ಉತ್ತಮ ಸಮಾಜಕ್ಕೆ ಭಾಗವತ ಸಪ್ತಾಹ ಸಹಕಾರಿ: ಆರ್.ಎಂ. ಹೆಗಡೆ ಬಾಳೇಸರ

KannadaprabhaNewsNetwork |  
Published : Nov 05, 2026, 02:30 AM IST
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಭಾಗವತ ಸಪ್ತಾಹದಲ್ಲಿ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿದರು. | Kannada Prabha

ಸಾರಾಂಶ

ಆರ್‌ಎಫ್ಒ ಉಷಾ ಕೆ.ಆರ್. ಮಾತನಾಡಿ, ಸಪ್ತಾಹದಲ್ಲಿ ಪಾಲ್ಗೊಂಡು ಭಾಗತವ ಸಪ್ತಾಹದಂತ ಕಾರ್ಯಕ್ರಮವನ್ನು ಎಲ್ಲರೂ ಕೇಳಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಧಾರ್ಮಿಕ ಭಾವನೆಯನ್ನು ಬೆಳೆಸಬೇಕಾಗಿದೆ. ಗುರು- ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕಾಗಿದೆ ಎಂದರು.

ಸಿದ್ದಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ, ಧಾರ್ಮಿಕ ಚಿಂತನೆಗೆ ಹಾಗೂ ಜ್ಞಾನವನ್ನು ಹೆಚ್ಚಿಸಿಕೊಳ್ಳಲಿಕ್ಕೆ ಭಾಗವತ ಸಪ್ತಾಹ ಹೆಚ್ಚು ಉಪಯುಕ್ತ ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.

ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಗಜಾನನೋತ್ಸವ ಸಮಿತಿ, ಗೆಳೆಯರ ಬಳಗ ಹಾರ್ಸಿಕಟ್ಟಾ ಇವರ ಸಹಯೋಗದಲ್ಲಿ ನಡೆದ ಭಾಗವತ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾಗವತ ಸಪ್ತಾಹಗಳು ಹೆಚ್ಚೆಚ್ಚು ಎಲ್ಲ ಕಡೆಯಲ್ಲಿಯೂ ನಡೆಯುವಂತಾಗಬೇಕು. ಆ ಮೂಲಕ ಸಮಾಜ ಜಾಗೃತಿ ಆಗಬೇಕಾಗಿದೆ ಹಾಗೂ ಸನಾತನ ಸಂಸ್ಕೃತಿ, ಪರಂಪರೆ ಮತ್ತಷ್ಟು ಎತ್ತರಕ್ಕೆರುತ್ತದೆ ಎಂದರು.

ಆರ್‌ಎಫ್ಒ ಉಷಾ ಕೆ.ಆರ್. ಮಾತನಾಡಿ, ಸಪ್ತಾಹದಲ್ಲಿ ಪಾಲ್ಗೊಂಡು ಭಾಗತವ ಸಪ್ತಾಹದಂತ ಕಾರ್ಯಕ್ರಮವನ್ನು ಎಲ್ಲರೂ ಕೇಳಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಧಾರ್ಮಿಕ ಭಾವನೆಯನ್ನು ಬೆಳೆಸಬೇಕಾಗಿದೆ. ಗುರು- ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕಾಗಿದೆ. ಭಾಗವತ ಸಪ್ತಾಹದಿಂದ ಹೆಚ್ಚು ಜ್ಞಾನ ಬೆಳೆಸಿಕೊಳ್ಳಲು ಸಾಧ್ಯ ಎಂದರು.

ಟಿಎಸ್ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ನಿವೃತ್ತ ಮುಖ್ಯಾಧ್ಯಾಪಕ ಜಿ.ಜಿ. ಹೆಗಡೆ ಬಾಳಗೋಡ, ನಿಡಗೋಡ ಉಪವಲಯ ಡಿಆರ್‌ಎಫ್ಒ ಅಡಿವೆಪ್ಪ ಕಣ್ಣೂರು, ಶ್ರೀಧರ ಭಟ್ಟ ಮಾಣಿಕ್ನಮನೆ, ಶ್ರೀಕಾಂತ ಶಾನಭಾಗ, ಸಿ.ಎನ್. ಹೆಗಡೆ, ಗುರುಮೂರ್ತಿ ಶಾನಭಾಗ, ರಾಜಾರಾಮ ಹೆಗಡೆ, ಗಣೇಶ ಗೌಡ, ಶ್ರೀಧರ ನಾಯ್ಕ ಇತರರಿದ್ದರು.

ಇದೇ ಸಂದರ್ಭದಲ್ಲಿ ಸಂಘಟಕರು ಹಾಗೂ ಕೆ.ಟಿ. ಗೌಡ ಮಾದಲಮನೆ ಅವರು ಭಾಗವತ ಸಪ್ತಾಹ ನಡೆಸಿಕೊಟ್ಟ ನಾರಾಯಣ ದಾಸ ಹೀಪನಳ್ಳಿ, ಕೆ.ಪಿ. ಹೆಗಡೆ, ರಾಮದಾಸ್ ಭಟ್ಟ ಶಿರಸಿ ಅವರನ್ನು ಗೌರವಿಸಿದರು. ಕೀರ್ಥನಾಕಾರರಾದ ನಾರಾಯಣ ದಾಸ ಹೀಪನಳ್ಳಿ ಅವರು ಸಂಘಟಕರನ್ನು ಹಾಗೂ ಕಾರ್ಯಕ್ರಮದ ಪ್ರಾಯೋಜಕರನ್ನು ಗೌರವಿಸಿದರು.

ನಾರಾಯಣ ದಾಸ ಹೀಪನಳ್ಳಿ ಅವರು ಭಾಗತವ ಸಪ್ತಾಹದ ಸಮಾರೋಪದಲ್ಲಿ ಭಕ್ತ ಸುಧಾಮ ಹರಿಕೀರ್ಥನೆ ನಡೆಸಿಕೊಟ್ಟರು. ಕೆ.ಪಿ. ಹೆಗಡೆ ಹಾಗೂ ರಾಮದಾಸ ಭಟ್ಟ ಶಿರಸಿ ಅವರು ಹಾರ್ಮೋನಿಯಂನಲ್ಲಿ ಹಾಗೂ ತಬಲಾದಲ್ಲಿ ಸಾಥ್ ನೀಡಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ