ಭಾರತೀಪುರ ಗ್ರಾಮ: ಭಕ್ತಿ ಪರಾಕಾಷ್ಠೆಯಲ್ಲಿ ಜರುಗಿದ ಲಕ್ಷ್ಮೀದೇವಿ ರಥೋತ್ಸವ

KannadaprabhaNewsNetwork |  
Published : Apr 23, 2025, 12:38 AM IST
22ಕೆಎಂಎನ್ ಡಿ32 | Kannada Prabha

ಸಾರಾಂಶ

ಲಕ್ಷ್ಮೀದೇವಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿ ರಥದಲ್ಲಿ ಪ್ರತಿಷ್ಟಾಪಿಸಲಾಯಿತು. ದೇವಾಲಯದ ಸುತ್ತ ರಥವನ್ನು ಭಕ್ತರು ಎಳೆದು ಭಕ್ತಿ ಮೆರೆದರು. ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಜಿಲ್ಲೆ, ಹೊರಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಹಣ್ಣು ಜವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಭಾರತೀಪುರ ಗ್ರಾಮದಲ್ಲಿ ಶ್ರೀಲಕ್ಷ್ಮೀದೇವಿ ಅಮ್ಮನವರನ್ನು ಪೂಜಿಸಿ ರಥ ಎಳೆಯುವ ಮೂಲಕ ಸುಸಂಪನ್ನವಾಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೂವಿನ ತೇರಿನ ಉತ್ಸವ ಅಂಗವಾಗಿ ಮನೆ ಮುಂದೆ ತಳಿರು ತೋರಣ, ಬಣ್ಣ ಬಣ್ಣದ ರಂಗೋಲಿ ಚಿತ್ರ ಬಿಡಿಸಲಾಗಿತ್ತು. ಭಕ್ತರು ಬಾಯಿಬೀಗ ಧರಸಿಕೊಂಡು ರಥೋತ್ಸವದಲ್ಲಿ ಭಾಗಿಯಾಗಿ ಹರಕೆಯನ್ನು ದೇವಿಗೆ ಸಮರ್ಪಿಸಿದರು. ನವಜೋಡಿಗಳು, ಮಕ್ಕಳು ವಿವಿಧ ಬಣ್ಣದ ಧ್ವಜಪತಾಕೆ, ಹೂವಿನಿಂದ ಅಲಂಕರಿಸಲಾಗಿದ್ದ ರಥದ ಕಳಸಕ್ಕೆ ಹಣ್ಣುದವನ ಎಸೆಯಲು ತುದಿಗಾಲಲ್ಲಿ ನಿಂತಿದ್ದರು.

ಇದಕ್ಕೂ ಮುನ್ನ ಗ್ರಾಮದ ರಂಗಸ್ಥಳದಲ್ಲಿ ರಂಗದ ಹಬ್ಬದ ಸಲುವಾಗಿ ರಂಗಕುಣಿತ ನಡೆಯಿತು. ತಮಟೆ ನಾದಕ್ಕೆ ತಕ್ಕಂತೆ ಹಿರಿಯರು, ಯುವಕರು, ಮಕ್ಕಳು ಗೆಜ್ಜೆ ಕಟ್ಟಿರಂಗದ ಕುಣಿತದ ಹೆಜ್ಜೆ ಹಾಕಿದರು. ರಥೋತ್ಸವದಲ್ಲಿ ಹರಕೆ ಒತ್ತು ಭಕ್ತರು ಸಿಡಿ ಹಾಯ್ದು ಪುನೀತರಾದರು.

ಲಕ್ಷ್ಮೀದೇವಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿ ರಥದಲ್ಲಿ ಪ್ರತಿಷ್ಟಾಪಿಸಲಾಯಿತು. ದೇವಾಲಯದ ಸುತ್ತ ರಥವನ್ನು ಭಕ್ತರು ಎಳೆದು ಭಕ್ತಿ ಮೆರೆದರು. ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಜಿಲ್ಲೆ, ಹೊರಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಹಣ್ಣು ಜವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಅನ್ನಪ್ರಸಾದ ಏರ್ಪಡಿಸಲಾಗಿತ್ತು. ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು ಇದ್ದರು.

ಚಿಕ್ಕತಾಯಮ್ಮ, ದೊಡ್ಡತಾಯಮ್ಮ ದೇವಿಗೆ ರವೀಂದ್ರ ಶ್ರೀಕಂಠಯ್ಯ ಪೂಜೆ

ಶ್ರೀರಂಗಪಟ್ಟಣ: ತಾಲೂಕಿನ ಪಿ.ಹೊಸಹಳ್ಳಿಯಲ್ಲಿ ನಡೆದ ಚಿಕ್ಕತಾಯಮ್ಮ ಹಾಗೂ ದೊಡ್ಡತಾಯಮ್ಮ ದೇವಿ ಗ್ರಾಮದೇವತೆ ಹಬ್ಬದಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.

ಚಿಕ್ಕತಾಯಮ್ಮ ಹಾಗೂ ದೊಡ್ಡತಾಯಮ್ಮ ದೇವಿ ಮೂರ್ತಿಯನ್ನು ಗ್ರಾಮದ ಗರಡಿ ಮನೆಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಜೃಂಬಣೆಯಿಂದ ದೇವಿ ಆರಾಧನೆ ಮಾಡಿದರು. ಈ ವೇಳೆ ಮಾಜಿ ಗ್ರಾಪಂ ಅಧ್ಯಕ್ಷ ವಾಸಣ್ಣ, ಜೆಎನ್‌ರೈಸ್ ಇಂಡಸ್ಟ್ರೀಸ್ ಮಾಲೀಕರಾದ ಉಮೇಶ್, ಜೆಡಿಎಸ್ ಮುಖಂಡ ಪಡಪ್ಪರ ವೆಂಕಟೇಶ್, ವಿವೇಕ್, ಹೊನ್ನೇಗೌಡ ಸೇರಿದಂತೆ ಗ್ರಾಮಸ್ಥರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...