ಅದ್ಧೂರಿಯಾಗಿ ನಡೆದ ಜಗದಂಬಾ ದೇವಿಯ ಭಂಡಾರ ಪೂಜೆ

KannadaprabhaNewsNetwork |  
Published : Jun 28, 2025, 12:27 AM IST
ಗಜೇಂದ್ರಗಡ ಜಗದಂಬಾ ದೇವಿಯ ವಿಶೇಷ ಅಲಂಕಾರ ಪೂಜೆ | Kannada Prabha

ಸಾರಾಂಶ

ಗಜೇಂದ್ರಗಡ ಪಟ್ಟಣದ ಎಸ್.ಎಸ್.ಕೆ ಸಮಾಜದ ವತಿಯಿಂದ ಆಷಾಢ ಮಾಸದ ಪ್ರಯುಕ್ತ ಶುಕ್ರವಾರ ಜಗದಂಬಾ ದೇವಸ್ಥಾನದಲ್ಲಿ ದೇವಿಯ ಭಂಡಾರ ಪೂಜೆ ಅದ್ಧೂರಿಯಾಗಿ ನಡೆಯಿತು.

ಗಜೇಂದ್ರಗಡ: ಪಟ್ಟಣದ ಎಸ್.ಎಸ್.ಕೆ ಸಮಾಜದ ವತಿಯಿಂದ ಆಷಾಢ ಮಾಸದ ಪ್ರಯುಕ್ತ ಶುಕ್ರವಾರ ಜಗದಂಬಾ ದೇವಸ್ಥಾನದಲ್ಲಿ ದೇವಿಯ ಭಂಡಾರ ಪೂಜೆ ಅದ್ಧೂರಿಯಾಗಿ ನಡೆಯಿತು.

ದೀಪಾಲಂಕೃತವಾಗಿ ಶೃಂಗಾರಗೊಂಡ ದೇಗುಲವು. ಬೆಳಗ್ಗೆ ಸಾಮೂಹಿಕ ಭಜನೆ, ಮಹಾಮಂಗಳಾರತಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರ ಸದ್ಭಕ್ತರು ಪಾಲ್ಗೊಂಡು ಅತ್ಯಂತ ವೈಶಿಷ್ಟಪೂರ್ಣ ಭಂಡಾರ ಪೂಜೆ ಭಕ್ತರಲ್ಲಿ ಉತ್ಸವದ ಜೀವಕಳೆ ತಂದಿತು.

ದೈನಂದಿನ ಜಂಜಾಟದಿಂದ ಬೇಸತ್ತ ಜನತೆ ದೇವಸ್ಥಾನಕ್ಕೆ ಆಗಮಿಸಿ, ದುರ್ಗಾಮಾತೆಯ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ದೇವಸ್ಥಾನದಲ್ಲಿ ಮಂತ್ರಪುಷ್ಪ, ಪಠಣ, ಭಜನಾ ಮಂಡಳಗಳಿಂದ ಭಜನೆ, ಗಾಯತ್ರಿ ದೇವಿ ಮಹಿಳಾ ಮಂಡಳವತಿಯಿಂದ ದೇವಿಯ ಭಕ್ತಿಗೀತೆ, ಅದ್ಧೂರಿಯಾಗಿ ನಡೆಯಿತು.ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ದೇವಸ್ಥಾನದಲ್ಲಿ ಭಕ್ತರು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷ ವಾಗಿತ್ತು. ಪ್ರತಿ ಮೂರು ವರ್ಷಕ್ಕೆ ಬರುವ ಭಂಡಾರ ಪೂಜೆಯು ಮನಸೂರೆಗೊಳ್ಳುವ ಜಗದಂಬಾ ದೇವಿಯ ರೂಪಾಲಂಕಾರ ಸದ್ಭಕ್ತರ ಭಕ್ತಿ,ಭಾವ ಇಮ್ಮಡಿಗೊಳಿಸಿತು.ಶ್ರೀದೇವಿಯ ಬಂಡಾರ ಪೂಜೆಯಿಂದ ಭಕ್ತರು ಧನ್ಯತೆಯೊಂದಿಗೆ ತಮ್ಮ ಇಷ್ಟಾರ್ಥ ಸಿದ್ದಿಯಾಗುತ್ತಿದೆ ಎಂಬುದು ಆಸ್ತಿಕರ ವಿಶ್ವಾಸ. ಅಲ್ಲದೇ ಬಂಡಾರ ಪೂಜೆಯಲ್ಲಿ ಸಂತೃಪ್ತಿ, ಪಾರಮಾರ್ಥಿಕ ಸೌಖ್ಯ ಪಡೆಯುತ್ತಾನೆ ಎಂಬುದು ಭಕ್ತರ ನಂಬಿಕೆ.ಈ ವೇಳೆ ಸಮಾಜದ ಅಧ್ಯಕ್ಷ ರವಿ ಶೀಂಗ್ರಿ, ಉಪಾಧ್ಯಕ್ಷ ಬಾಲಚಂದ್ರಸಾ ರಾಯಬಾಗಿ, ಮಾಜಿ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ, ತರುಣ ಸಂಘದ ಅಧ್ಯಕ್ಷ ಲಕ್ಷ್ಮಣ ರಂಗ್ರೇಜಿ, ಉಪಾಧ್ಯಕ್ಷ ಗಣಪತಸಾ ರಾಯಬಾಗಿ, ಮಹಿಳಾ ಮಂಡಲದ ಅಧ್ಯಕ್ಷೆ ಸರಸ್ವತಿಬಾಗಿ ಶೀಂಗ್ರಿ, ಸುಭಾಸ ರಾಯಬಾಗಿ, ದತ್ತು ಬಾಕಳೆ, ಗೋಪಿನಾಥ ಬಾಂಡಗೆ, ಸುರೇಶ ರಂಗ್ರೇಜಿ, ಲಕ್ಷ್ಮಣ ಶೀಂಗ್ರಿ, ಉಮೇಶ ರಾಯಬಾಗಿ, ಭಾಸ್ಕರ ರಾಯಬಾಗಿ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ