ಭಾಗವತವು ಭಗವಂತನಲ್ಲಿ ನಂಬಿಕೆ ಹೆಚ್ಚಿಸುತ್ತದೆ: ಡಾ. ಜಯರಾಮ್‌

KannadaprabhaNewsNetwork |  
Published : May 07, 2026, 02:15 AM IST
       ಸಿಕೆಬಿ-4 ಕೈವಾರ ತಾತಯ್ಯನವರ 300 ನೇ ಜಯಂತೋತ್ಸವದ ಕಾರ್ಯಕ್ರಮದ ಅಂಗವಾಗಿ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ಸಪ್ತಾಹವನ್ನು ನಗರದ ಧರ್ಮಛತ್ರದ ರಸ್ತೆಯ  ಶ್ರೀವಿದ್ಯಾಗಣಪತಿ ದೇವಾಲಯದಲ್ಲಿ -ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್  ಉದ್ಘಾಟನೆ ಮಾಡಿದರು | Kannada Prabha

ಸಾರಾಂಶ

ಭಗವಂತನ ಅವತಾರ ಮತ್ತು ಲೀಲೆಗಳನ್ನು ಕುರಿತು ಭಾಗವತವು ರಚಿತವಾಗಿದೆ. ಭಾಗವತದಲ್ಲಿರುವ ಕಥೆಗಳು ಮಹತ್ವಪೂರ್ಣವಾದುದು. ಭಾಗವತವು ಗುರುಉಪದೇಶವಿದ್ದಂತೆ. ಗುರು ಉಪದೇಶವೆಂದರೆ ಆತ್ಮದ ಉದ್ಧಾರ. ಭಾಗವತದ ಸಂದೇಶಗಳಿಂದ ಆತ್ಮಪ್ರಕಾಶವಾಗುತ್ತದೆ.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಪರಮಾತ್ಮನನ್ನು ಯಾರು ನಂಬುತ್ತಾರೋ, ಅಂತಹವರನ್ನು ಭಗವಂತ ಎಂದಿಗೂ ಕೈಬಿಡುವುದಿಲ್ಲ. ದೇವರನ್ನು ನಂಬಬೇಕು. ಅಂತಹ ನಂಬಿಕೆಯು ಹೆಚ್ಚುವಂತೆ ಶ್ರೀಭಾಗವತವು ಮಾಡುತ್ತದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಅಭಿಪ್ರಾಯಪಟ್ಟರು.

ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ಒಂದು ವರ್ಷ ಕಾಲ ಹಮ್ಮಿಕೊಳ್ಳಲಾಗಿರುವ ಕೈವಾರ ತಾತಯ್ಯನವರ 300 ನೇ ಜಯಂತ್ಯುತ್ಸವದ ಕಾರ್ಯಕ್ರಮದ ಅಂಗವಾಗಿ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ಸಪ್ತಾಹವನ್ನು ನಗರದ ಧರ್ಮಛತ್ರದ ರಸ್ತೆಯ ಶ್ರೀವಿದ್ಯಾಗಣಪತಿ ದೇವಾಲಯದಲ್ಲಿ ಉದ್ಘಾಟಿಸಿ ಮಾತನಾಡಿದರು.

ಭಗವಂತನ ಅವತಾರ ಮತ್ತು ಲೀಲೆಗಳನ್ನು ಕುರಿತು ಭಾಗವತವು ರಚಿತವಾಗಿದೆ. ಭಾಗವತದಲ್ಲಿರುವ ಕಥೆಗಳು ಮಹತ್ವಪೂರ್ಣವಾದುದು. ಭಾಗವತವು ಗುರುಉಪದೇಶವಿದ್ದಂತೆ. ಗುರು ಉಪದೇಶವೆಂದರೆ ಆತ್ಮದ ಉದ್ಧಾರ. ಭಾಗವತದ ಸಂದೇಶಗಳಿಂದ ಆತ್ಮಪ್ರಕಾಶವಾಗುತ್ತದೆ.ಗುರುಗಳು ಹೇಳಿರುವ ಸಾಧನೆಯ ಮಾರ್ಗವನ್ನು ಅನುಸರಿಸಿದರೆ ಪರಮಾತ್ಮನ ದರ್ಶನವನ್ನು ಮಾಡಬಹುದು. ನಮ್ಮಲ್ಲಿರುವ ಶತ್ರುಗಳಾದ ಆಸೆ, ಕ್ರೋಧ, ದ್ವೇಷ, ಮಾತ್ಸರ್ಯಗಳನ್ನು ಹೊಡೆದೊಡಿಸಲು ಶ್ರೀ ಭಾಗವತವು ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಖ್ಯಾತ ಭಾಗವತ ಪ್ರವಚನಕಾರ ಮಂಕಾಲ ಶ್ರೀಹರಿಶರ್ಮ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನವನ್ನು ನೀಡಿದರು. ಪ್ರವಚನದಲ್ಲಿ ಪೋತನ ಭಾಗವತದ ಹಲವಾರು ಘಟ್ಟಗಳನ್ನು ವಿವರಿಸಿ ವ್ಯಾಖ್ಯಾನಿಸಿದರು. ಏಳು ದಿನಗಳ ಕಾಲ ಸಂಜೆ ೬.೩೦ ರಿಂದ ೮ ಗಂಟೆವರೆಗೂ ಈ ಭಾಗವತ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೂ ಮುನ್ನ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ವಿದ್ವಾನ್ ಚಿಂತಲಪಲ್ಲಿ ಸೋಮಶೇಖರ್ ಹಾಗೂ ಚಿಂತಲಪಲ್ಲಿ ಕಿಶೋರ್ ಕುಮಾರ್ ಶಿಷ್ಯವೃಂದದಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದುಷಿ ಶಾಂತಲಾ ಅರಸ್ ತಂಡ ಪ್ರಾರ್ಥಿಸಿತು. ಕಾರ್ಯಕ್ರಮದಲ್ಲಿ ಕೈವಾರ ಯೋಗಿನಾರೇಯಣ ಟ್ರಸ್ಟ್ ಉಪಾಧ್ಯಕ್ಷ ಜೆ. ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ. ಸತ್ಯನಾರಾಯಣ, ಸದಸ್ಯರಾದ ಕೆ. ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ವಿ. ಸುರೇಶ್, ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಕೆ.ವಿ. ವಿದ್ಯಾಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್‌ಕಿರಣ್, ರಾಮಕೋಟಿಯ ಅಧ್ಯಕ್ಷ ಪುರದಗಡ್ಡೆ ಕೃಷ್ಣಪ್ಪ, ರಾಮಕೋಟಿ ಉಪಾಧ್ಯಕ್ಷ ರಂಗಣ್ಣ, ಜಿ.ಎನ್. ವೆಂಕಟೇಶ್, ನಿವೃತ್ತ ಶಿಕ್ಷಕ ಗುಡಿಬಂಡೆ ಗಂಗಾಧರ್, ಗಾಯಿತ್ರಿ ಮಹಿಳಾ ಮಂಡಳಿ ಸದಸ್ಯರು, ಬಾಲಕೃಷ್ಣ ಭಜನಾ ಮಂಡಳಿಯ ಕಲಾವಿದರು, ಲಲಿತಾ ಮಾತೃ ಮಂಡಳಿ ಸದಸ್ಯರು, ರಾಮಕೊಟಿ ಸದಸ್ಯರು ಮತ್ತು ಅಧಿಕ ಸಂಖ್ಯೆಯಲ್ಲಿ ಭಕ್ತರು ಇದ್ದರು.

ಸಿಕೆಬಿ-4

ಕೈವಾರ ತಾತಯ್ಯನವರ 300 ನೇ ಜಯಂತ್ಯುತ್ಸವದ ಕಾರ್ಯಕ್ರಮದ ಅಂಗವಾಗಿ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ಸಪ್ತಾಹವನ್ನು ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆ ವಿಮೆ ವಿತರಣೆಯಲ್ಲಿ ಅನ್ಯಾಯ ಖಂಡಿಸಿ ಬಿಜೆಪಿ ಪ್ರತಿಭಟನೆ
ಡೆಂಘೀ ತಡೆಗೆ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಿ