ಕನ್ನಡಪ್ರಭ ವಾರ್ತೆ ತುರ್ವಿಹಾಳ
ಪಟ್ಟಣದ ಮಹರ್ಷಿ ಸಮುದಾಯ ಭವನದಲ್ಲಿ ನಡೆದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಂತರ ಶರಣಬಸಪ್ಪ ಸಾಹುಕಾರ ಮಾತನಾಡಿ, ಅಂಬೇಡ್ಕರ್, ಬಸವಣ್ಣ, ಗಾಂಧೀಜಿ, ಬಾಬು ಜಗಜೀವನ ರಾವ್ ಅವರುಗಳು ಸಮಾಜದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದವರು. ಮನುಷ್ಯ ಹುಟ್ಟು-ಸಾವಿನ ನಡುವೆ ಈ ಭೂಮಿಯಲ್ಲಿ ತನ್ನ ಹೆಜ್ಜೆ ಗುರುತನ್ನು ಬಿಟ್ಟು ಹೋಗಬೇಕು ಆಗ ಸಮಾಜ ನಮ್ಮನ್ನು ನೆನೆಯುತ್ತದೆ ಎಂದರು.
ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಲಾಯಿತು. ನಂತರ ಪಾಲ್ಗೊಂಡ ಎಲ್ಲ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.ಸಿರಾಜ್ ಪಾಷಾ ದಳಪತಿ, ನಿಂಗಪ್ಪ ಕಟ್ಟಿಮನಿ, ಸಿದ್ದೇಶ್ವರ ಗುರಿಕಾರ, ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ನೌಕರಿ ಪಡೆದ ಯುವಕರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಎಮ್.ಡಿ.ಉಮರ್ ಸಾಬ್,ಶೇಷಗಿರರಾವ್ ಕುಲಕರ್ಣಿ,ಆರ್ ಶಿವನಗೌಡ, ದೋಡ್ಡಪ್ಪ ಕಲ್ಗೂಡಿ, ಶರಣಪ್ಪ ಹೊಸಗೌಡ್ರು, ಅಬುತುರಾಬ್ ಖಾಜಿ, ಕರಿಯಪ್ಪ ವಿರುಪಾಪುರ, ದುರುಗೇಶ ವಕೀಲರು,ಬಾಲಪ್ಪ ಕುಂಟೋಜಿ, ತಿರುಪತೇಪ್ಪ ನಾಯಕ, ಲಿಂಗರಾಜ ಎಲೆಕೂಡ್ಲಿಗಿ, ಯಲ್ಲಪ್ಪ ಭೋವಿ,ಫಕೀರಪ್ಪ ಭಂಗಿ, ಮರಿಯಪ್ಪ ಶಿಕ್ಷಕರು, ಶರಣಬಸವ ಗಡೇದ, ಬಸವರಾಜ ಡಣಾಪುರ, ನಿಂಗಪ್ಪ ಗೋಸಬಾಳ,ಭೀಮದಾಸ ದಾಸರ್, ಹಾಗೂ ಭಗೀರಥ ಸಮಾಜದ ಅಧ್ಯಕ್ಷರಾದ ವೆಂಕಪ್ಪ ರಾಮಣ್ಣ ಕಣ್ಣೂರ್, ಸಿದ್ದಪ್ಪ ಬಳಗಾನೂರ, ಶಿವಣ್ಣ ಗಡ್ಯಾಳ, ಅಡಿವಪ್ಪ ಉಪ್ಪಾರ್, ಚಿನ್ನಪ್ಪ ಕಾರಟಿಗಿ, ದೇವಪ್ಪ ಬಳಗಾನೂರ, ಚಿದಾನಂದಪ್ಪ, ಯಮನೂರ ಬಟಾರಿ, ವಿರುಪಣ್ಣ ಓಂ ಶಾಂತಿ, ಭೀಮಣ್ಣ ದೇಸಾಯಿ, ನಾಗರಾಜ್ ಗಡ್ಯಾಳ, ರಾಮಣ್ಣ ಮೂಲಿಮನಿ, ಉಪನ್ಯಾಸಕರಾದ, ಛತ್ರಪ್ಪ ಕುರಕುಂದಿ. ಹನುಮಂತ ಗಡ್ಡಿಹಾಳ, ಕರಿಯಪ್ಪ ಶಿಕ್ಷಕರಿದ್ದರು.