ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಿಂದ ಟಿ ಬಿಯ ಸೋಲು

KannadaprabhaNewsNetwork |  
Published : Feb 13, 2025, 12:45 AM IST
47 | Kannada Prabha

ಸಾರಾಂಶ

ನಾಟಕದಲ್ಲಿ ಕ್ಷಯರೋಗದ ಕಾರಣ, ಹರಡುವ ಬಗ್ಗೆ, ತಡೆಗಟ್ಟುವ ಕ್ರಮಗಳು ಮುಂತಾವುಗಳನ್ನು ಹೃದಯಾಂಗಮವಾಗಿ ಅಭಿನಯಿಸಿ ತೋರಿಸಲಾಯಿತು.

--------

ಕನ್ನಡಪ್ರಭ ವಾರ್ತೆ ಮೈಸೂರು

ನಿ - ಕ್ಷಯ ಅಭಿಯಾನದ ಅಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬುಧವಾರ ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ, ಸ್ವಸ್ಥವೃತ್ತ ವಿಭಾಗದ ವತಿಯಿಂದ ಟಿ ಬಿಯ ಸೋಲು - ಭಾರತದ ಗೆಲುವು ಎಂಬ ಬೀದಿ ನಾಟಕವನ್ನು ವಿಶ್ವೇಶ್ವರಯ್ಯ ವೃತ್ತದಲ್ಲಿ ನಡೆಯಿತು.

ಫ್ಲಾಶ್ ಮೋಬ್ ನಿಂದ ಕಾರ್ಯಕ್ರಮ ಆರಂಭವಾಗಿ ಬೀದಿ ನಾಟಕದೊಂದಿಗೆ ಮುಕ್ತಾಯವಾಯಿತು. ನಾಟಕದಲ್ಲಿ ಕ್ಷಯರೋಗದ ಕಾರಣ, ಹರಡುವ ಬಗ್ಗೆ, ತಡೆಗಟ್ಟುವ ಕ್ರಮಗಳು ಮುಂತಾವುಗಳನ್ನು ಹೃದಯಾಂಗಮವಾಗಿ ಅಭಿನಯಿಸಿ ತೋರಿಸಲಾಯಿತು.

ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮಿ ನಾರಾಯಣ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಟಿ ಬಿ ಮುಕ್ತ ಭಾರತದೆಡೆಗೆ ಸರ್ಕಾರವು ನಡೆಸುತ್ತಿರುವ ಕಾರ್ಯಕ್ರಮಗಳನ್ನು ವಿವರಿಸಿದರು.

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ರಾಧಾಕೃಷ್ಣ ರಾಮ್ ರಾವ್ ಮಾತನಾಡಿ, ಕಾಲೇಜಿನ ವತಿಯಿಂದ ನಡೆಯುತ್ತಿರುವ ಹಲವಾರು ಜಾಗೃತಿ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಕಾಲೇಜಿನ ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿ ಡಾ.ಎಚ್‌.ಎ. ಶಶಿರೇಖಾ, ಪ್ರಾಧ್ಯಾಪಕರಾದ ಡಾ. ಸುಧೀಂದ್ರ ನವಲೆ, ಡಾ. ವಾಸುದೇವ ಚಾಟೇ, ಡಾ. ಪ್ರಕಾಶ್ ಇದ್ದರು.

ವಿಭಾಗದ ಮುಖ್ಯಸ್ಥ ಡಾ.ಕೆ.ವಿ. ವೆಂಕಟಕೃಷ್ಣ ಸ್ವಾಗತಿಸಿದರು, ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಯಶಸ್ವಿನಿ ಅವರು ವಂದಿಸಿದರು.

ವಿಭಾಗದ ಎಲ್ಲ ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು