ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಮಹಾನ್ ಸಾಧಕರು: ಸ್ವಾಮೀಜಿ

KannadaprabhaNewsNetwork |  
Published : Jan 23, 2024, 01:45 AM IST
22ಕೆಎಂಎನ್ ಡಿ13ಕೆ.ಆರ್ .ಪೇಟೆ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ ಜಯಂತ್ಯೋತ್ಸವ, ಪುಣ್ಯಸ್ಮರಣೆಯನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಉದ್ಘಾಟಿಸಿದರು. | Kannada Prabha

ಸಾರಾಂಶ

450ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಕಟ್ಟಿ ಗ್ರಾಮೀಣ ಪ್ರದೇಶದ ಬಡ ಮಕ್ಕಳನ್ನು ವಿದ್ಯಾ ಸಾಗರದಲ್ಲಿ ಮುಳುಗಿಸಿದ ಬಾಲಗಂಗಧರ ಶ್ರೀಗಳು ನಾಡಿನ ಲಕ್ಷಾಂತರ ಮಕ್ಕಳ ಬದುಕಿಗೆ ದಾರಿದೀಪವಾಗಿ ಉಳಿದಿದ್ದಾರೆ. ಅವರ ಸೇವಾ ನೆರಳಿನಲ್ಲಿಯೇ ಪಳಗಿದ ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಖಾವಿ ಧರಿಸದೇ ಸಂತರಂತೆ ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನಾಡಿನೆಲ್ಲೆಡೆ ನಾನು ಸಾಕಷ್ಟು ಜಗದ್ಗುರುಗಳ ಕಾರ್ಯ ಚಟುವಟಿಕೆ ಗಮನಿಸಿದ್ದೇನೆ. ಆದರೆ, ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳು ಮಾತ್ರ ನಾನು ಹತ್ತಿರದಿಂದ ನೋಡಿದ ಮಹಾನ್ ಸಾಧಕರು ಎಂದು ಕೆ.ಆರ್.ನಗರದ ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ ಜಯಂತ್ಯೋತ್ಸವ, 11ನೇ ವರ್ಷದ ಪುಣ್ಯಸ್ಮರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಾಲಗಂಗಾಧರನಾಥ ಶ್ರೀಗಳ ಕಾಲಘಟ್ಟದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸುವರ್ಣ ಯುಗವಾಗಿತ್ತು. ಮಠದ ಕೀರ್ತಿಯನ್ನು ದೇಶ ವಿದೇಶಗಳ ಉದ್ದಗಲಕ್ಕೂ ಬೆಳಗುವಂತೆ ಬಾಲಗಂಗಾಧರ ಶ್ರೀಗಳು ಶ್ರಮಿಸಿದರು ಎಂದರು.

450ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಕಟ್ಟಿ ಗ್ರಾಮೀಣ ಪ್ರದೇಶದ ಬಡ ಮಕ್ಕಳನ್ನು ವಿದ್ಯಾ ಸಾಗರದಲ್ಲಿ ಮುಳುಗಿಸಿದ ಬಾಲಗಂಗಧರ ಶ್ರೀಗಳು ನಾಡಿನ ಲಕ್ಷಾಂತರ ಮಕ್ಕಳ ಬದುಕಿಗೆ ದಾರಿದೀಪವಾಗಿ ಉಳಿದಿದ್ದಾರೆ. ಅವರ ಸೇವಾ ನೆರಳಿನಲ್ಲಿಯೇ ಪಳಗಿದ ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಖಾವಿ ಧರಿಸದೇ ಸಂತರಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಬಾಲಗಂಗಾಧರ ನಾಥ ಸ್ವಾಮೀಜಿಗಳ ಸೇವಾ ಕಾರ್ಯಗಳನ್ನು ಸ್ಮರಿಸಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ ಮಾತ್ರಕ್ಕೆ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳ ಪ್ರಗತಿಯನ್ನು ಪೋಷಕರು ನಿತ್ಯ ಗಮನಿಸಬೇಕು. ಶಿಕ್ಷಕರು ತಮ್ಮ ಬೌದ್ದಿಕ ಪ್ರತಿಭೆಯನ್ನು ಮಕ್ಕಳ ವಿಕಸನಕ್ಕೆ ದಾರೆ ಎರೆಯಬೇಕು ಎಂದರು.

ಹಿರಿಯ ಚಲನಚಿತ್ರ ನಟಿ ಪದ್ಮಾ ವಾಸಂತಿ ಮಾತನಾಡಿ, ಶಿಕ್ಷಣ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಕೊಡುವ ಬಹುದೊಡ್ಡ ಆಸ್ತಿ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವ ಕೆಲಸವನ್ನು ಶಿಕ್ಷಕ ಸಮುದಾಯ ಮಾಡಬೇಕು. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಕಾರಣ ತಾವು ಉನ್ನತ ಶಿಕ್ಷಣದಿಂದ ವಂಚಿತರಾದ ಬಗ್ಗೆ ತಿಳಿಸಿದರು.

ಶಾಸಕ ಎಚ್.ಟಿ. ಮಂಜು ಮಾತನಾಡಿ, ಶಿಸ್ತು ಮತ್ತು ಶ್ರದ್ಧೆ ಇರುವಲ್ಲಿ ಸರಸ್ವತಿ ನೆಲೆಸುತ್ತಾಳೆ. ಸರಸ್ವತಿ ಇರುವಲ್ಲಿ ಶ್ರೀ ಲಕ್ಷ್ಮೀಯೂ ಇರುತ್ತಾಳೆ. ಮಕ್ಕಳ ಸುಪ್ತ ಪ್ರತಿಭೆಯನ್ನು ಅರಳಿಸಲು ವಾರ್ಷಿಕೋತ್ಸವ ಸಮಾರಂಭಗಳು ವೇದಿಕೆಗಳು ಸೂಕ್ತವಾಗಿವೆ ಎಂದರು.

ಸಮಾರಂಭದಲ್ಲಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಚಿತ್ರನಟಿ ಅಭಿನಯ, ತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಬಿಜಿಎಸ್ ಟ್ರಸ್ಟಿಗಳಾದ ಬಿ.ನಂಜಪ್ಪ, ಲಾಯರ್ ವಿಜಯಕುಮಾರ್, ಬ್ಯಾಲದಕೆರೆ ಪಾಪೇಗೌಡ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ