ಸಾಮಾಜಿಕ ಸಾಮರಸ್ಯದೊಂದಿಗೆ ಭಾರತ ವಿಶ್ವಗುರು: ಗುರುರಾಜ್ ಕುಲಕರ್ಣಿ ಆಶಯ

KannadaprabhaNewsNetwork |  
Published : Feb 02, 2026, 02:45 AM IST
ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಸ್ವದೇಶಿ ಬಳಕೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯದೊಂದಿಗೆ ಭಾರತವನ್ನು ವಿಶ್ವಗುರುವಾಗಿಸುವ ಉದ್ದೇಶ ಮತ್ತು ಗುರಿಯನ್ನು ಹಿಂದು ಸಂಗಮ ಕಾರ್ಯಕ್ರಮ ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಬೆಂಗಳೂರಿನ ಪ್ರಾಂತ ಸೇವಾ ಪ್ರಮುಖ್ ಗುರುರಾಜ್ ಕುಲಕರ್ಣಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸ್ವದೇಶಿ ಬಳಕೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯದೊಂದಿಗೆ ಭಾರತವನ್ನು ವಿಶ್ವಗುರುವಾಗಿಸುವ ಉದ್ದೇಶ ಮತ್ತು ಗುರಿಯನ್ನು ಹಿಂದು ಸಂಗಮ ಕಾರ್ಯಕ್ರಮ ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಬೆಂಗಳೂರಿನ ಪ್ರಾಂತ ಸೇವಾ ಪ್ರಮುಖ್ ಗುರುರಾಜ್ ಕುಲಕರ್ಣಿ ಹೇಳಿದ್ದಾರೆ. ಭಾನುವಾರ ಹಿಂದು ಸಂಗಮ ಆಯೋಜನ ಸಮಿತಿ ಕುಶಾಲನಗರ ತಾಲೂಕು ಮತ್ತು ಸುಂಟಿಕೊಪ್ಪ ಮಂಡಲದ ಹಿಂದು ಸಂಗಮ ಸಮಿತಿ ವತಿಯಿಂದ ಸುಂಟಿಕೊಪ್ಪದಲ್ಲಿ ಹಿಂದು ಸಂಗಮ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸಾವಿರ ವರ್ಷಗಳ ಗುಲಾಮಗಿರಿಯಿಂದ ಇತ್ತೀಚೆಗೆ ಹೊರ ಬಂದಿದ್ದು, ನಮ್ಮ ಧರ್ಮ, ಸಂಸ್ಕೃತಿ, ಆಚರಣೆ ಮತ್ತು ಪದ್ಧತಿ ಪರಂಪರೆಗಳನ್ನು ಹಿಮಾಲಯದಿಂದ ಕನ್ಯಾಕುಮಾರಿಯವರೆಗಿನ ಭಾರತದಲ್ಲಿ ಮತ್ತೆ ಜಾಗೃತಿ ಉಂಟುಮಾಡುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವ ವರ್ಷದಲ್ಲಿ ಹಮ್ಮಿಕೊಂಡಿದೆ. ಇದನ್ನು ಹಿಂದು ಸಂಗಮ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ ಎಂದು ಹೇಳಿದರು.ಮುಖ್ಯ ಅತಿಥಿ ಅಜಿತ್ ಅಪ್ಪಚ್ಚು ಮಾತನಾಡಿ ಪ್ರಸ್ತುತ ದಿನಮಾನದಲ್ಲಿ ಧರ್ಮ ಜಾಗೃತಿ ನಮ್ಮ ಪದ್ಧತಿ ಪರಂಪರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯವಶ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸುಂಟಿಕೊಪ್ಪ ಮಂಡಲ ಹಿಂದು ಸಂಗಮ ಅಧ್ಯಕ್ಷ ಎಚ್.ಟಿ.ಬಸವರಾಜ್ ಮಾತನಾಡಿ, ಮಕ್ಕಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡಿ ನಮ್ಮ ಸಂಸ್ಕಾರ ಕಲಿಯಲು ಕಿವಿಮಾತು ಹೇಳಿದರು.ಸುಂಟಿಕೊಪ್ಪ ವಿವಿಧ ದೇವಾಲಯಗಳಲ್ಲಿ ದಶಕಗಳ ಕಾಲ ಯಾವುದೇ ಪ್ರತಿಫಲ ಆಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ ಹಿರಿಯರಾದ ಮಂಡುವಂಡ ಬೋಜಮ್ಮ, ಜವರಮ್ಮ ಮತ್ತು ಲಕ್ಷ್ಮೀಯಮ್ಮ ಅವರನ್ನು ಅತಿಥಿಗಳು ಸನ್ಮಾನಿಸಿದರು. ಸ್ಟೆಪ್‌ಡಾಟ್ ಕಂ ತಂಡದಿಂದ ಸ್ವಾಗತ ನೃತ್ಯ ನಡೆಯಿತು. ಸುಂಟಿಕೊಪ್ಪ ಮಹಿಳೆಯರು ಮತ್ತು ಮಕ್ಕಳು ವಂದೇ ಮಾತರಂ ಗೀತೆಯನ್ನು ಹಾಡಿದರು. ಸುಂಟಿಕೊಪ್ಪ ಹಿಂದು ಸಂಗಮ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮ್‌ಗೌತಮ್ ಸ್ವಾಗತಿಸಿದರು. ಉಮೇಶ್ ದೇಶಭಕ್ತಿ ಗೀತೆ ಹಾಡಿದರು. ಯಂಕನ ತ್ರಿಶೂಲ ಮತ್ತು ಎಂ.ಎಸ್.ಸುನಿಲ್ ನಿರೂಪಿಸಿ ಹಿಂದು ಸಂಗಮ ಸಮಿತಿಯ ಉಪಾಧ್ಯಕ್ಷ ಮನು ಅಚ್ಚಮಯ್ಯ ವಂದಿಸಿದರು. ಇಲ್ಲಿನ ಶ್ರೀ ಕೋದಂಡ ರಾಮಚಂದ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಭವ್ಯವಾದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಹಿಳೆಯರು ಪೂರ್ಣ ಕುಂಭ ಕಲಶದೊಂದಿಗೆ ಭಗವಧ್ವಜ ಸಹಿತ ಭಜನ ತಂಡದ ನೃತ್ಯ ಕೇರಳದ ಚಂಡೆ ಭಾರತಾಂಬೆಯ ಭಾವಚಿತ್ರ ಅಲಂಕೃತ ತೆರೆದ ಜೀಪಿನಲ್ಲಿ ಇರಿಸಿ ಮೆರವಣಿಗೆಯು ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಆವರಣದಲ್ಲಿ ಸಂಪನ್ನಗೊಂಡಿತು.ಮೆರವಣಿಗೆಯಲ್ಲಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಕಾಫಿ ಬೆಳೆಗಾರರಾದ ಬೋಸ್‌ಮಂದಣ್ಣ, ಅಜಿತ್ ಅಪ್ಪಚ್ಚು, ಜಿ.ಪಂ.ಮಾಜಿ ಸದಸ್ಯ ಬಿ.ಬಿ.ಭಾರತೀಶ್, ರಾಮಸೇವಾ ಸಮಿತಿಯ ಕಾರ್ಯದರ್ಶಿ ಆಶೋಕ್‌ ಶೇಟ್, ಪಿ.ಕೆ.ಮುತ್ತಣ್ಣ, ಎಂ.ಎ.ವಸಂತ, ವೈ.ಎಂ.ಕರುಂಬಯ್ಯ, ಡಿ.ನರಸಿಂಹ, ಶಾಂತರಾಂ ಕಾಮತ್, ಎಸ್. ಜಿ.ಶ್ರೀನಿವಾಸ್, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಆರ್. ರಮೇಶ್‌ಪಿಳ್ಳೆ, ಗ್ರಾಮದೇವತೆ ಸಮಿತಿಯ ಅಧ್ಯಕ್ಷ ಎ.ಶ್ರೀಧರ, ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಶ್ರೀ ಗೌರಿ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ವಿಘ್ನೇಶ್, ರಾಮ್‌ಗೌತಮ್, ಪಿ.ಆರ್.ಸುನಿಲ್‌ಕುಮಾರ್, ದೀನು ದೇವಯ್ಯ, ಧನುಕಾವೇರಪ್ಪ, ರಂಜಿತ್ ಕಾರ್ಯಪ್ಪ, ಬಿ.ಕೆ.ಮೋಹನ್, ರಾಕೇಶ್, ಎಂ.ಎಸ್.ಸುನಿಲ್, ವಿ. ಎ. ಸಂತೋಷ್, ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾವತಿ ಮೇದಪ್ಪ, ಪ್ರಮುಖರಾದ ಶಿವಮ್ಮ ಮಹೇಶ್, ಶಾಂತಿ, ಗೀತಾ, ಮಂಜುಳಾ, ವಸಂತಿ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಕೀಲರು, ಜಡ್ಜ್ ಗಳು ನಡವಳಿಕೆಯಲ್ಲಿ ಸಮಾಜಕ್ಕೆ ಮಾದರಿಯಾಗಬೇಕು: ನ್ಯಾ. ಅಬ್ದುಲ್ ನಝೀರ್
ಪಂಚ ಗ್ಯಾರಂಟಿ ಯೋಜನೆ ಸಮರ್ಪಕ ಜಾರಿ: ಫೆಬ್ರವರಿಯಲ್ಲಿ ತಾಲೂಕು ಮಟ್ಟದ ಸಮಾವೇಶ