ಶಿಕ್ಷಣ ಕಾಶಿಯಂತೆ ಕಂಗೊಳಿಸುತ್ತಿರುವ ಭಾಗ್ಯವಂತಿ ಶಿಕ್ಷಣ ಸಂಸ್ಥೆ

KannadaprabhaNewsNetwork |  
Published : Feb 12, 2026, 03:30 AM IST
11ಐಎನ್‌ಡಿ1,ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಸರಸ್ವತಿ ಮೂರ್ತಿ ಅನಾವರಣ,ಡಾ.ಬಿ.ಆರ್‌.ಅಂಬೇಡ್ಕರ ಮೂರ್ತಿ ಪ್ರತಿಷ್ಠಾಪನೆ ಭೂಮಿಪೂಜೆ ಸಮಾರಂಭವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಶ್ರೀ ಭಾಗ್ಯವಂತಿ ಶಾಲಾ ಕಟ್ಟಡ ಸೌಂದರ್ಯವಷ್ಟೆ ಅಲ್ಲದೇ ಶಾಲೆಯಲ್ಲಿ ಬರೆದಿರುವ ಸ್ಲೋಗನ್‌ಗಳು ಮಾಹಾತ್ಮರ ವಾಣಿಗಳನ್ನು ಗಮನಿಸಿದರೇ ರೋಮಾಂಚನವಾಗುತ್ತದೆ. ಚವಡಿಹಾಳ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಆವರಣ ಶಿಕ್ಷಣ ಕಾಶಿಯಂತೆ ಕಂಗೊಳಿಸುತ್ತಿದೆ. ಇದಕ್ಕಾಗಿಯೇ ಶ್ರೀ ಸಂಗನಬಸವ ಶ್ರೀಗಳು ಮಕ್ಕಳೇ ದೇವರು, ಶಾಲೆಯೇ ಜೀವಂತ ದೇವರ ಗುಡಿ ಎಂದಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಶ್ರೀ ಭಾಗ್ಯವಂತಿ ಶಾಲಾ ಕಟ್ಟಡ ಸೌಂದರ್ಯವಷ್ಟೆ ಅಲ್ಲದೇ ಶಾಲೆಯಲ್ಲಿ ಬರೆದಿರುವ ಸ್ಲೋಗನ್‌ಗಳು ಮಾಹಾತ್ಮರ ವಾಣಿಗಳನ್ನು ಗಮನಿಸಿದರೇ ರೋಮಾಂಚನವಾಗುತ್ತದೆ. ಚವಡಿಹಾಳ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಆವರಣ ಶಿಕ್ಷಣ ಕಾಶಿಯಂತೆ ಕಂಗೊಳಿಸುತ್ತಿದೆ. ಇದಕ್ಕಾಗಿಯೇ ಶ್ರೀ ಸಂಗನಬಸವ ಶ್ರೀಗಳು ಮಕ್ಕಳೇ ದೇವರು, ಶಾಲೆಯೇ ಜೀವಂತ ದೇವರ ಗುಡಿ ಎಂದಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಪ್ರತಿಷ್ಠಿತ ಕನ್ನಡ, ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆ ಮತ್ತು ವಾಣಿಜ್ಯ ವಸತಿ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಬುಧವಾರ ಆಯೋಜಿಸಿದ ನೂತನ ಸರಸ್ವತಿ ಮೂರ್ತಿ ಅನಾವರಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ವರ ಮೂರ್ತಿ ಪ್ರತಿಷ್ಠಾಪನೆಯ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಶೈಕ್ಷಣಿಕ ಪ್ರಗತಿಗೆ ಬಂಥನಾಳದ ಸಂಗನಬಸವ ಶ್ರೀಗಳು ಸಾಕಷ್ಟು ಶ್ರಮಿಸಿದ್ದಾರೆ. ಇಂದು ನಾಡಿನಾದ್ಯಂತ ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಶಿಕ್ಷಣ ಪ್ರಗತಿಗೆ ಸಾಕಷ್ಟು ಶ್ರಮಿಸುತ್ತಿವೆ ಎಂದು ತಿಳಿಸಿದರು.ಶಿಕ್ಷಣ ವಿನಯ, ವಿನಮ್ರತೆ, ಮಾನವೀಯ ಮೌಲ್ಯಗಳನ್ನು ಕಲಿಸುವ ಮೂಲಕ ಸಂಸ್ಕಾರವಂತರನ್ನಾಗಿಸುತ್ತದೆ. ಶೈಕ್ಷಣಿಕ ಸಂಸ್ಥೆ ಕಟ್ಟಿ ಮೇಲೆತ್ತರಕ್ಕೆ ಬೆಳೆಯಲು ಡಾ.ಅಂಬೇಡ್ಕರ್‌ ಅವರ ವಿಧಾನವೇ ಕಾರಣ. ಸಂವಿಧಾನದ ಮೂಲಕ ಎಲ್ಲ ಸಮುದಾಯಗಳಿಗೆ ನ್ಯಾಯ ನೀಡಿದ ಏಕೈಕ ನಾಯಕ ಡಾ.ಅಂಬೇಡ್ಕರ್‌ ಮಾತ್ರ. ಶ್ರೀ ಭಾಗ್ಯವಂತಿ ವಿದ್ಯಾ ಸಂಸ್ಥೆಯಲ್ಲಿ ಸರಸ್ವತಿ ಮಾತೆ ಮೂರ್ತಿ ಅನಾವರಣ ಹಾಗೂ ಡಾ.ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪನೆಯ ಭೂಮಿಪೂಜೆ ಮಾಡಿರುವ ದಶವಂತ ಸಮಾಜದ ಕ್ರಮ ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಅಣ್ಣುಗೌಡ ಬಿರಾದಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಬಂಥನಾಳದ ಶ್ರೀವೃಷಬಲಿಂಗ ಮಹಾಶಿವಯೋಗಿಗಳು, ವೇ.ಕಲ್ಲಯ್ಯ ಹಿರೇಮಠ, ದುಂಡಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದರು. ಶ್ರೀ ಭಾಗ್ಯವಂತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ಬಿಸಿಎಂ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ್, ಬಿಇಒ ಎಸ್.ಎಸ್.ಮುಜಾವರ, ಶಿವಯೋಗೆಪ್ಪ ಚನಗೊಂಡ, ರಮೇಶ ಕಲ್ಯಾಣಿ, ಗಣಪತಿ ಬಾಣಿಕೋಲ, ಶಕೀಲ ಖಾಜಿ, ಶಾಕೀರ್‌ ಖಾಜಿ, ಜಟ್ಟೆಪ್ಪ ರವಳಿ, ರಮೇಶಗೌಡ ಬಿರಾದಾರ, ಆನಂದಪ್ಪ ಭತಗುಣಕಿ, ಬಿ.ಬಿ.ಪಾಟೀಲ, ರಾಮಣ್ಣ ದಶವಂತ, ಕಾಮಣ್ಣ ದಶವಂತ, ಪ್ರಾಚಾರ್ಯ ಚಂದ್ರಶೇಖರ ದಶವಂತ, ಆಡಳಿತಾಧಿಕಾರಿ ಅಪ್ಪು ದಶವಂತ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಂಸ್ಥೆಗೆ ಮತ್ತಷ್ಟು ಸಹಾಯ ಮಾಡಿಸುವೆ: ಮಾಜಿ ಸಚಿವ ಎಚ್.ಆಂಜನೇಯ ಭರವಸೆ

ದಶವಂತ ಕುಟುಂಬ ಅತ್ಯಂತ ಚಿಕ್ಕ ಸಮುದಾಯವಾಗಿದ್ದು, ಜನಪ್ರತಿನಿಧಿಯಾದವರು ಇಂತಹ ವರ್ಗಕ್ಕೆ ಸಹಾಯ ಮಾಡಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.ಡಾ.ಬಿ.ಆರ್.ಅಂಬೇಡ್ಕರ್‌ವರ ಮೂರ್ತಿ ಪ್ರತಿಷ್ಠಾಪನೆಯ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನಲ್ಲಿಗೆ ಬಂದವರಿಗೆ ಯಾರು ಎಂದು ಪ್ರಶ್ನೆ ಮಾಡದೆ ಕೆಲಸ ಕಾರ್ಯ ಮಾಡಿದ್ದೇನೆ. ಆದರೆ, ನನಗೆ ಆಯ್ಕೆ ಮಾಡಲ್ಲಿಲ್ಲ. ಚುನಾವಣೆಯಲ್ಲಿ ಹಣ ಹೆಚ್ಚು ಹಂಚಿದವರಿಗೆ ಆಯ್ಕೆ ಮಾಡಿದ್ದಾರೆ. ನನ್ನಲ್ಲಿ ಹಣ ಇಲ್ಲ, ಇಂದಿನ ರಾಜಕಾರಣ ಕಲುಷಿತವಾಗಿದೆ. ಅಭಿವೃದ್ಧಿ ಬೇಕಾಗಿಲ್ಲ, ಹಣ ಮುಖ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.೪೦ ವರ್ಷಗಳ ಹಿಂದೆ ವಿಜಯಪುರ ಜಿಲ್ಲೆ ಈ ಭಾಗ ಕಿತ್ತು ತಿನ್ನುವ ಬಡತನ, ನೀರಾವರಿ ವಂಚಿತ ಪ್ರದೇಶ, ಕೃಷಿ, ಕೈಗಾರಿಕೆಗಳಿಲ್ಲದೇ ಬಿಕೋ ಎನ್ನುತ್ತಿದ್ದ ಪ್ರದೇಶದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ವಲಸೆ ಹೋಗುತ್ತಿದ್ದರು. ಆದರೆ, ಇಂದು ವಿಜಯಪುರ ಜಿಲ್ಲೆಯ ಶಾಸಕರು ದೂರದೃಷ್ಟಿ ಹೊಂದಿದವರಾಗಿರುವುದರಿಂದ ನೀರಾವರಿ, ಕೃಷಿ, ಕೈಗಾರಿಕೆ ಅಭಿವೃದ್ಧಿಪಡಿಸಿ ಈ ಭಾಗ ಆರ್ಥಿಕತೆ ಮತ್ತು ಹೃದಯ ಶ್ರೀಮಂತರನ್ನಾಗಿಸಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ನ್ಯಾಯ, ನೀತಿವಂತ. ನಿಮ್ಮ ಕ್ಷೇತ್ರಕ್ಕೆ ಒಳ್ಳೆವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.ದಶವಂತ ಸಮುದಾಯ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯವಾದರೂ ಬದುಕು ಆದರ್ಶವಾಗಿಟ್ಟುಕೊಂಡು ಅತ್ಯಂತ ಎತ್ತರಕ್ಕೆ ಬೆಳೆಸಿಕೊಂಡಿದ್ದಾರೆ. ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ ಹಾಗೂ ಕುಟುಂಬ ವರ್ಗದವರಲ್ಲಿ ಸಂಸ್ಕಾರ ಎದ್ದು ಕಾಣುತ್ತಿದೆ. ದಶವಂತ ಕುಟುಂಬದ ಶೈಕ್ಷಣಿಕ ಪ್ರಗತಿ ಈ ಭಾಗದಲ್ಲಿ ಮತ್ತೊಬ್ಬರು ನೋಡಿ ಕಲಿಯುವಂತೆ ಮಾಡಿದ್ದಾರೆ.

-ಯಶವಂತರಾಯಗೌಡ ಪಾಟೀಲ,

ಶಾಸಕರು.ಒಂದು ಸಂಸ್ಥೆ ನಡೆಸಲು ಅನೇಕ ಕಷ್ಟಗಳು ಬರುತ್ತವೆ. ದಶವಂತ ಕುಟುಂಬ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಸಣ್ಣ ಕೆಲಸವಲ್ಲ. ಅಪ್ಪು ದಶವಂತ ನನಗೆ ಕೇವಲ ₹5 ಲಕ್ಷ ಅನುದಾನ ಕೇಳಿದಾಗ ₹50 ಲಕ್ಷ ಸರ್ಕಾರದಿಂದ ಸಹಾಯ ಮಾಡಿರುವೆ. 2ನೇ ಬಾರಿ ಬಂದಾಗ ₹50 ಲಕ್ಷ ಹೀಗೆ ಒಟ್ಟು ₹1 ಕೋಟಿ ಸಹಾಯ ಮಾಡಲಾಗಿದೆ. ಇಂದು ಕಾಂಗ್ರೆಸ್ ಸರ್ಕಾರದ ಸಮಾಜ ಕಲ್ಯಾಣ ಸಚಿವರು ಎಚ್.ಸಿ ಮಹಾದೇವಪ್ಪನವರು ನನಗೆ ಅಪ್ತರು. ಇವರಿಂದ ಈ ಸಂಸ್ಥೆಗೆ ಮತ್ತಷ್ಟು ಸಹಾಯ ಮಾಡಿಸುವೆ.

-ಎಚ್.ಆಂಜನೇಯ,
ಮಾಜಿ ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?
ಸಂಸ್ಕೃತಿಯ ಸಂರಕ್ಷಣೆ ಹೊಣೆ ಯುವಶಕ್ತಿ ಮೇಲಿದೆ: ಸಂಜೀವ ಚವ್ಹಾಣ