ಗದಗ: ಅವಳಿ ನಗರದ ಗ್ರಾಹಕರನ್ನು ವಂಚಿಸಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಹಾಗೂ ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ನೀಡುತ್ತಿರುವ ಏಜೆನ್ಸಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಸ್ಲಂ ಜನಾಂದೋಲನ- ಕರ್ನಾಟಕ ಹಾಗೂ ಜಿಲ್ಲಾ ಸ್ಲಂ ಸಮಿತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಹಿಳಾ ಸಮಿತಿ ಅಧ್ಯಕ್ಷೆ ಪರವೀನಬಾನು ಹವಾಲ್ದಾರ, ಅಶೋಕ ಕುಸಬಿ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಪರವೀನಬಾನು ಹವಾಲ್ದಾರ, ಪುಷ್ಪಾ ಬಿಜಾಪೂರ, ವಿಶಾಲಕ್ಷಿ ಹಿರೇಗೌಡ್ರ, ಮಕ್ತುಮಸಾಬ ಮುಲ್ಲಾನವರ, ಶಂಕ್ರಪ್ಪ ರೋಣದ, ಆನಂದಪ್ಪ ಮೂಲಿಮನಿ ಹಾಗೂ ಮುಂತಾದವರು ಇದ್ದರು.
ಗದಗ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿ ಹೋಟೆಲ್‌ಗಳ ಮಾಲೀಕರು ಪರದಾಡುತ್ತಿದ್ದು, ನಗರದ ಪಂಡಿತ ಪುಟ್ಟರಾಜ ಬಸ್ ನಿಲ್ದಾಣದಲ್ಲಿರುವ ಕೆಎಸ್‌ಆರ್‌ಟಿಸಿ ಕ್ಯಾಂಟಿನ್‌ನ್ನು ಗುರುವಾರ ಬಂದ್ ಮಾಡಲಾಗಿದೆ.ಗ್ಯಾಸ್ ಸಿಲಿಂಡರ್ ಸಿಗದೆ ಮಾಲೀಕರು ಕಂಗಾಲಾಗಿದ್ದು, ಗ್ಯಾಸ್ ಸಿಲಿಂಡರ್ ಇಲ್ಲದೆ ಊಟ, ಉಪಹಾರ ತಯಾರಿಸಲು ಸಾಧ್ಯವಿಲ್ಲ ಸಾಲದಕ್ಕೆ ಕಾರ್ಮಿಕರಿಗೆ ನಿತ್ಯ ಸಂಬಳ, ವಿದ್ಯುತ್ ಬಿಲ್ ಸೇರಿದಂತೆ ದಿನಕ್ಕೆ ಸಾವಿರಾರು ರುಪಾಯಿ ಹಾನಿಯಾಗುತ್ತದೆ ಎಂದು ಮಾಲೀಕರು ತಮ್ಮ ನೋವನ್ನು ವ್ಯಕ್ತಪಡಿಸಿದರು.ಬಸ್ ನಿಲ್ದಾಣದಲ್ಲಿನ ಕೆಎಸ್‌ಆರ್‌ಟಿಸಿ ಕ್ಯಾಂಟಿನ್ ಬಂದ್ ಆಗಿದ್ದರಿಂದ ನೂರಾರು ಪ್ರಯಾಣಿಕರು ಊಟ, ಉಪಹಾರಕ್ಕಾಗಿ ಪರದಾಡಿದರು.
ಸೌದೆ ಒಲೆಯತ್ತ: ಯುದ್ಧದ ಕಾರ್ಮೋಡ ಜಿಲ್ಲಾದ್ಯಂತ ಹೋಟೆಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತಿವೆ. ನಗರದ ಮಾವಳ್ಳಿ ಬಿರಿಯಾನಿ ಹೋಟೆಲನವರು ಎಲ್ಪಿಜಿ ಗ್ಯಾಸ್ ಸಿಗದೇ ಕಟ್ಟಿಗೆ ಬಳಸಿ ಉಪಾಹಾರ ತಯಾರು ಮಾಡುತ್ತಿದ್ದಾರೆ.ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯಿಂದಾಗಿ ಜಿಲ್ಲೆಯ ಹೋಟೆಲ್ ಉದ್ಯಮಿಗಳು ಅನಿವಾರ್ಯವಾಗಿ ಸೌದೆ ಒಲೆಗಳತ್ತ ಮುಖ ಮಾಡುತ್ತಿದ್ದಾರೆ.