ರಾಘವೇಂದ್ರ ಹೆಬ್ಬಾರ
ಅಬ್ದುಲ್ ರೆಹಮಾನ್ ಅವರು ಅಮೆರಿಕ ಸೆನೆಟ್ ಪ್ರವೇಶಿಸುತ್ತಲೇ ಅವರು ಭಟ್ಕಳ ಮೂಲದ ಡಾ. ಸಾರಾ ಜುಕಾಕೊ ಅವರನ್ನು ವರಿಸಿದ್ದರು ಎನ್ನುವುದು ಸಂತಸಕ್ಕೆ ಕಾರಣವಾಗಿದೆ. ಸಾರಾ ಜುಕಾಕೊ ಅವರು ಮೈಸೂರು ಸರ್ಕಾರದಲ್ಲಿ ಸಚಿವರಾಗಿದ್ದ ಜೆ.ಎಚ್. ಶಂಶುದ್ಧೀನ್ ಅವರ ಮೊಮ್ಮಗಳು ಎನ್ನುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ.
ಮೂಲಗಳ ಪ್ರಕಾರ ನಿವೃತ್ತರಾಗುತ್ತಿರುವ ಡೆಮಾಕ್ರಟಿಕ್ ಸೆನೆಟರ್ ಗ್ಯಾರಿ ಪೀಟರ್ಸ್ ತೆರವುಗೊಳಿಸಿದ ಸ್ಥಾನಕ್ಕೆ ಎಲ್- ಸಯೀದ್ ಆಯ್ಕೆಯಾಗಿದ್ದಾರೆ. ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಈ ಮಧ್ಯಂತರ ಚುನಾವಣೆಯಲ್ಲಿ ಅವರು ನಿರ್ಣಾಯಕ ಗೆಲುವು ಸಾಧಿಸಿದ್ದಾರೆ.ಈಜಿಫ್ಟಿನಿಂದ ವಲಸೆ ಬಂದ ದಂಪತಿಗಳ ಪುತ್ರರಾದ ಎಲ್- ಸಯೀದ್, ತಮ್ಮ ಚುನಾವಣಾ ಪ್ರಚಾರದಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ, ರಾಜಕೀಯದಲ್ಲಿ ಕಾರ್ಪೊರೇಟ್ ಪ್ರಭಾವವನ್ನು ಕಡಿಮೆ ಮಾಡುವುದು ಮತ್ತು ಏರುತ್ತಿರುವ ಜೀವನ ವೆಚ್ಚವನ್ನು ನಿಯಂತ್ರಿಸುವಂತಹ ವಿಷಯಗಳಿಗೆ ಆದ್ಯತೆ ನೀಡಿದ್ದರು. ಇವರ ಗೆಲುವು ಕರ್ನಾಟಕದ ಭಟ್ಕಳದಲ್ಲಿರುವ ಜುಕಾಕೋ ಕುಟುಂಬದವರಲ್ಲಿ ಮತ್ತು ಭಟ್ಕಳಿಗರಲ್ಲಿ ವ್ಯಾಪಕ ಸಂತಸ ತಂದಿದೆ.
ಅಮೆರಿಕ ಸೆನೆಟ್ ಗೆ ಆಯ್ಕೆಯಾದ ಅಬ್ದುಲ್ ರೆಹಮಾನ್ ಪತ್ನಿ ಡಾ. ಸಾರಾ ಅವರು ಡಾ. ತಯೇಬ್ ಜುಕಾಕೋ ಅವರ ಪುತ್ರಿ. ಡಾ. ತಯೇಬ್ ಅವರು ಮೂತ್ರಪಿಂಡ ರೋಗ ತಜ್ಞರಾಗಿದ್ದು(ನೆಫ್ರಾಲಜಿಸ್ಟ್). ೧೯೭೬ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದರು. ವಿದೇಶದಲ್ಲಿ ಕೆಲಸ ಮಾಡಿದ ನಂತರ ೧೯೮೦ರ ದಶಕದಲ್ಲಿ ಅವರು ಅಮೆರಿಕಕ್ಕೆ ತೆರಳಿ, ಅಲ್ಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ರೂಪಿಸಿಕೊಂಡರು. ಸಾರಾ ಅಮೆರಿಕದಲ್ಲಿಯೇ ಬೆಳೆದಿದ್ದರೂ, ಅವರ ತಂದೆ ತಮ್ಮ ಮಕ್ಕಳಿಗೆ ತಮ್ಮ ಮೂಲ ನೆಲೆಯೊಂದಿಗೆ ಸಂಪರ್ಕವಿರಲಿ ಎಂಬ ಉದ್ದೇಶದಿಂದ, ಅವರು ಆಗಾಗ ಭಟ್ಕಳ ಮತ್ತು ಬೆಂಗಳೂರಿಗೆ ಭೇಟಿ ನೀಡುವಂತೆ ನೋಡಿಕೊಂಡಿದ್ದರು. ಜುಕಾಕು ಕುಟುಂಬದ ಹಲವು ಸದಸ್ಯರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಡಾ. ಸಾರಾ ಅವರ ಕುಟುಂಬವು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುತ್ತಿದೆ.
ಭಟ್ಕಳದೊಂದಿಗೆ ಸಂಪರ್ಕ: ಸುಮಾರು ಏಳು ವರ್ಷಗಳ ಹಿಂದೆ ಅವರು ಕುಟುಂಬದ ಇತರ ಸದಸ್ಯರೊಂದಿಗೆ ಕೊನೆಯ ಬಾರಿಗೆ ಭಟ್ಕಳಕ್ಕೆ ಭೇಟಿ ನೀಡಿದ್ದರು ಎನ್ನುವುದನ್ನು ಸ್ಮರಿಸುತ್ತಾರೆ.