ಕನ್ನಡಪ್ರಭ ವಾರ್ತೆ ಅಂಕೋಲಾನಮ್ಮ ದೇಶದ 3 ಲಕ್ಷಕ್ಕಿಂತಲೂ ಹೆಚ್ಚಿನ ಸಂಜೀವಿನಿ ಸ್ವಸಹಾಯ ಸಂಘಗಳಲ್ಲಿ ನಮ್ಮ ತಾಲೂಕಿನ ಭಾವಿಕೇರಿ ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಒಕ್ಕೂಟ ಕೌಶಲ್ಯ ಕರ್ನಾಟಕದಲ್ಲಿ ಪ್ರಥಮ ಬಹುಮಾನಗಳಿಸಿದೆ. ಒಕ್ಕೂಟ ನಾಡಿಗೆ ಮಾದರಿಯಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.ಭಾವಿಕೇರಿಯ ಸ್ಫೂರ್ತಿ ಸಂಜೀವಿನಿ ಒಕ್ಕೂಟದಿಂದ ಬುಧವಾರ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಗೌರವದ ಹಿಂದಿನ ಶಕ್ತಿ ಬೀರಮ್ಮ ನಾಯಕ. ಮಹಿಳೆ ಈ ಸಮಾಜದ ಹೆಮ್ಮೆ ಎನ್ನುವಂತೆ ರಾಜ್ಯ ದೇಶ ಮಟ್ಟದಲ್ಲಿ ಈ ಗ್ರಾಮದ ಹಿರಿಮೆಗೆ ಪಾತ್ರರಾಗುವಲ್ಲಿ ವಿಶೇಷವಾಗಿ ಎಲ್ಲರ ಶ್ರಮವಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಪದ್ಮಾ ನಾಯಕ ಮಾತನಾಡಿ, ಇತ್ತೀಚಿಗೆ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿನಿಯರ ಶ್ರಮ ಹೆಚ್ಚಿರುವುದರಿಂದ ಅವರು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.ಮುಖ್ಯ ಅತಿಥಿಗಳಾದ ಬೇಲೆಕೇರಿ ಐಓಬಿ ಬ್ಯಾಂಕಿನ ವ್ಯವಸ್ಥಾಪಕ ಗಣೇಶ, ಅಂಕೋಲಾ ಅರ್ಬನ್ ಬ್ಯಾಂಕಿನ ನಿರ್ದೇಶಕ ಉದಯ ನಾಯಕ, ಭಾವಿಕೇರಿ ಗ್ರಾಪಂ ಅಧ್ಯಕ್ಷೆ ದೀಪಾ ನಾಯಕ, ಸಂಜೀವಿನಿ ಅಧಿಕಾರಿ ಗಣೇಶ, ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಶಾರದಾ ಭಟ, ಪದ್ಮಾವತಿ ಗೌಡ, ಸುಭಾಷ್ ಕಾರೆಬೈಲ್ ಮಾತನಾಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾಹಾದೇವ ಗೌಡ, ಸವಿತಾ ಹಳನಕರ, ವೈಶಾಲಿ ಹಾರವಾಡಾ, ಶೀಲಾ ಲೋಗೋ, ಸಂಜೀವಿನಿ ಸಂಸ್ಥೆಯ ಅಧಿಕಾರಿಗಳಾದ ತನುಜಾ, ರಂಜಿತ್, ಸಮೀಕ್ಷಾ, ಒಕ್ಕೂಟದ ಜ್ಯೋತಿ ಕುಚನಾಡ, ನೂರಜಾನ್ ಉಪಸ್ಥಿತರಿದ್ದರು.ಸ್ಫೂರ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬೀರಮ್ಮ ನಾಯಕ ವರದಿ ವಾಚಿಸಿದರು. ಸಂಜೀವಿನಿ ವಲಯ ಮೇಲ್ವಿಚಾರಕ ಗುರುರಾಜ್ ನಾಯ್ಕ ಪ್ರಾಸ್ತವಾಕವಾಗಿ ಮಾತನಾಡಿದರು. ಪ್ರೌಢಶಾಲಾ ಶಿಕ್ಷಕಿ ನೇತ್ರಾವತಿ ಬಿ.ಎಚ್. ನಿರೂಪಿಸಿದರು. ಶೀಲಾ ಗುನಗಾ ಸ್ವಾಗತಿಸಿದರು. ಶೋಭಾ ನಾಯ್ಕ ವಂದಿಸಿದರು. ಸನ್ಮಾನ:ಐಓಬಿ ಬ್ಯಾಂಕಿನ ವ್ಯವಸ್ಥಾಪಕ ಗಣೇಶ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಪದ್ಮಾ ನಾಯಕ, ಪತ್ರಕರ್ತ ಸುಭಾಷ್ ಕಾರೆಬೈಲ್, ಪದ್ಮವತಿ ಗೌಡ, ಸವಿತಾ ಹಳನಕರ, ಶಾರದಾ ಭಟ್, ವೈಶಾಲಿ ಹಾರವಾಡ, ಶೀಲಾ ಲೋಗೋ ಅವರನ್ನು ಗೌರವಿಸಲಾಯಿತು.