ಹೊಸಪೇಟೆ: ಭಯೋತ್ಪಾದನೆ, ಜಾತಿ ಕಲಹ, ಅತ್ಯಾಚಾರ, ಅನಾಚಾರ ಸೇರಿದಂತೆ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಭಗವದ್ಗೀತೆ ಶಾಶ್ವತ ಪರಿಹಾರವಾಗಲಿದೆ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ನವೆಂಬರ್‌ನಲ್ಲಿ ಅಭಿಯಾನದ ಕಲಿಕಾ ಕಾರ್ಯಕ್ರಮ, ಡಿಸೆಂಬರ್‌ನಲ್ಲಿ ಅಭಿಯಾನದ ಕುರಿತು ತಾಲೂಕು ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದರು.
ಶಾರದಾ ಗೀತಾಶ್ರಮದ ಸಮೇದಾನಂದ ಜಿ.ಮಹಾರಾಜ, ಅಂಜನಾನಂದ ಸರಸ್ವತಿ ಸ್ವಾಮೀಜಿ ವೇದಿಕೆಯಲ್ಲಿದ್ದು ಆಶೀರ್ವಚನ ನೀಡಿದರು. ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ದಿವಾಕರ್, ವೀರಶೈವ ಸಮಾಜದ ಶರಣಸ್ವಾಮಿ, ಆರ್ಯವೈಶ್ಯ ಸಮಾಜದ ಕೆ.ರಾಜೇಂದ್ರ, ವಿಶ್ವಕರ್ಮ ಸಮಾಜದ ರಾಜಣ್ಣ, ಪಿ.ಎನ್. ಶ್ರೀಪಾದ್, ಭೂಪಾಲ್ ಶ್ರೀಪಾದ್, ಪತ್ರಕರ್ತ ಕೆ.ಲಕ್ಷ್ಮಣ್, ಅನಿಲ್ ಜೋಶಿ, ರವಿಶಂಕರ್, ಪಿ.ಡಿ. ಗೌತಮ್, ಎಲ್.ಡಿ. ಜೋಶಿ, ವಿಎಚ್ಪಿ ನರಸಿಂಹಮೂರ್ತಿ, ನಗರಸಭಾ ಮಾಜಿ ಉಪಾಧ್ಯಕ್ಷ ರಮೇಶ್ ಗುಪ್ತ, ಮಾತೆಯರಾದ ಭಾರತಿ, ಸುಷ್ಮಾ, ಮೀರಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮ ನಿರ್ವಹಣೆಗೆ ರಾಜ್ಯಮಟ್ಟದ ಸಮಿತಿ ರಚಿಸಲಾಯಿತು.