ಭಾರತ ಸಿಂಧೂರ ಕೃತಿ ಲೋಕಾರ್ಪಣೆ

KannadaprabhaNewsNetwork |  
Published : Jun 11, 2025, 12:03 PM ISTUpdated : Jun 11, 2025, 12:04 PM IST
ಚಿತ್ರ: 10ಎಂಡಿಕೆ7 : ಕಾರ್ಯಕ್ರಮದಲ್ಲಿ ಪ್ರಮುಖರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಚಿ. ನಾ. ಸೋಮೇಶ್‌ ಬರೆದ ಸಿಂದೂರ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಶಕ್ತಿ ಕುಟುಂಬದ ರಾಜಲಕ್ಷ್ಮಿ ಗೋಪಾಲಕೃಷ್ಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗ್ರಾಮೋತ್ಥಾನ ಭಾರತ ಪ್ರಕಾಶನ ಕೊಡಗು ಮತ್ತು ಶ್ರೀಸುತ ಬಳಗ ಇವರ ಆಶಯದಲ್ಲಿ ಚಿ.ನಾ.ಸೋಮೇಶ್ ಅವರು ಬರೆದ ಭಾರತ ಸಿಂಧೂರ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮವನ್ನು ಹಿರಿಯರಾದ ಶಕ್ತಿ ಕುಟುಂಬದ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರು ದೀಪ ಬೆಳಗಿಸಿ ಉದ್ಘಾಟನೆಗೊಳಿಸಿದರು.

ಆ ಬಳಿಕ ಬೆಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಚೊಟ್ಟಕೊರಿಯಂಡ ಕೆ.ಬಾಲಕೃಷ್ಣ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮಾತನಾಡಿ ಆಪರೇಷನ್ ಸಿಂಧೂರ, ಸೈನಿಕರ ತ್ಯಾಗ, ಭಾರತದ ಅಸ್ಮಿತೆ, ದೇಶದ ಜನತೆಯಲ್ಲಿ ಇರಬೇಕಾದ ರಾಷ್ಟ್ರಭಕ್ತಿ, ಭಾರತ ಮಾತೆಯ ಮೇಲಿರಬೇಕಾದ ಗೌರವದ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ದೇಶದ ಜನತೆ ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಂಡು ದೇಶದ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು.

ಪ್ರೆಸ್ ಕ್ಲಬ್ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಕ್ರಿಕೆಟ್ ಫ್ರಾಂಚೈಸಿ ಬಗ್ಗೆ ಇರುವ ಅಭಿಮಾನ ದೇಶದ ಸೈನಿಕರ ಮೇಲೆ ಮತ್ತು ದೇಶದ ಮೇಲೆ ಇಲ್ಲದಿರುವುದು ವಿಷಾದನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ನಿವೃತ್ತ ಸೈನಿಕರು ಹಾಗೂ ದಂಡಿನ ಮಾರಿಯಮ್ಮ ದೇವಾಲಯದ ಪ್ರಧಾನ ಅರ್ಚಕರಾದ ಜಿ.ಎ. ಉಮೇಶ್, ಚಿ.ನಾ.ಸೋಮೇಶ್ ಅವರ ಬಾಲ್ಯದ ಗೆಳೆಯ ಹಾಗೂ ಉಚ್ಚ ನ್ಯಾಯಾಲಯದ ನಿವೃತ್ತ ಉದ್ಯೋಗಿ ಸುಧೀಂದ್ರ ಡಿ.ತಿಳಗೊಳ್, ಮಡಿಕೇರಿ ಸಿಂಧೂರ ಟೆಕ್ಸ್ ಟೖಲ್ ಮಾಲೀಕರಾದ ಹೀರಾನಂದ ಜಿ ಕೃಷ್ಣಾನಿ ಉಪಸ್ಥಿತರಿದ್ದರು.

ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರೆ ಪವನ್ ಸೋಮೇಶ್ ಸ್ವಾಗತಿಸಿ ಡಿ.ಡಿ.ಯಶಿಕಾ ದೇಶಭಕ್ತಿ ಗೀತೆ ಹಾಡಿದರು.

ಕೃತಿಕಾರ ಚಿ.ನಾ.ಸೋಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮೂಡಾ ಅಧ್ಯಕ್ಷ ಕೆ ಎಸ್ ರಮೇಶ್ ಹೊಳ್ಳ, ಶ್ರೀ ಓಂಕಾರೇಶ್ವರ ದೇವಾಲಯದ ನಿವೃತ್ತ ಕಾರ್ಯನಿರ್ವಹಣಧಿಕಾರಿ ಸಂಪತ್ ಕುಮಾರ್, ಆರ್ ಎಸ್ ಎಸ್ ನ ಪ್ರಮುಖರಾದ ಡಿ.ಕೆ.ಡಾಲಿ, ಕೆ.ಕೆ.ಮಹೇಶ್ ಕುಮಾರ್, ಕೆ.ಕೆ.ದಿನೇಶ್ ಕುಮಾರ್, ಜಯಚಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ