ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಪಂ ಮಾಜಿ ಸದಸ್ಯ ಮಹದೇವ ಮಾತನಾಡಿ, ಶತಶತಮಾನಗಳಿಂದ ನಮ್ಮ ಪೂರ್ವಿಕರು ಭಾವೈಕ್ಯತೆ ಬೆಸೆಯುವ ಸಿಡಿ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದನ್ನು ನಾವು ಮುಂದುವರಿದುಕೊಂಡು ಬರುತ್ತಿದೆ ಎಂದರು.
ಗ್ರಾಮಗಳಲ್ಲಿ ಹಬ್ಬ-ಉತ್ಸವ- ಆಚರಣೆಗಳು ನಡೆದರೆ ದೂರದ ಬಂಧು ಬಳಗ ಒಂದೆಡೆ ಸೇರಿ ಮನೆ ಮಂದಿಗಳಲ್ಲ ಸಂಭ್ರಮ, ಸಡಗರ ಉಂಟಾಗುತ್ತದೆ. ಜೊತೆಗೆ ಯೋಗಕ್ಷೇಮ ವಿಚಾರಿಸಿದಾಗ ಸಂಬಂಧಗಳು ಮತ್ತಷ್ಟು ಗಟ್ಟಿಕೊಳ್ಳುತ್ತವೆ. ಹೊಸ ನಂಟು ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಮಳವಳ್ಳಿ ಸಿಡಿ ಉತ್ಸವ ನಡೆದ ನಂತರ ಇಲ್ಲಿ ಸಿಡಿ ಉತ್ಸವ ಮತ್ತು ತಮಟೆ ನಗಾರಿ ಮೇಳದೊಂದಿಗೆ ತಂಬಿಟ್ಟಿನ ಆರತಿ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಿಡಿ ಉತ್ಸವದಲ್ಲಿ ಮುಖಂಡರಾದ ಯಜಮಾನ್ ಕಾಳಪ್ಪ, ಕರಿಪುಟ್ಟಯ್ಯ, ಕೆ.ಎಸ್.ಸಿದ್ದರಾಜು, ಚಂಡಿಕಾಳಯ್ಯ, ಸಣ್ಣಪ್ಪ, ಎಂ.ಪಿ.ಸಿದ್ದಯ್ಯ(ಕಾದಲ್‌ಸಿದ್ದಪ್ಪ), ಅರ್ಚಕ ಮಹದೇವಸ್ವಾಮಿ, ಪ್ರಸನ್ನ, ಅವಿನಾಶ್, ಮಾದೇಶ, ಸಿದ್ದರಾಜು, ಶ್ರೀಧರ್, ವಿಜಯ್, ಶಿವಮಾದ್ ಮತ್ತು ಮಹಿಳೆಯರು ಮತ್ತಿತರರಿದ್ದರು.