ಕನ್ನಡಪ್ರಭ ವಾರ್ತೆ ನಾಗಮಂಗಲ
ನೀವು ಹೋದಲ್ಲೆಲ್ಲ ಶ್ರೀಮಠದ ಹೆಸರು ಮತ್ತು ಬಾಲಗಂಗಾಧರನಾಥಶ್ರೀಗಳ ನಾಮಸ್ಮರಣೆ ಮಾಡಿದರೆ ಸಾಕು ನಿಮ್ಮ ಆಸೆಯಂತೆ ಆದಿಚುಂಚನಗಿರಿ ಮಠವು ಚಿನ್ನದಗಿರಿ ವಜ್ರದಗಿರಿಯಾಗಿ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸುತ್ತಿದ್ದ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳ ಹೆಸರು ಸಾವಿರ ವರ್ಷ ಕಳೆದರೂ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು.
ಇತಿಹಾಸ ತಜ್ಞ ಪ್ರೊ.ಕೆ.ಪುಟ್ಟರಂಗಪ್ಪ ಮಾತನಾಡಿ, ಗುರುಗಳ ಆಶೀರ್ವಾದ ಪಡೆಯುವ ದಿನವೆ ದೊಡ್ಡ ಹಬ್ಬ. ಹಿರಿಯ ವಿದ್ಯಾರ್ಥಿಗಳಿಗೆ ಮಠದ ಜೊತೆ ಮತ್ತೆ ಸಂಬಂಧ ಬೆಸೆಯುವ ಕಾರಣ ಈ ಸಮಾವೇಶ ಆಯೋಜಿಸಲಾಗಿದೆ. ಶ್ರೀ ಮಠದ ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಎಲ್ಲ ಹಿರಿಯ ವಿದ್ಯಾರ್ಥಿಗಳು ಕೈ ಜೋಡಿಸಿ ಎಂದರು.ಶ್ರೀಮಠದ ಹಿರಿಯ ವಿದ್ಯಾರ್ಥಿ ಹಾಗೂ ಕೋರಮಂಗಲ ಜಂಟಿ ಆಯುಕ್ತ ಎಂ.ಮಲ್ಲೇಶ್ ಹಾಗೂ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ ಮಾತನಾಡಿದರು. ಹಿರಿಯ ವಿದ್ಯಾರ್ಥಿಗಳಾದ ವಕೀಲ ಚಂದ್ರಕುಮಾರ್, ಎಂಜಿನಿಯರ್ ಜಿ.ಆರ್.ನಂದೀಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ, ಶಿಕ್ಷಕಿ ಮೋಕ್ಷ ಪ್ರದಾಯಿನಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಸುಧೀರ್, ಹನುಮೇಗೌಡ, ವಕೀಲ ಕೆಂಪೇಗೌಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಜಾತ್ರಾ ಮಹೋತ್ಸವದಲ್ಲಿ ಅನ್ನ ದಾಸೋಹ ನಡೆಸಿಕೊಡುವ ಶ್ರೀಮಠದ ಭಕ್ತರಾದ ಅರಿಸಿನಕುಂಟೆ ರಾಮಕೃಷ್ಣಪ್ಪ ದಂಪತಿ ಹಾಗೂ ನಿವೃತ್ತ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ. ಆಧ್ಯಾತ್ಮ ಚಿಂತಕ ರಾಮಚಂದ್ರ ಮೇತ್ರಿ, ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ, ರಾಣೆ ಬೆನ್ನೂರು ಶಾಖಾ ಮಠದ ಜಯಾನಂದ ಸ್ವಾಮೀಜಿ, ಪ್ರಿಯಾನಂದ ಸ್ವಾಮೀಜಿ ಸೇರಿದಂತೆ ಹಲವರು ಇದ್ದರು.