ಹುಬ್ಬಳ್ಳಿ: ಇಂದಿನ ದಿನಮಾನದಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದ್ದು, ಶಿಕ್ಷಕರು ಮಾನಸಿಕ ಸದೃಢವಾಗಬೇಕು. ಅದಕ್ಕಾಗಿ ಧ್ಯಾನ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಸಾಹುಕಾರ್ ಮಾತನಾಡಿ, ಮಕ್ಕಳಿಗೆ ಆಧ್ಯಾತ್ಮಿಕ ಮೌಲ್ಯ ಹೇಳಿ ಕೊಡಬೇಕು ಎಂದರು.
ಇದೇ ವೇಳೆ ವಿಧಾನ ವಿಧಾನಪರಿಷತ್‌ನಲ್ಲಿ 45 ವರ್ಷ ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಪಿರಮಿಡ್ ಪೆರಿಚುಯಲ್ ಸೈನ್ಸ್ ಅಕಾಡೆಮಿ ಅಧ್ಯಕ್ಷ ಡಾ. ಬಿ. ಶಿವರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ವೀಣಾ ಬಿರಾದರ್, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ, ಗ್ರಾಮೀಣ ಶಿಕ್ಷಣಾಧಿಕಾರಿ ಉಮೇಶ್ ಬೊಮ್ಮಕ್ನವರ್, ಡಾ. ಕೇತಪ್ಪನವರ್, ವಿಶಾಲಾಕ್ಷಿ ಆಕಳವಾಡಿ, ಚನ್ನು ಹೊಸಮನಿ ಉಪಸ್ಥಿತರಿದ್ದರು.