ಉದ್ಯಮಿ ಪ್ರೀತಮ್ ಪಾಲನಕರ ಆತ್ಮಹತ್ಯೆ

KannadaprabhaNewsNetwork |  
Published : May 16, 2024, 12:50 AM IST
ಪ್ರೀತಮ ಪಾಲನಕರ | Kannada Prabha

ಸಾರಾಂಶ

ಪ್ರೀತಮ್ ಪಾಲನಕರ ಕಳೆದ 6 ತಿಂಗಳಿನಿಂದ ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಒತ್ತಡದಿಂದ ಇದ್ದನು. ಮೇ ೧೫ರಂದು ಬೆಳಗ್ಗೆ 10.30 ಗಂಟೆಗೆ ಮಲಗುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ಬಿಳಿ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಶಿರಸಿ: ನಗರದ ಪ್ರತಿಷ್ಠಿತ ಕಾಮಧೇನು ಜ್ಯುವೆಲರಿ ಬಂಗಾರದ ಅಂಗಡಿಯ ಮಾಲೀಕನ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇವಿಕೆರೆಯ ಶಕ್ತಿನಗರದ ಪ್ರೀತಮ್ ಪ್ರಕಾಶ ಪಾಲನಕರ(29) ಆತ್ಮಹತ್ಯೆಗೆ ಶರಣಾದ ಉದ್ಯಮಿ.

ಈತ ಕಳೆದ 6 ತಿಂಗಳಿನಿಂದ ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಒತ್ತಡದಿಂದ ಇದ್ದನು. ಮೇ ೧೫ರಂದು ಬೆಳಗ್ಗೆ 10.30 ಗಂಟೆಗೆ ಮಲಗುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ಬಿಳಿ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನ ಸಾವಿನಲ್ಲಿ ಸಂಶಯವಿದೆ ಎಂದು ತಂದೆ ಪ್ರಕಾಶ ಗಜಾನನ ಪಾಲನಕರ(57) ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಸಿಪಿಐ ಶಶಿಕಾಂತ ವರ್ಮ, ಹೊಸ ಮಾರುಕಟ್ಟೆ ಠಾಣೆ ಪಿಎಸ್ಐ ರತ್ನಾ ಕುರಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಳ್ಳತನ ಆರೋಪಿಗಳ ಬಂಧನ

ಶಿರಸಿ: ನಗರದ ಕುಮಟಾ- ಶಿರಸಿ ರಸ್ತೆಯ ಭಾರತ್ ಗ್ಯಾಸ್ ಆಫೀಸ್ ಮತ್ತು ಕರಿಗುಂಡಿ ರಸ್ತೆಯ ಬಾರ್‌ನಲ್ಲಿದ್ದ ನಗದು ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಭಟ್ಕಳದ ಮೋಹಮದ್ ರಾಯಿಕ್ ಮೋಹಮದ್ ಗೌಸ್(24), ಅಬ್ರಾರ್ ಶೇಖ ಮೊಹಿದ್ದೀನ್ ಶೇಖ(23) ಹಾಗೂ ಮೊಹಮ್ಮದ್ ತಾಬಿಷ್ ಮೋಹಮದ್ ಗೌಸ್‌(23) ಬಂಧಿತರಾಗಿದ್ದಾರೆ.ಮೂವರು ಸೇರಿಕೊಂಡು ಕುಮಟಾ ರಸ್ತೆಯ ಭಾರತ್ ಗ್ಯಾಸ್ ಆಫೀಸ್ ಶೇಟ್ರಸ್‌ ಬೀಗ ಮುರಿದು ₹98 ಸಾವಿರ ನಗದು ಹಾಗೂ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಾರ್ ಕಳ್ಳತನ ನಡೆಸಿ ಪರಾರಿಯಾಗಿ, ಮೂವರು ಆರೋಪಿತರು ಮೇ ೧೪ರಂದು ಪುನಃ ಶಿರಸಿಗೆ ಕಳ್ಳತನ ಮಾಡಲೆಂದು ಬಂದಿರುವ ಬಗ್ಗೆ ಮಾಹಿತಿಯನ್ನು ಪಡೆದು ಕಾರ್ಯಾಚಣೆ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮಣಿಪಾಲದಲ್ಲಿ ಬಾರ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಅಬ್ರಾ‌ರ್ ಶೇಖ ಮೊಹಿದ್ದೀನ್ ಶೇಖನ್ನು ವಿಚಾರಿಸಿದಾಗ ಬೈಂದೂರು, ಭಟ್ಕಳ, ಶಿರಾಳಕೊಪ್ಪ, ಹೊನ್ನಾವರ ಠಾಣೆಗಳಲ್ಲಿ ಕಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿದೆ.ಕಳ್ಳತನಕ್ಕೆ ಬಳಿಸಿದ ₹೫ ಲಕ್ಷ ಮೌಲ್ಯದ ಸ್ವಿಪ್ಟ್‌ ಕಾರ್, ₹2 ಸಾವಿರ ನಗದು, ₹೮ ಸಾವಿರ ಮೌಲ್ಯದ ಗ್ಯಾಸ್ ಕಟ್ಟರ್ ಮಷಿನ್, ಕಬ್ಬಿಣದ ರಾಡ್, ಸ್ಕೂ ಡ್ರೈಯರ್, ಕಪ್ಪು ಬಣ್ಣದ ೨ ಕ್ಯಾಪ್, ಹಳದಿ ಮತ್ತು ಕೇಸರಿ ಬಣ್ಣದ ಹ್ಯಾಂಡ್ ಗ್ಲೌಸ್, ಕಪ್ಪು ಬಣ್ಣದ ನಾಲ್ಕು ಕ್ಯಾಪ್‌ಗಳು, ಕಟ್ಟಿಗೆಯ ಹಿಡಿಕೆಯ ಉಳಿ ಸೇರಿದಂತೆ ಒಟ್ಟೂ ₹5.10 ಲಕ್ಷ ಮೌಲ್ಯದ ವಿವಿಧ ಸ್ವತನ್ನು ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ, ಡಾಂಡೇಲಿ ಡಿಎಸ್‌ಪಿ ಶಿರಸಿ ಪ್ರಭಾರ ಡಿಎಸ್‌ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಶಿರಸಿ ಸಿಪಿಐ ಶಶಿಕಾಂತ ವರ್ಮಾ, ನಗರ ಠಾಣೆ ಪಿಎಸ್‌ಐ ನಾಗಪ್ಪ, ತನಿಖಾ ಪಿಎಸ್‌ಐ ಜ್ಞಾನಶೇಖರ, ಹೊಸ ಮಾರುಕಟ್ಟೆ ಠಾಣೆ ಪಿಎಸ್ಐ ರತ್ನಾ ನೇತೃತ್ವದಲ್ಲಿ ಹೊಸ ಮಾರುಕಟ್ಟೆ ಹಾಗೂ ನಗರ ಠಾಣೆಯ ಎಎಸ್ಐಗಳಾದ ಅಶೋಕ ರಾಠೋಡ್, ನೆಲ್ಸನ್, ಹೊನ್ನಪ್ಪ ಆಗೇರ್, ಸಿಬ್ಬಂದಿಗಳಾದ ಪ್ರಶಾಂತ ಪಾವಸ್ಕರ, ಮಧುಕರ ಗಾಂವಕರ, ಪ್ರವೀಣ ಎನ್, ಸದ್ದಾ ಬಿ, ಮಂಜುನಾಥ ಕಾಶೀಕೊವಿ, ಮಹಾಂತೇಶ ಬಾರಕೇರ ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಟೆಕ್ನಿಕಲ್ ಸೇಲ್ ಸಿಬ್ಬಂದಿಗಳಾದ ಉದಯ ಗುನಗಾ, ರಮೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗರ ಆಕ್ರೋಶ : ರೈಲ್ವೆ ಪರೀಕ್ಷೆ ಮುಂದಕ್ಕೆ
ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆ : ಕೇಂದ್ರ ಷರತ್ತಿನ ಅಸ್ತು