ವಿಶ್ವ ಕಂಡಂತಹ ಶ್ರೇಷ್ಠ ಕಾದಂಬರಿಕಾರರಲ್ಲಿ ಭೈರಪ್ಪ ಒಬ್ಬರು

KannadaprabhaNewsNetwork |  
Published : Oct 06, 2025, 01:00 AM IST
5ಎಚ್ಎಸ್ಎನ್14 | Kannada Prabha

ಸಾರಾಂಶ

ಡಾ. ಎಸ್ ಎಲ್ ಭೈರಪ್ಪನವರು ಕನ್ನಡ ಸಾಹಿತ್ಯ ಲೋಕದಲ್ಲಿ ಶಾಶ್ವತವಾದ ಹೆಜ್ಜೆ ಗುರುತನ್ನು ಸ್ಥಾಪಿಸಿದ್ದಾರೆ ಎಂದು ಅರಕಲಗೂಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುಂದರೇಶ್ . ಡಿ ಉಡುವರೇ ಅಭಿಪ್ರಾಯಪಟ್ಟರು. ಎಸ್ ಎಲ್ ಭೈರಪ್ಪನವರ ಸಾಹಿತ್ಯವನ್ನು ಅರ್ಥ ಮಾಡಿಕೊಂಡವರು ಎಂದೂ ತಪ್ಪನ್ನೆಸುವುದಿಲ್ಲ. ಇವರ ಸಾಹಿತ್ಯ ಹಲವಾರು ಚರ್ಚೆಗೆ ಗ್ರಾಸವಾದರೂ ಕೂಡ ಉತ್ತಮ ವಿಮರ್ಶೆಗೆ ಒಳಗಾಗಿತ್ತು. ಹಾಗಾಗಿಯೇ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿ ಇವರ ಹೆಸರು ಉಳಿದಿದೆ ಎಂದು ನುಡಿದರು.

ಕನ್ನಡಪ್ರಭ ವಾರ್ತೆ ಆಲೂರು

ಡಾ. ಎಸ್ ಎಲ್ ಭೈರಪ್ಪನವರು ಕನ್ನಡ ಸಾಹಿತ್ಯ ಲೋಕದಲ್ಲಿ ಶಾಶ್ವತವಾದ ಹೆಜ್ಜೆ ಗುರುತನ್ನು ಸ್ಥಾಪಿಸಿದ್ದಾರೆ ಎಂದು ಅರಕಲಗೂಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುಂದರೇಶ್ . ಡಿ ಉಡುವರೇ ಅಭಿಪ್ರಾಯಪಟ್ಟರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಆಲೂರು ತಾಲೂಕಿನ ಕುಣಿಗನಹಳ್ಳಿ ಹೊಂಕರವಳ್ಳಿ ಸಹೃದಯರ ಬಳಗ ಏರ್ಪಡಿಸಿದ್ದ ಎಸ್ ಎಲ್ ಭೈರಪ್ಪನವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಡೀ ವಿಶ್ವ ಕಂಡಂತಹ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದಾರೆ. ಇವರ ಕಾದಂಬರಿಗಳು ಚಲನಚಿತ್ರಗಳಾಗಿವೆ ಹಾಗೂ ವಿಶ್ವದ ಹಲವಾರು ಭಾಷೆಗಳಿಗೆ ತರ್ಜುಮೆಗೊಂಡಿವೆ. ಹಾಗಾಗಿ ಸಾಹಿತ್ಯ ಸರಸ್ವತಿ ಸಮ್ಮಾನ್ ಅಂತಹ ಶ್ರೇಷ್ಠ ಪ್ರಶಸ್ತಿಗಳು ಇವರ ಮುಡಿಗೇರಿವೆ. ಸರಳ ಜೀವನವನ್ನು ನಡೆಸಿದ ಭೈರಪ್ಪನವರು ತಾವು ರಚಿಸುವ ಕಾದಂಬರಿಗಳನ್ನು ಅನುಭವಿಸಿ ಪ್ರತ್ಯಕ್ಷವಾಗಿ ಪ್ರಯೋಗಾತ್ಮಕವಾಗಿ ಪರಿಶೀಲಿಸಿ ಬರೆದರು. ಹಾಗಾಗಿಯೇ ಅವರ ಸಾಹಿತ್ಯ ಗಟ್ಟಿಯಾಗಿ ಉಳಿದಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಹಿತಿ ಸತ್ಯನಾರಾಯಣ ಹರಿಹಳ್ಳಿ ಮಾತನಾಡುತ್ತಾ ಎಸ್ ಎಲ್ ಭೈರಪ್ಪನವರ ಸಾಹಿತ್ಯವನ್ನು ಅರ್ಥ ಮಾಡಿಕೊಂಡವರು ಎಂದೂ ತಪ್ಪನ್ನೆಸುವುದಿಲ್ಲ. ಇವರ ಸಾಹಿತ್ಯ ಹಲವಾರು ಚರ್ಚೆಗೆ ಗ್ರಾಸವಾದರೂ ಕೂಡ ಉತ್ತಮ ವಿಮರ್ಶೆಗೆ ಒಳಗಾಗಿತ್ತು. ಹಾಗಾಗಿಯೇ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿ ಇವರ ಹೆಸರು ಉಳಿದಿದೆ ಎಂದು ನುಡಿದರು. ನೂತನವಾಗಿ ಆಲೂರು ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಚುಟುಕು ಸಾಹಿತಿ ಅನಿಲ್ ಕುಮಾರ್ ಮಾತನಾಡುತ್ತಾ ಸಾಹಿತ್ಯ ಲೋಕದಲ್ಲಿ ಬಹಳಷ್ಟು ಜನ ವಿಜೃಂಭಿಸಿದ್ದಾರೆ. ಅಂತಹವರಲ್ಲಿ ಡಾ. ಎಸ್ ಎಲ್ ಭೈರಪ್ಪನವರು ಕೂಡ ಒಬ್ಬರಾಗಿದ್ದಾರೆ. ನಾನು ಇಂದು ಸಾಹಿತ್ಯ ಪರಿಷತ್ತಿನ ಆಲೂರು ತಾಲೂಕಿನ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇಡೀ ತಾಲೂಕಿನಲ್ಲಿ ಚುಟುಕು ಸಾಹಿತ್ಯವನ್ನು ಪಸರಿಸುವ ಕೆಲಸ ಮಾಡುತ್ತೇನೆ. ಯುವ ಚುಟುಕು ಕವಿಗಳನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತೇನೆ ಎಂದು ಅಭಿಪ್ರಾಯಪಟ್ಟರು. ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಾ ನಂ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಚುಟುಕು ಸಾಹಿತ್ಯ ಸರ್ವರನ್ನು ಬೇಗ ತಲುಪುತ್ತದೆ. ಇಂತಹ ಸಾಹಿತ್ಯವನ್ನು ಪಂಡಿತರಿಂದ ಪಾಮರರವರೆಗೆ ರಚಿಸಬಹುದು. ಎಲ್ಲಾ ಕ್ಷೇತ್ರಗಳಲ್ಲಿಯೂ ನ್ಯೂನ್ಯತೆಯನ್ನು ಕಂಡುಹಿಡಿದು ಸರಿದಾರಿಗೆ ತಲುಪಿಸುವ ಮಾರ್ಗಸೂತ್ರವನ್ನು ಚುಟುಕು ಸಾಹಿತ್ಯದ ಮುಖಾಂತರ ಮಾಡಬಹುದು. ಕಾದಂಬರಿ ಕ್ಷೇತ್ರದ ಸಾರ್ವಭೌಮ ಡಾ. ಎಸ್ ಎಲ್ ಭೈರಪ್ಪನವರು ಬೆಳೆದು ಬಂದ ಹಾದಿ ಕ್ಲಿಷ್ಟಕರವಾಗಿದ್ದರೂ ಕೂಡ ಇವರ ಸಾಹಿತ್ಯ ಎಲ್ಲರನ್ನೂ ತಲುಪಿತು. ನಿಜವಾದ ವಸ್ತು ಸ್ಥಿತಿಯನ್ನು ಆಳವಾದ ಅಧ್ಯಯನ ಮತ್ತು ಅಧ್ಯಾಪನವನ್ನು ಮಾಡಿ ಅನುಭವಿಸಿ ರಚಿಸಿದ ಶ್ರೇಷ್ಠ ಕಾದಂಬರಿಗಾರರಲ್ಲಿ ಡಾ. ಎಸ್ ಎಲ್ ಭೈರಪ್ಪನವರು ಪ್ರಮುಖರು ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಾಯಕಿ ಪ್ರಿಯಾಂಕ ಮಲಗಳಲೆ ಸಾಹಿತ್ಯ ಮತ್ತು ಸಂಗೀತ ಜನರನ್ನು ಸಂತೋಷಿ ತರನ್ನಾಗಿಸುತ್ತದೆ. ಹಾಗಾಗಿ ಕಲಾವಿದರನ್ನು ಕಾಪಾಡಿಕೊಳ್ಳುವುದು ಸಮಾಜದ ಕರ್ತವ್ಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿ ವಿಜೇತರೂ ಹಾಗೂ ಹಾಸನ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರಾದ ಜಯಣ್ಣ ಹೈದೂರ್, ಯೋಗ ಗುರು ಹರೀಶ್, ರೈತ ಸಂಘದ ನಾಯಕರಾದ ಚರಣ್ ಹರೀಹಳ್ಳಿ,ವೆಂಕಟೇಶ್,ನಾಗಣ್ಣ,ಸುರೇಶ್, ಶೇಖರ್, ರುದ್ರೇಶ್, ನಂಜೇಗೌಡ, ಜಗ ಮಗ್ಗೆ, ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

5 ವರ್ಷ ಸಿಎಂ ಎಂದೇ ಸಿದ್ದುಗೆ ಮತ ಹಾಕಿದ್ದೇವೆ : ರಾಯರಡ್ಡಿ
ಹಸು ಕೊಂದಿದ್ದಕ್ಕೆ ಎಂ.ಎಂ.ಹಿಲ್ಸ್‌ ಹುಲಿಯ ಹತ್ಯೆಗೈದು ಪ್ರತೀಕಾರ!