ನಾಡಿನ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದ್ದು, ರಕ್ತ ಸಂಬಂಧಕ್ಕಿಂತ ಭಕ್ತಿ ಸಂಬಂಧ ಮುಖ್ಯವಾಗಿದೆ ಎಂದು ಯುವಮುಖಂಡ ಸಂಗಮೇಶ ಬಬಲೇಶ್ವರ ಹೇಳಿದರು.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ನಾಡಿನ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದ್ದು, ರಕ್ತ ಸಂಬಂಧಕ್ಕಿಂತ ಭಕ್ತಿ ಸಂಬಂಧ ಮುಖ್ಯವಾಗಿದೆ ಎಂದು ಯುವಮುಖಂಡ ಸಂಗಮೇಶ ಬಬಲೇಶ್ವರ ಹೇಳಿದರು.ಇಲ್ಲಿನ ಪುರವರ ಹಿರೇಮಠ ಅನ್ನದಾನೇಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು
ಮಾತನಾಡಿದರು. ಸಮಾಜವು ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಠಾಧೀಶರ ಪಾತ್ರ ಅತೀ ಮಹತ್ವದ್ದಾಗಿದ್ದು, ಮಠಾಧೀಶರು ಮತ್ತು ಭಕ್ತರ
ಸಂಬಂಧವು ತಾಯಿ ಮಕ್ಕಳ ಸಂಬಂಧದಂತಿರುತ್ತದೆ. ರಾಜಕಾರಣಿಗಳು ಮಠ, ದೇವಸ್ಥಾನ, ಮಸೀದಿ, ಚರ್ಚಗಳಿಗೆ ಅನುದಾನ ನೀಡದೇ ವಿದ್ಯಾಮಂದಿರಗಳಿಗೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಮಠಗಳು ಸೇರಿದಂತೆ ಕೆಲ ಧಾರ್ಮಿಕ ಕೇಂದ್ರಗಳು ವ್ಯವಹಾರ ಕೇಂದ್ರಗಳಂತೆ ವರ್ತಿಸುತ್ತಿವೆ ಎಂದು ಜನರ ಭಾವನೆಯಾಗಿದೆ. ಆದರೆ, ಆಲಮಟ್ಟಿಯ ಅನ್ನದಾನೇಶ್ವರ ಮಠವು ವಿಭಿನ್ನವಾಗಿದ್ದು, ಬಡ ಭಕ್ತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ, ಅನ್ನದಾಸೋಹ, ಅಕ್ಷರ ದಾಸೋಹಗಳಂತಹ ಕ್ರಮಕೈಗೊಳ್ಳಲು ಅಣಿಯಾಗುತ್ತಿರುವುದು ಸಂತಸವಾಗಿದೆ ಎಂದು ಶ್ಲಾಘಿಸಿದರು.
ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಕೊಣ್ಣೂರಿನ ವಿಶ್ವಪ್ರಭುಸ್ವಾಮೀಜಿ, ಭಕ್ತರಾದವರು ಭಗವಂತನ ಕೃಪೆಗೆ ಪಾತ್ರರಾಗಲು ನಿಸ್ವಾರ್ಥ, ಶ್ರದ್ದೆ, ಭಕ್ತಿಯಿಂದ ಧ್ಯಾನಿಸಬೇಕು ಎಂದರು.
ಸಾನ್ನಿಧ್ಯವಹಿಸಿ ಗಿರಿಸಾಗರದ ರುದ್ರಮುನಿಸ್ವಾಮೀಜಿ ಮಾತನಾಡಿ, ಆಲಮಟ್ಟಿಯ ಜಂಗಮರು ಶತಮಾನಗಳು ಹಿಂದೆ ನುಡಿದ ವಾಣಿ, ಅವರ ಸಂಕಲ್ಪವು ಈಗ ಆಲಮಟ್ಟಿ ಬಳಿಯಲ್ಲಿ ಬೃಹತ್ ಜಲಾಶಯ ನಿರ್ಮಾಣವಾಗಿದೆ. ಆಲಮಟ್ಟಿಯು ಬಂಥನಾಳ ಶಿವಯೋಗಿಗಳ
ತಾಯಿಯ ತವರೂರಾಗಿದ್ದು, ಬಸವಣ್ಣನವರ ವಚನಗಳನ್ನು ಸಂರಕ್ಷಣೆ ಮಾಡಲು ಫ.ಗು.ಹಳಕಟ್ಟಿ ಮತ್ತು ಮಂಜಪ್ಪ ಹರ್ಡೇಕರ ಅವರಿಗೆ ಆಲಮಟ್ಟಿಯ ಇದೇ ಮಠದಲ್ಲಿ ಒಂದು ಕೋಣೆ ಕೊಡಿಸಿದ್ದರು ಎಂದರು.
ಆಲಮಟ್ಟಿಯಲ್ಲಿ ಈ ಹಿಂದೆಯೇ ಬಂಥನಾಳದ ಶಿವಯೋಗಿಗಳ ಇಚ್ಛೆಯಂತೆ ಮಂಜಪ್ಪ ಹರ್ಡೇಕರ, ಫ.ಗು.ಹಳಕಟ್ಟಿಯಂತಹ ಹಿರಿಯರು ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಬಡ ಗ್ರಾಮೀಣ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅಕ್ಷರದಾಸೋಹದೊಂದಿಗೆ ಅನ್ನದಾಸೋಹವನ್ನೂ ನೀಡುತ್ತಿದ್ದರು. ಯಾವುದೋ ಒಂದು ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಯು ಮಠದ ಕೈ ತಪ್ಪಿಹೋಗಿದೆ. ಮತ್ತೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗಾಗಿ ಈಗಿರುವ ರುದ್ರಮುನಿ ಸ್ವಾಮೀಜಿಯವರು ಸಿಬಿಎಸ್‍ಇ ಶಿಕ್ಷಣ ಸಂಸ್ಥೆ ಹಾಗೂ ಮಕ್ಕಳಿಗೆ ವಸತಿ ನಿಲಯಗಳನ್ನು ಆರಂಭಿಸಲು ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ ಎಂದು ಹೇಳಿದರು.
ನಿಡಗುಂದಿಯ ರುದ್ರೇಶ್ವರ ಸಂಸ್ಥಾನಮಠದ ರುದ್ರಮುನಿಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ಅನ್ನದಾನೇಶ್ವರ ಪುರವರಮಠದ ರುದ್ರಮುನಿಸ್ವಾಮೀಜಿಮಾತನಾಡಿದರು. ಧಾರ್ಮಿಕ ಸಭೆಯಲ್ಲಿಮುತ್ತತ್ತಿ ಹಿರೇಮಠದ ಗುರುಲಿಂಗಸ್ವಾಮೀಜಿ ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠದ ಸಿದ್ದಲಿಂಗ ಸ್ವಾಮೀಜಿ ನೇತೃತ್ವವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.