು ಬ್ರಾಹ್ಮಣ ಸಂಘದ ಕಾರ್ಯದರ್ಶಿ ಆಡಿಟರ್ ಸುಬ್ರಹ್ಮಣ್ಯ, ಖಜಾಂಚಿ ಕರ್ನಾಟಕ ಬ್ಯಾಂಕ್ ಮೋಹನ್ ಕುಮಾರ್, ಮತ್ತು ನಿರ್ದೇಶಕರುಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್ ಉಪಾಧ್ಯಕ್ಷ ಗೋಪಾಲ್, ನಿರ್ದೇಶಕರು , ವ್ಯವಸ್ಥಾಪಕ ಮಂಜುನಾಥ್, ಶ್ರೀಚಂದ್ರಶೇಖರ ಭಾರತಿ ಐಟಿಐ ಪ್ರಾಂಶುಪಾಲ ಸುರೇಶ್, ಯಾಜ್ಞವಲ್ಕ ಸಂಘದ ಅಧ್ಯಕ್ಷ ನ್ಯಾಯವಾದಿ ಹಿರಿಯಣ್ಣಯ್ಯ, ಸೀತಾ ಮಹಿಳಾ ಸಂಘದ ಅಧ್ಯಕ್ಷೆ ಶಕುಂತಲಾ ಆನಂದ್, ಕಾರ್ಯದರ್ಶಿ ವಸಂತ ಕೃಷ್ಣಮೂರ್ತಿ, ಯುವಕ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಕಾರ್ಯದರ್ಶಿ ಅಭಿಜಿತ್, ಖಜಾಂಚಿ ಶಿವಕುಮಾರ್ ಪಾಕ ತಜ್ಞರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ಪುರೋಹಿತರ ಬಳಗದ ನಿರ್ದೇಶಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.