ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸಾಧನೆಗೈದ ಯುವಕ, ಯುವತಿಯರಿಗೆ ವಿಶೇಷ ಗೌರವಾನ್ವಿತರಿಗೆ ಹಾಗೂ ದಾನಿಗಳಿಗೆ ಸನ್ಮಾನ
ಹನುಮಸಾಗರ: ಸಮೀಪದ ಜುಂಜಲಕೊಪ್ಪ ಗ್ರಾಮದಲ್ಲಿ ರಾಜಋಷಿ ಶ್ರೀ ಭಗೀರಥ ಜಯಂತಿಯ ನಿಮಿತ್ತ ಗುರುವಾರ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗ್ರಾಮದ ಶ್ರೀಲಕ್ಷ್ಮೀ ದೇವಸ್ಥಾನದಿಂದ ಹೊರಟ ಶ್ರೀ ಭಗೀರಥ ಅವರ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಮುತ್ತೈದೆಯರು ಕಳಸ-ಕನ್ನಡಿ ಹಿಡಿದು, ವಾದ್ಯಮೇಳಗಳೊಂದಿಗೆ ಪಾಲ್ಗೊಂಡಿದ್ದರು. ಅಂತಿಮವಾಗಿ ಶ್ರೀ ಭಗೀರಥ ವೃತ್ತ ತಲುಪಿತು. ಆನಂತರ ವೇದಿಕೆ ಕಾರ್ಯಕ್ರಮವನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದರು. ಅದರಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸಾಧನೆಗೈದ ಯುವಕ, ಯುವತಿಯರಿಗೆ ವಿಶೇಷ ಗೌರವಾನ್ವಿತರಿಗೆ ಹಾಗೂ ದಾನಿಗಳಿಗೆ ಸನ್ಮಾನ ನೆರವೇರಿಸಲಾಯಿತು. ಟ್ರ್ಯಾಕ್ಟರ್ ಮಾಲೀಕರಿಂದ ಅನ್ನ ಪ್ರಸಾದ ನೆರವೇರಿಸಲಾಯಿತು.
ಉಪ್ಪಾರ ಸಮಾಜದ ಭಗೀರಥನಾಂದ ಪುರಿ ಸ್ವಾಮೀಜಿ, ಭಗೀರಥ ಸಮಾಜದ ಗುರು-ಹಿರಿಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.