ಗಂಗೆಯನ್ನು ಭೂಮಿಗೆ ತಂದ ಪುಣ್ಯಪುರುಷ ಭಗೀರಥ ಮಹರ್ಷಿ: ಮುಬಾರಕ್

KannadaprabhaNewsNetwork |  
Published : Apr 24, 2026, 12:30 AM IST
23 ಬೀರೂರು 1ಬೀರೂರಿನ ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಶ್ರೀ ಭಗೀರಥ ಮಹರ್ಷಿ ಜಯಂತಿಯ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್  ಶ್ರೀ ಭಗೀರಥ ಮಹರ್ಷಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿದರು.ಎನ್.ಮುಬಾರಕ್, ಚಂದ್ರಶೇಖರ್, ಬಿ.ಜಿ.ಮೈಲಾರಪ್ಪ ಮತ್ತಿತರಿದ್ದರು. | Kannada Prabha

ಸಾರಾಂಶ

ಬೀರೂರುಭಾರತೀಯರ ಪಾಲಿಗೆ ಅತಿ ಪವಿತ್ರವೆನಿಸಿದ ದೇವ ಸ್ವರೂಪಿ ಗಂಗೆಯನ್ನು ಕಠಿಣ ಜಪ ತಪದಿಂದ ಭೂಮಿಗೆ ಅವತರಿಸುವಂತೆ ಮಾಡಿದ ಪುಣ್ಯ ಪುರುಷ ಭಗೀರಥ ಮಹರ್ಷಿ ಎಂದು ಪುರಸಭೆ ಆಶ್ರಯ ಸಮಿತಿ ಸದಸ್ಯ ಎನ್. ಮುಬಾರಕ್ ಹೇಳಿದರು.

ಬೀರೂರಿನ ಪುರಸಭೆ ಕಚೇರಿಯಲ್ಲಿ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ, ಬೀರೂರು

ಭಾರತೀಯರ ಪಾಲಿಗೆ ಅತಿ ಪವಿತ್ರವೆನಿಸಿದ ದೇವ ಸ್ವರೂಪಿ ಗಂಗೆಯನ್ನು ಕಠಿಣ ಜಪ ತಪದಿಂದ ಭೂಮಿಗೆ ಅವತರಿಸುವಂತೆ ಮಾಡಿದ ಪುಣ್ಯ ಪುರುಷ ಭಗೀರಥ ಮಹರ್ಷಿ ಎಂದು ಪುರಸಭೆ ಆಶ್ರಯ ಸಮಿತಿ ಸದಸ್ಯ ಎನ್. ಮುಬಾರಕ್ ಹೇಳಿದರು,

ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಶ್ರೀ ಭಗೀರಥ ಜಯಂತಿ ಅಂಗವಾಗಿ ಶ್ರೀ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಬಸವಣ್ಣ, ಅಂಬೇಡ್ಕರ್, ಭಗೀರಥರ ಜಯಂತಿಗಳನ್ನು ಕೇವಲ ಒಂದು ಸಮುದಾಯಕ್ಕೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಜಯಂತಿ ಎಲ್ಲಾ ಸಮುದಾಯದ ಕಾರ್ಯಕ್ರಮಗಳಾಗಿ ಆಚರಿಸಬೇಕು ಎಂದು ಕಿವಿಮಾತು ಹೇಳಿದರು.

ಉಪ್ಪಾರ ಸಮಾಜದ ಷಣ್ಮುಖಪ್ಪ ಮಾತನಾಡಿ, ಭಗೀರಥನ ಮಾತೃ, ಪಿತೃಗಳ ವಾತ್ಸಲ್ಯ ನಮಗೆ ಆದರ್ಶ ಪ್ರಾಯವಾಗಬೇಕು. ಜಲಜಾಗೃತಿ, ಆದರ್ಶ ಪುರುಷರ ಜನಜಾಗೃತಿ ಎರಡೂ ಆಗಬೇಕು. ಇವನ್ನು ಉಳಿಸಿ ಬೆಳೆಸಿ ಕಡೆಗೆ ಜಾಗೃತಿಯಾಗಬೇಕು ಎಂದು ತಿಳಿಸಿದರು. ಪರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಜಯಂತಿ ನೆಪದಲ್ಲಿ ಆದರ್ಶ ಪುರುಷರ ಭಾವಚಿತ್ರಕ್ಕೆ ಅಲಂಕಾರ ಮಾಡುತ್ತೇವೆ. ಆದರೆ ಅವರ ಆದರ್ಶಗಳನ್ನು ಮರೆಯುತ್ತಿದ್ದೇವೆ. ಮೊದಲು ಅವರ ಆದರ್ಶಗಳ ಪಾಲನೆ ನಮ್ಮ ಗುರಿ ಯಾಗಬೇಕು. ಆದರ್ಶಪುರುಷರ ಚಿಂತನೆ ಪ್ರತಿಯೊಬ್ಬರ ಮನೆ, ಮನ ಮುಟ್ಟುವಂತಾದಾಗ ಜಯಂತಿ ಆಚರಣೆಗೆ ಬೆಲೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.ಪುರಸಭೆ ಆಶ್ರಯ ಸಮಿತಿ ಸದಸ್ಯರಾದ ಬಿ.ಟಿ.ಚಂದ್ರಶೇಖರ್, ಬಿ.ಜಿ.ಮೈಲಾರಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಪುರಸಭೆ ಸಿಬ್ಬಂದಿಗಳಾದ ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್,ನೂರುದ್ದೀನ್ ,ಜಯಮ್ಮ, ಲಿಂಗರಾಜು, ಇಂಜಿನಿಯರ್ ವೀಣಾ, ಕರಿಯಪ್ಪ,ರೇಣುಕಮ್ಮ, ಶಿಲ್ಪ, ಸ್ವರೂಪ,ಗಿರಿರಾಜ್, ಕುಮಾರಿ, ಲಕ್ಷ್ಮಿದೇವಿ ಮತ್ತು ಪುರಸಭೆ ಸಿಬ್ಬಂದಿಗಳು ಮತ್ತಿತರರಿದ್ದರು.23 ಬೀರೂರು 1ಬೀರೂರು ಪುರಸಭೆಯಲ್ಲಿ ಗುರುವಾರ ನಡೆದ ಶ್ರೀ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಶ್ರೀ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆಸಲ್ಲಿದರು. ಎನ್.ಮುಬಾರಕ್, ಚಂದ್ರಶೇಖರ್, ಬಿ.ಜಿ.ಮೈಲಾರಪ್ಪ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗೀರಥ ಮಹರ್ಷಿಗಳ ದೃಢ ಪ್ರಯತ್ನ ಎಲ್ಲರಿಗೂ ಸ್ಫೂರ್ತಿ
ಕುಡಿವ ನೀರಿನ ಘಟಕ ದುರಸ್ತಿಗೆ ಬಂದ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗೆ ಗ್ರಾಮಸ್ಥರ ಅಡ್ಡಿ