ಭಾರತ ಹುಣ್ಣಿಮೆ: ಯಲ್ಲಮ್ಮ ದೇಗುಲದಲ್ಲಿ ವಿಶೇಷ ಪೂಜೆ

KannadaprabhaNewsNetwork |  
Published : Feb 25, 2024, 01:51 AM IST
ಭಾರತ ಹುಣ್ಣಿಮೆ:  ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ | Kannada Prabha

ಸಾರಾಂಶ

ತಿಯೊಬ್ಬರೂ ಆಧ್ಯಾತ್ಮಿಕವಾಗಿ ದೇವರಲ್ಲಿ, ಪಾಲಕರಲ್ಲಿ ನಂಬಿಕೆಯುಳ್ಳವರಾಗಬೇಕು.

ಗಂಗಾವತಿ: ಇಲ್ಲಿಯ ಇಸ್ಲಾಂಪುರ ಅಗಡಿ ಸಂಗಣ್ಣ ಕ್ಯಾಂಪಿನಲ್ಲಿರುವ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಭಾರತ ಹುಣ್ಣಿಮೆ ನಿಮಿತ್ತ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪಟ್ಟಣ ಸೌಹಾರ್ದ ಸಹಕಾರಿ ಮಹಾಮಂಡಳದ ರಾಜ್ಯದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಉದ್ಯಮಿ ಕೆ.ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಆಧ್ಯಾತ್ಮಿಕವಾಗಿ ದೇವರಲ್ಲಿ, ಪಾಲಕರಲ್ಲಿ ನಂಬಿಕೆಯುಳ್ಳವರಾಗಬೇಕು. ಕಳೆದ ೭೦ ವರ್ಷಗಳಿಂದ ಅಗಡಿ ಸಂಗಣ್ಣಕ್ಯಾಂಪ್‌ನಲ್ಲಿ ರೇಣುಕಾ ಯಲ್ಲಮ್ಮ ಉದ್ಭವವಾಗಿ ನೆಲೆಸಿದ್ದು, ಈ ಭಾಗದ ಭಕ್ತರ ಬೇಡಿಕೆ ಈಡೇರಿಸುತ್ತಿದ್ದಾಳೆ. ನಗರದ ಆರಾಧ್ಯ ದೈವ ಚೆನ್ನಬಸವಸ್ವಾಮಿ ಆಶೀರ್ವಾದವಿದೆ ಎಂದರು.ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸಮಿತಿ ನೂತನ ಅಧ್ಯಕ್ಷ ಬಸವರಾಜ ರಾಮತ್ನಾಳ, ಉಪಾಧ್ಯಕ್ಷ ಸಿಂಗನಾಳ ಕುಮಾರೆಪ್ಪ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಮುಖ್ಯಸ್ಥೆ ಗಂಗಮ್ಮ, ದೇವಾಲಯದ ಪದಾಧಿಕಾರಿಗಳಾದ ಕೆ.ನಿಂಗಜ್ಜ, ಅಶೋಕ ಗೌಡ, ಲಕ್ಷ್ಮಣ ಗೌಡ, ಸಂಜೀವಕುಮಾರ ನೇಕಾರ, ವೀರೇಶ ಮಳ್ಳಿ, ನೀಲಕಂಠ ಗಿಟ್ಗಿ, ನಾಗರಾಜ ಮೇದಾರ್, ಪ್ರಸಾದ, ಪರಶುರಾಮ ಇಟಗಿ, ನೀಲಕಂಠಪ್ಪ ಮೆಟ್ರಿ, ಬಸವರಾಜ ಶಿಡ್ಲಗಟ್ಟಿ, ನಿವೃತ್ತ ಎಎಸ್ ಐ ಚಂದ್ರಶೇಖರ, ಶಾವಿ ತಿಪ್ಪಣ್ಣ, ಶಿವರಾಜ ನಾಯಕ, ಕೋಟಿ ರಾಮ್, ಮಹಾಲಿಂಗಪ್ಪ ಸೌದ್ರಿ, ನಾಗರಾಜ ಕುರುಗೋಡು, ಮಸ್ಕಿ ಶೇಖರಪ್ಪ, ಕುಡತಿನಿ ವೆಂಕಟೇಶ ಸೇರಿ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ