ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭುವಿಗೆ ಗಂಗೆಯನ್ನು ತಂದ ಭಗೀರಥ ಮಹರ್ಷಿಗಳ ಜಯಂತಿಯನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಚರಣೆ ಮಾಡಲಾಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸೂರ್ಯವಂಶದ ರಾಜನಾದ ಭಗೀರಥ ಮಹಾರಾಜ ತನ್ನ ಜನರಿಗಾಗಿ ಶಿವನ ಕುರಿತು ತಪಸ್ಸು ಮಾಡಿ ಗಂಗೆಯನ್ನು ಧರೆಗೆ ತಂದ ಮಹಾ ಪುರುಷ. ಅವರ ತತ್ವ ಸಿದ್ದಾಂತಗಳು ಇಂದಿಗೂ ಸಹ ಪ್ರಸ್ತುತವಾಗಿದೆ. ಭಗೀರಥ ಮಹಾರಾಜ ಶಿವನ ಕುರಿತು ಛಲ ಬಿಡದೇ ತಪಸ್ಸು ಮಾಡಿ ಧರೆಗೆ ನೀರು ತರುವ ಮೂಲಕ ಅದರ್ಶವಾಗಿದ್ದಾರೆ. ಅವರ ತತ್ವ ಆದರ್ಶವನ್ನು ನಾವೆಲ್ಲರು ಮೈಗೂಡಿಸಿಕೊಳ್ಳೋಣ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಭಗೀರಥ ಮಹರ್ಷಿಗಳ ತಪೋಶಕ್ತಿಗೆ ಶಿವನೇ ಪ್ರತ್ಯಕ್ಷವಾಗಿ, ಧರೆಗೆ ಗಂಗೆಯನ್ನು ಇಳಿಸಿದರು ಎಂಬ ಸತ್ಯ ಘಟನೆಯನ್ನು ನಾವೆಲ್ಲರು ಅರಿತುಕೊಳ್ಳಬೇಕಾಗಿದೆ. ಛಲ ಬಿಡದೇ ಗಂಗೆಯನ್ನು ಭೂಮಿಗೆ ತರಲು ಭಗೀರಥ ಮಹರ್ಷಿಗಳು ಪಟ್ಟ ಶ್ರಮವನ್ನು ಈಗ ಭಗೀರಥ ಪ್ರಯತ್ನ ಮಾಡು ಎಂದು ನಾವೆಲ್ಲರು ಹೇಳುತ್ತಿದ್ದೇವೆ. ಇಂಥ ಮಹರ್ಷಿಗಳ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಅವರ ತತ್ವ ಅದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಮುಖಂಡರಾದ ಶಿವಮೂರ್ತಿ, ಜಿ.ಪಂ. ಮಾಜಿ ಸದಸ್ಯ ಸೋಮನಾಯಕ, ತಾ.ಪಂ. ಮಾಜಿ ಸದಸ್ಯ ಎಂ. ಮಹದೇವಶೆಟ್ಟಿ, ಸೈಯದ್ ರಫಿ, ಎಪಿಎಂಸಿ ಅಧ್ಯಕ್ಷ ಸೋಮೇಶ್, ಮಾಜಿ ಅಧ್ಯಕ್ಷ ಡಿ. ನಾಗೇಂದ್ರ, ನಿರ್ದೇಶಕ ಅಲೂರು ಪ್ರದೀಪ್, ಉಮೇಶ್, ಅರುಣ್‌ಕುಮಾರ್, ಗೌಡಹಳ್ಳಿ ರಾಜೇಶ್, ಪುಟ್ಟಸ್ವಾಮಿ, ಸ್ವಾಮಿ, ರವಿಗೌಡ, ಮೋಹನ್ ನಾಗು, ಅಕ್ಷಯ್, ನಗರಸಭಾ ಸದಸ್ಯೆ ಚಿನ್ನಮ್ಮ, ಜಿ.ಪಂ. ಮಾಜಿ ಸದಸ್ಯ ಕಾವೇರಿ ಶಿವಕುಮಾರ್, ಸೇವಾದಳದ ಅಧ್ಯಕ್ಷ ಹೊಂಗನೂರು ಜಯರಾಜ್, ಶಿವಸ್ವಾಮಿ, ನಾಗರಾರ್ಜುನಪ್ರಥ್ವಿ, ಎಎಚ್‌ಎನ್ ಖಾನ್, ನಾಗೇಂದ್ರ ನಾಯಕ, ದೊಡ್ಡಮೋಳೆ ಪುಟ್ಟಸ್ವಾಮಿ, ಅಯೂಬ್‌ಖಾನ್ ಇದ್ದರು.